Sunday, October 13, 2024

ಸೆ.29ರಂದು ವಂಡ್ಸೆ ಆತ್ರಾಡಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

ವಂಡ್ಸೆ: ರೋಟರಿ ಕ್ಲಬ್ ಕುಂದಾಪುರ, ವಿಜಯ ಮಕ್ಕಳ ಕೂಟ ಶಾಲೆ ಆತ್ರಾಡಿ, ಮಾತೃಭೂಮಿ ಯುವ ಸಂಘಟನೆ ಆತ್ರಾಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ ತಜ್ಞ ದಂತ ವೈದ್ಯರಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಸೆಪ್ಟೆಂಬರ್ 29 ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ವಂಡ್ಸೆಯ ಆತ್ರಾಡಿ ವಿಜಯ ಮಕ್ಕಳ ಕೂಟ ಶಾಲಾ ವಠಾರದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ ಮತ್ತು ಸಲಹೆ, ಹುಳುಕು ಹಲ್ಲುಗಳನ್ನು ಮದ್ದು ಸಿಮೆಂಟಿನಿಂದ ತುಂಬಿಸುವಿಕೆ ಮತ್ತು ಬೆಳ್ಳಿಯ ಇತರ ವಸ್ತುಗಳಿಂದ ಹಲ್ಲು ಕುಳಿಗಳನ್ನು ಶಾಶ್ವತವಾಗಿ ತುಂಬಿಸುವಿಕೆ (ದಂತ ವೈದ್ಯಕೀಯ ದೃಷ್ಟಿಯಲ್ಲಿ ಸೂಕ್ತ ಕಂಡರೆ),
ಹಲ್ಲುಗಳನ್ನು ಸ್ವಚ್ಛಗೊಳಿಸುವಿಕೆ, ಉಳಿಸಲಾಗದ ಹಲ್ಲುಗಳನ್ನು ಕೀಳಿಸುವುದು, ಬಾಯಿಯಲ್ಲಿರಬಹುದಾದ ಇತರ ಸಣ್ಣ ಪುಟ್ಟ ಗಡ್ಡೆ ಯಾ ನ್ಯೂನತೆಗಳಿಗೆ ಸರಳ ಶಸ್ತ್ರ ಚಿಕಿತ್ಸೆ ಒದಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!