Tuesday, October 8, 2024

ಚೀನಾ ಅತಿಕ್ರಮಣ ವಿಚಾರದಲ್ಲಿ ಹೇಡಿ ಮೋದಿ ದೇಶದ ಜನತೆಯಿಂದ ಸತ್ಯವನ್ನು ಮುಚ್ಚಿಟ್ಟು ದ್ರೋಹ ಎಸಗಿದ್ದಾರೆ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ನೆರೆಯ ರಾಷ್ಟ್ರವಾದ ಚೀನಾ ಭಾರತದ ಗಡಿಭಾಗಗಳನ್ನು ಅತಿಕ್ರಮಿಸಿ ಭಾರತದ ನೆಲದಲ್ಲಿ ಸೇನಾ ನೆಲೆಗಳು, ಬಂಕರ್‌ಗಳು, ಹಳ್ಳಿಗಳನ್ನು ನಿರ್ಮಿಸಿದ್ದರೂ ಸಹ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಕಾರವೆತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅವರು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಕನ್ನಡದ ಪ್ರತಿಷ್ಠಿತ ಪತ್ರಿಕೆಯೊಂದು ʼಲಡಾಖ್‌ ನೆಲವನ್ನು ಸರ್ಕಾರ ಚೀನಾಕ್ಕೆ ಬಿಟ್ಟುಕೊಟ್ಟಿತೇ ?ʼ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವಿಶೇಷ ಸಮಗ್ರ ವರದಿಯನ್ನು ಉಲ್ಲೇಖಿಸಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ತಮ್ಮನ್ನು ವಿಶ್ವಗುರು, ಜಾಗತಿಕ ನೇತಾರ ಎಂದು ಬಿಂಬಿಸಿಕೊಳ್ಳುವ ಮೋದಿಯವರು ಲಡಾಖ್‌ನಲ್ಲಿ ಸುಮಾರು ನಾಲ್ಕು ಸಾವಿರ ಚ.ಕಿಮೀ ಪ್ರದೇಶವನ್ನು ಚೀನಾ ಆತಿಕ್ರಮಿಸಿ ಕೂತಿದ್ದರೂ ಚೀನಾದ ಪಡೆಗಳನ್ನು ಹಿಂದೆ ಕಳುಹಿಸುವ ಧೈರ್ಯ ತೋರಿಲ್ಲ. ಮೋದಿಯವರ ಆಘಾತಕಾರಿ ಮೌನದಿಂದಾಗಿ ನಮ್ಮ ಸೇನಾ ಪಡೆಗಳು ಗಸ್ತು ತಿರುಗುತ್ತಿದ್ದ ಅನೇಕ ಪ್ರದೇಶಗಳನ್ನು, ಗಸ್ತುಠಾಣೆಗಳಿದ್ದ ಆಯಕಟ್ಟಿನ ಜಾಗಗಳನ್ನು ಚೀನಾಗೆ ಬಿಟ್ಟುಕೊಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಅರುಣಾಚಲ ಪ್ರದೇಶದಲ್ಲಿಯಂತೂ ಚೀನಾ ಭಾರತದ ನೆಲದಲ್ಲಿ ಹೆದ್ದಾರಿಗಳನ್ನು ಮಾಡಿ, ಹಳ್ಳಿಗಳನ್ನು ನಿರ್ಮಿಸಿದೆ. ಉಪಗ್ರಹ ಚಿತ್ರಗಳು ಈ ಎಲ್ಲದಕ್ಕೂ ದಾಖಲೆ ನೀಡುತ್ತಿವೆ. ಆದರೆ, ಕಾಗದದ ಹುಲಿ ಮೋದಿ ಮಾತ್ರ ಕಣ್ಣುಮುಚ್ಚಿ ಕೂತಿದ್ದಾರೆ. ಮೋದಿ ಆಡಳಿತದಲ್ಲಿ ಭಾರತದ ಸಾರ್ವಭೌಮತೆ, ಅಖಂಡತೆಗೆ ಇನ್ನಿಲ್ಲದ ಧಕ್ಕೆ ಒದಗಿದೆ ಎಂದು ಹೇಳಿದ್ದಾರೆ.

ಮಾತ್ರವಲ್ಲದೇ, ಬಡಾಯಿ ವೀರ ಮೋದಿಯವರ ಹೇಡಿತನದಿಂದಾಗಿ ಭಾರತದ ವೀರ ಸೈನಿಕರು ಇಂದು ಎದುರಾಳಿಗಳ ಮುಂದೆ ತಮ್ಮದೇ ನೆಲದಲ್ಲಿ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಬಂದಿದೆ. ಚೀನಾ ಅತಿಕ್ರಮಣ ವಿಚಾರದಲ್ಲಿ ತಮ್ಮ ವೈಫಲ್ಯತೆ, ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳುವ ಸಲುವಾಗಿ ಹೇಡಿ ಮೋದಿ ದೇಶದ ಜನತೆಯಿಂದ ಸತ್ಯವನ್ನು ಮುಚ್ಚಿಟ್ಟು ದ್ರೋಹ ಎಸಗಿದ್ದಾರೆ ಎಂದು ಟೀಕಿಸಿದ್ದಾರೆ.

https://x.com/siddaramaiah/status/1776152312450572382?t=3b4LcnmirDnemMzTFUrTtQ&s=08

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!