spot_img
Monday, March 16, 2026
spot_img

ನ. 01ಕ್ಕೆ ಭಾಗವತರು ಚಂದ್ರಕಾಂತ ರಾವ್, ಮೂಡುಬೆಳ್ಳೆಗೆ ಡಾ। ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ

ಜನಪ್ರತಿನಿಧಿ (ಕುಂದಾಪುರ) : ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಕುಂದಾಪುರ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ್, ಕಾಲೇಜಿನ ‘ಆವರ್ತ’ ಯಕ್ಷಗಾನ ಸಂಘದ ಸಂಯುಕ್ತ ಆಶ್ರಯದಲ್ಲಿ 49ನೇ ವರ್ಷದ ರಾಜ್ಯೋತ್ಸವ ತಾಳಮದ್ದಲೆ ಹಾಗೂ “ಡಾ। ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ” ಕಾರ್ಯಕ್ರಮ ನವೆಂಬರ್  01 ಶುಕ್ರವಾರ ಅಪರಾಹ್ನ 2-00 ಗಂಟೆಗೆ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬಡಗುತಿಟ್ಟು ಯಕ್ಷಗಾನದ ಭರವಸೆಯ ಯುವ ಭಾಗವತರು ಚಂದ್ರಕಾಂತ ರಾವ್, ಮೂಡುಬೆಳ್ಳೆ ಅವರಿಗೆ “ಡಾ। ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ” ನೀಡಲಾಗುವುದು ಮತ್ತು ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ “ಶರಸೇತು ಬಂಧ” ನಡೆಯಲಿದೆ.

ತಾಳಮದ್ದಲೆಯಲ್ಲಿ ಭಾಗವತರಾಗಿ ಚಂದ್ರಕಾಂತ ರಾವ್, ಮೂಡುಬೆಳ್ಳೆ, ಮದ್ದಲೆಯಲ್ಲಿ ಎನ್. ಜಿ. ಹೆಗಡೆ, ಯಲ್ಲಾಪುರ, ಚಂಡೆಯಲ್ಲಿ ರಾಮಕೃಷ್ಣ, ಮಂದಾರ್ತಿ ಹಾಗೂ ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಟಾರ್, ಹರೀಶ್ ಬಳಂತಿಮೊಗರು, ಪವನ್ ಕಿರಣ್ಕೆರೆ ಭಾಗವಹಿಸಲಿದ್ದಾರೆ.

ಸಭಾಧ್ಯಕ್ಷತೆಯನ್ನು ಭಂಡಾ‌ರ್ ಕಾರ್ಸ್ ಕಾಲೇಜು, ಕುಂದಾಪುರದ ಆಡಳಿತ ಮಂಡಳಿಯ  ಡಾ. ಹೆಚ್. ಶಾಂತಾರಾಮ್ ವಹಿಸಲಿದ್ದು, ಅಭಿನಂದನಾ ಭಾಷಣವನ್ನು ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಹೆಗ್ಡೆ ಪಳ್ಳಿ ಮಾಡಲಿದ್ದಾರೆ. ಕಾಲೇಜಿನ ಹಿರಿಯ ವಿಶ್ವಸ್ಥರಾದ ಶಾಂತಾರಾಮ ಪ್ರಭು ಸೇರಿ ವಿಶ್ವಸ್ಥ ಮಂಡಳಿಯ ಸದಸ್ಯರು, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದ್ವಯರು, ಆಡಳಿತ ಮಂಡಳಿ ಸೇರಿ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!