Monday, September 9, 2024

ಗಂಡಹೆಂಡತಿ ಜಗಳ: ಪತ್ನಿ ತಲೆಗೆ ಕತ್ತಿಯಿಂದ ಹಲ್ಲೆ ಗೈದ ಪತಿ: ಪತ್ನಿ ಸಾವು

ಸಾಲಿಗ್ರಾಮ, ಆ.23: ಗಂಡ ಹೆಂಡತಿ ಜಗಳ ತಾರಕಕ್ಕೇರಿ ಪತಿಯ ಏಟಿಗೆ ಪತ್ನಿ ಸಾವನ್ನಪ್ಪಿದ ಘಟನೆ ಆ.23 ಬೆಳಿಗ್ಗೆ 5 ಗಂಟೆ ಸುಮಾರಿಗೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಪಡುಹೋಳಿ ಎಂಬಲ್ಲಿ ನಡೆದಿದೆ.

ಪತ್ನಿಯನ್ನು ಕೊಲೆಗೈದ ಆರೋಪಿ ಪತಿಯನ್ನು ಸಾಸ್ತಾನ ಗುಂಡ್ಮಿಯ ಕಿರಣ್ ಉಪಾಧ್ಯಾಯ (43) ಎಂದು ಗುರುತಿಸಲಾಗಿದೆ. ಮೃತ ಪತ್ನಿ ಮೂಲದ ಜಯಶ್ರೀ (34) ಎಂದು ಗುರುತಿಸಲಾಗಿದೆ.

9 ತಿಂಗಳ ಹಿಂದಷ್ಟೇ ಕಿರಣ ಉಪಾಧ್ಯಾಯ ಹಾಗೂ ಜಯಶ್ರೀ ವಿವಾಹ ನಡೆದಿತ್ತು. ಕಳೆದ ಮೂರು ತಿಂಗಳಿನಿಂದ ದಂಪತಿಗಳು ಸಾಲಿಗ್ರಾಮ ಕಾರ್ಕಡ ಪಡುಹೋಳಿಯ ಅಂಗನವಾಡಿ ಸಮೀಪ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ಪತ್ನಿ ಜಯಶ್ರೀಗೆ ಮೊಬೈಲ್ ನಲಿ ರೀಲ್ಸ್ ಮಾಡುವ ವಿಪರೀತ ಚಟವಿದ್ದು ಅನ್ಲೈಲ್ ವ್ಯವಹಾರದಲ್ಲಿ ಕೂಡಾ ನಿರತಳಾದ್ದಳು ಎನ್ನಲಾಗಿದೆ. ಈ ವಿಷಯದಲ್ಲಿ ನಿತ್ಯವೂ ಇವರಿಬ್ಬರ ನಡುವೆ ಜಗಳವಾಗುತ್ತಿದ್ದು ಗುರುವಾರ ರಾತ್ರಿಯೇ ಜಗಳ ಆರಂಭವಾಗಿದ್ದು ಶುಕ್ರವಾರ ಬೆಳಿಗ್ಗೆ ಕೊಲೆಯಲ್ಲಿ ಮುಕ್ತಾಯವಾಗಿದೆ ಎನ್ನಲಾಗಿದೆ. ಆರೋಪಿ ಕಿರಣ್ ಉಪಾದ್ಯ ಕತ್ತಿಯಿಂದ ಪತ್ನಿ ಜಯಶ್ರೀ ತಲೆಗೆ ಹಲ್ಲೆ ಮಾಡಿದ್ದರಿಂದ ಗಂಭೀರ ಗಾಯಗೊಂಡು ಜಯಶ್ರೀ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೋಟ ಪೊಲೀಸ್ ಠಾಣಾ ಎಸ್.ಐ ಸುಧಾ ಪ್ರಭು, ಎ.ಎಸ್.ಐ ಜಯಪ್ರಕಾಶ್, ಗೋಪಾಲ ಪೂಜಾರಿ ಹಾಗೂ ಸಿಬ್ಬಂದಿ ರಾಘವೇಂದ್ರ ಗಾಣಿಗ ಇವರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸ್ ವಿಚಾರಣೆಯ ಬಳಿಕವಷ್ಟೇ ನಿಜ ಸಂಗತಿ ತಿಳಿಯಬೇಕಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!