Tuesday, October 8, 2024

ಶ್ರೀ ರಾಮ ಭಜನಾ ಮಂದಿರ ಮಂಕಿ-ಗುಜ್ಜಾಡಿ: ನೂತನ ಶ್ರೀರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ

kundapura: ಶ್ರೀ ರಾಮ ಭಜನಾ ಮಂದಿರ ಮಂಕಿ-ಗುಜ್ಜಾಡಿ ಇಲ್ಲಿನ ನೂತನ ಶ್ರೀರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ ಎಪ್ರಿಲ್ 20ರಿಂದ ಎಪ್ರಿಲ್ 22ರ ತನಕ ನಡೆಯಲಿದೆ. ಗುಜ್ಜಾಡಿ ಗ್ರಾಮದ ಮಂಕಿಯಲ್ಲಿ 1989-90ರಲ್ಲಿ ಊರಿನ ಉತ್ಸಾಹಿ ಯುವಕರ ನೇತೃತ್ವದಲ್ಲಿ ಶ್ರೀರಾಮ ಭಜನಾ ಮಂದಿರದ ನಿರ್ಮಾಣ ಆಗಬೇಕು ಎಂಬ ನೆಲೆಯಲ್ಲಿ ಊರಿನ ಹತ್ತು ಸಮಸ್ತರೊಂದಿಗೆ ಚರ್ಚಿಸಿ, ಒಪ್ಪಿಗೆ ಪಡೆದು ತಾತ್ಕಾಲಿಕ ಎಂಬಂತೆ ಹುಲ್ಲಿನ ಸೂರನ್ನು ನಿರ್ಮಿಸಿ ಅದರಲ್ಲಿ ಶ್ರೀರಾಮನ ಭಾವಚಿತ್ರವನ್ನು ಇರಿಸಿ ಅಧಿಕೃತವಾಗಿ ಉದ್ಘಾಟಿಸಲಾಯಿತು. ತದನಂತರ ಪ್ರತೀ ಶನಿವಾರ ಭಜನಾ ಕಾರ್ಯಕ್ರಮ ಹಾಗೂ ಪ್ರತಿನಿತ್ಯ ಪೂಜೆ-ಪುನಸ್ಕಾರಗಳು ನಡೆಯುತ್ತಾ ಬಂದಿದೆ. ಪ್ರತೀ ವರ್ಷ ರಾಮನವಮಿಯಂದು ಅಹೋರಾತ್ರಿ ಭಜನಾ ಕಾರ್ಯಕ್ರಮ, ಕುಣಿತ ಭಜನೆಗಳು ಮತ್ತು ವಿವಿಧ ವಿನೋಧಾವಳಿಗಳು ನಡೆಸುತ್ತ ಬಂದಿದೆ. ಕಾಲ ಕ್ರಮೇಣ ಹುಲ್ಲು ಮಾಡಿನ ರಾಮಮಂದಿರ ಹಂಚಿನ ಮಾಡಿನೊಂದಿಗೆ ಮಾರ್ಪಾಡಾಯಿತು. ಹೀಗೆ ಸಮಗ್ರ ಜೀರ್ಣೋದ್ಧಾರಕ್ಕೆ ಮುಂದಾಗಿ ಕಾರ್ಯಪ್ರವೃತ್ತವಾಗಲಾಯಿತು.

ನೂತನ ರಾಮ ಭಜನಾ ಮಂದಿರದ ಪ್ರತಿಮೆಯ ಪುನರ್ ಪ್ರತಿಷ್ಠಾ ಮಹೋತ್ಸವವು ವೇ.ಮೂ. ಕೃಷ್ಣಮೂರ್ತಿ ಭಟ್ ಮಂಕಿ ಇವರ ನೇತೃತ್ವದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಎ.20ರಂದು ಶನಿವಾರ ಧಾರ್ಮಿಕ ಕಾರ್ಯಕ್ರಮಗಳ ಆರಂಭ, ಎಪ್ರಿಲ್ 21ರಂದು ಆದಿತ್ಯವಾರ ಶ್ರೀ ಗುಹೇಶ್ವರ ದೇವಸ್ಥಾನದಲ್ಲಿ ಪೂಜಾ ವಿಧಿಗಳನ್ನು ಪೂರೈಸಿಕೊಂಡು ನಾಯಕವಾಡಿಯಿಂದ ಭವ್ಯವಾದ ಪುರಮೆರವಣಿಗೆಯ ಮೂಲಕ ಶ್ರೀರಾಮ ದೇವರ ಪ್ರತಿಮೆಯನ್ನು ನೂತನ ಶ್ರೀರಾಮ ಭಜನಾ ಮಂದಿರಕ್ಕೆ ಕರೆತರಲಾಗುವುದು ಪೂರ್ವಾಹ್ನ 8 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು, ಬೆಳಿಗ್ಗೆ 10-41ಕ್ಕೆ ಶ್ರೀರಾಮ ದೇವರ ಪುನರ್ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಮಧ್ಯಾಹ್ನ 12-30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 1ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ 7 ಆಹ್ವಾನಿತ ತಂಡಗಳ ಸ್ಪರ್ಧಾತ್ಮಕ ಕುಣಿತ ಭಜನೆ ಕಾರ್ಯಕ್ರಮ, ಎ.22ನೇ ಸೋಮವಾರ ಬೆಳಿಗ್ಗೆ 6 ಕಾಯಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ಸಭೆ, ಮಧ್ಯಾಹ್ನ 2.30ಕ್ಕೆ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಪ್ರದರ್ಶನ ಜ್ವಾಲಾ ಜಾಹ್ನವಿ ನಡೆಯಲಿದೆ. ಸಂಜೆ 7 ಗಂಟೆಗೆ ಸ್ಪಂದನಾ ಕಲಾ ತಂಡದವರಿಂದ ಎಲ್ಲಾದಕ್ಕೂ ಟೈಮ್ ಬರ್‍ಕ್ ನಗೆ ನಾಟಕ ಪ್ರದರ್ಶನಗೊಳ್ಳಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!