Wednesday, September 11, 2024

ಕನ್ಯಾಕುಮಾರಿಯಲ್ಲಿ ನಾಟಕ ಪ್ರದರ್ಶಿಸಿ ಎಷ್ಟು ಪೋಲೀಸ್ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ? : ಮೋದಿ ಧ್ಯಾನಕ್ಕೆ ಖರ್ಗೆ ಟೀಕೆ

ಜನಪ್ರತಿನಿಧಿ (ನವದೆಹಲಿ) : ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಹಾಗೂ ಧರ್ಮವನ್ನು ಎಂದಿಗೂ ಒಟ್ಟಿಗೆ ಸೇರಿಸಬಾರದು ಮತ್ತು ನಿಮಗೆ ದೇವರಲ್ಲಿ ನಂಬಿಕೆ ಇದ್ದರೆ ಅದನ್ನು ನಿಮ್ಮ ಮನೆಯಲ್ಲಿ ಮಾಡಿ ಎಂದು ಇಂದು(ಶುಕ್ರವಾರ) ಹೇಳಿದ್ದಾರೆ.

“ರಾಜಕೀಯ ಹಾಗೂ ಧರ್ಮವನ್ನು ಎಂದಿಗೂ ಒಟ್ಟಿಗೆ ಸೇರಿಸಬಾರದು.ಇವೆರಡನ್ನೂ ಪ್ರತ್ಯೇಕ ವಿಷಯಗಳು. ಒಂದು ಧರ್ಮದ ವ್ಯಕ್ತಿ ನಿಮ್ಮೊಂದಿಗೆ ಇರಬಹುದು ಹಾಗೂ ಇನ್ನೊಂದು ಧರ್ಮದ ವ್ಯಕ್ತಿ ನಿಮ್ಮ ವಿರುದ್ಧ ಇರಬಹುದು. ಚುನಾವಣೆಯೊಂದಿಗೆ ಧಾರ್ಮಿಕ ಭಾವನೆಗಳನ್ನು ಲಿಂಕ್ ಮಾಡುವುದು ತಪ್ಪು ಎಂದಿದ್ದಾರೆ.

ಇನ್ನು, ಕನ್ಯಾಕುಮಾರಿಗೆ ಹೋಗಿ ನಾಟಕ ಪ್ರದರ್ಶಿಸಿ ಅದೆಷ್ಟು ಪೋಲೀಸ್ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ? ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು ಇಷ್ಟೊಂದು ಹಣ ಏಕೆ ಪೋಲು ಮಾಡುತ್ತೀರಿ? ಅಲ್ಲಿಗೆ ಹೋಗಿ ನೀವು ಮಾಡುತ್ತಿರುವ ಶೋ-ಆಫ್ ನಿಂದ ದೇಶಕ್ಕೆ ಹಾನಿ ಉಂಟು ಮಾಡಲಿದೆ. ನಿಮಗೆ ದೇವರಲ್ಲಿ ನಂಬಿಕೆ ಇದ್ದರೆ ನಿಮ್ಮ ಮನೆಯಲ್ಲಿ ಮಾಡಿ ಎಂದು ಖರ್ಗೆ ವಾಗ್ದಾಳಿ ಮಾಡಿದ್ದಾರೆ.

ಮೋದಿ ಏನೇ ಹೇಳಲಿ, ದೇಶದ ಜನ ಪ್ರಧಾನಿ ಮೋದಿಯವರ ನಾಯಕತ್ವವನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಜನರು ಅರ್ಥೈಸಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿಷಯವು ಜನರ ಮನಸ್ಸಿನಲ್ಲಿ ಇದೆ ಎಂದು ಖರ್ಗೆ ಹೇಳಿದ್ದಾರೆ.

ಮೋದಿ ಕನ್ಯಾಕುಮಾರಿಯ ಧ್ಯಾನ ಮಂಟಪದಲ್ಲಿ ಇಂದಿನಿಂದ ಧ್ಯಾನ ಆರಂಭಿಸಿದ್ದು, ಜೂನ್ 1ರವರೆಗೆ ಅವರು ತಮ್ಮ ಧ್ಯಾನವನ್ನು ಮುಂದುವರಿಸಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!