Sunday, October 13, 2024

ಸ.ಹಿ.ಪ್ರಾ. ಶಾಲೆ ಕೊಡ್ಲಾಡಿ-ಬಾಂಡ್ಯದಲ್ಲಿ “ಆಸಾಡ್ಸ್ವಾಣಿ” ಅಮೃತೋತ್ಸವ 2024 | 296 ಬಗೆಯ ಜನಪದೀಯ ತಿನಿಸುಗಳ ಪ್ರದರ್ಶನ

ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡ್ಲಾಡಿ-ಬಾಂಡ್ಯ ಹಾಗೂ ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿ ಇವರ ಜಂಟಿ ಆಶ್ರಯದಲ್ಲಿ ಸೆ.18 ಬುಧವಾರದಂದು, “ಆಸಾಡ್ಸ್ವಾಣಿ” ಅಮೃತೋತ್ಸವ 2024 ಎಂಬ ವಿನೂತನ ಕಾರ್ಯಕ್ರಮ ನಡೆಯಿತು.

ಆಷಾಡ ಮತ್ತು ಶ್ರಾವಣ ಮಾಸದ ತಿನಿಸುಗಳ ಪರಿಚಯ ಹಾಗೂ ಮಹತ್ವವನ್ನು ತಿಳಿಸುವುದಲ್ಲದೆ, ಅಳಿದು ಉಳಿದಿರುವ ಸಸ್ಯಾಮೃತಗಳು ನಮ್ಮೊಂದಿಗೆ ಮರೆಯಾಗದೆ, ಮುಂದಿನ ಪೀಳಿಗೆಗೆ ರವಾನೆಯಾಗಬೇಕು ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ.ಹಿ.ಪ್ರಾ ಶಾಲೆ ಕೊಡ್ಲಾಡಿ ಇಲ್ಲಿಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ರತ್ನಾಕರ್ ಆಚಾರ್ಯ ವಹಿಸಿದ್ದರು.

ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಇವರು ಆಷಾಡ-ಶ್ರಾವಣ ಮಾಸದ ತಿನಿಸುಗಳನ್ನು ಮಡಿಕೆಯಿಂದ ತೆಗೆದು ಬಾಳೆಲೆಯ ಮೇಲೆ ಬಡಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಂಡ್ಸೆ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಶೆಟ್ಟಿ, ಕರ್ಕುಂಜೆ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ರವಿಚಂದ್ರ, ಸ.ಹಿ.ಪ್ರಾ ಶಾಲೆ ಕೊಡ್ಲಾಡಿ ಇಲ್ಲಿಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷ ಪ್ರದೀಪ್ ಶೆಣೈ, ಸ.ಹಿ.ಪ್ರಾ ಶಾಲೆ ಕೊಡ್ಲಾಡಿ ಇಲ್ಲಿಯ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಅಳಿವಿನಂಚಿನಲ್ಲಿದ್ದು, ಬದುಕಿನ ಮುಖ್ಯವಾಹಿನಿಯಿಂದ ಮರೆಯಾಗುತ್ತಿರುವ ಸುಮಾರು 296 ಬಗೆಯ ವಿವಿಧ ಜನಪದೀಯ ತಿನಿಸು ಹಾಗೂ ಖಾದ್ಯಗಳನ್ನು ಪೋಷಕರ ನೆರವಿನಿಂದ ವಿದ್ಯಾರ್ಥಿಗಳೇ ತಯಾರಿಸಿ ತಂದಿದ್ದರು. ಈ ಎಲ್ಲಾ ಖಾದ್ಯಗಳನ್ನು ಎಲ್ಲರೂ ವೀಕ್ಷಿಸಿ, ರುಚಿಯನ್ನು ಸವಿದರು.

ಕಳೆದ ಹಲವು ವರ್ಷಗಳಿಂದ ಈ ಶಾಲೆಯ ವಿದ್ಯಾರ್ಥಿಗಳಿಗೆ ಶುಚಿ ರುಚಿಯಾದ ಅಡುಗೆ ತಯಾರಿಸಿ ಉಣಬಡಿಸುತ್ತಿರುವ ಅಡುಗೆ ಸಿಬ್ಬಂದಿಯವರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಜಯಲಕ್ಷ್ಮಿ ಹಾಗೂ ಶ್ರೀಮತಿ ಗುಲಾಬಿ ಇವರನ್ನು ಸನ್ಮಾನಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಶಿಕ್ಷಕ ಸುಕುಮಾರ್ ಶೆಟ್ಟಿ ವಂದಿಸಿದರು.ಸಹ ಶಿಕ್ಷಕಿ ಸ್ಮಿತಾ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಶಿಕ್ಷಕವೃಂದದವರು ಕಾರ್ಯಕ್ರಮಕ್ಕೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!