spot_img
Friday, March 27, 2026
spot_img

ಲೋಕಸಭಾ ಚುನಾವಣೆ : ಸಿಎ ಪರೀಕ್ಷೆಗಳ ದಿನಾಂಕದಲ್ಲಿ ಬದಲಾವಣೆ | ಮಾಹಿತಿ ಇಲ್ಲಿದೆ.

ಜನಪ್ರತಿನಿಧಿ (ನವ ದೆಹಲಿ) : ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ (ಐಸಿಎಐ) ಪರೀಕ್ಷಾ ದಿನಾಂಕದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ ಎಂದು ಐಸಿಎಐ ಮಾಹಿತಿ ನೀಡಿದೆ.

ಚಾರ್ಟರ್ಡ್‌ ಅಕೌಂಟೆಂಟ್‌ (ಸಿಎ) ಪರೀಕ್ಷೆಗಳನ್ನು ಈ ಹಿಂದೆ ನಿರ್ಧಾರ ಮಾಡದಂತೆ ಮೇ ತಿಂಗಳಲ್ಲಿ ನಡೆಯಲಿದೆ.

ಆದರೇ, ಗ್ರೂಪ್‌ 1ರ ಮಧ್ಯಂತರ ಕೋರ್ಸ್‌ ಪರೀಕ್ಷೆಯೂ ಈ ಮೊದಲು ನಿಗದಿಪಡಿಸಿದ್ದ ಮೇ 3, 5 ಹಾಗೂ 7 ರಂದು ನಡಯಲು ನಿರ್ಧರಿಸಿದ್ದ ಬದಲಾಗಿ ಮೇ 3, 5 ಹಾಗೂ 9 ರಂದು ನಡೆಯಲಿದೆ.

ಗ್ರೂಪ್‌ 2 ಪರೀಕ್ಷೆಯು ಮೇ 9, 11 ಹಾಗೂ 13ರ ಬದಲಾಗಿ ಮೇ 11, 15 ಹಾಗೂ 17ರಂದು ನಡೆಯಲಿದೆ.

ಇನ್ನು ಅಂತಿಮ ಪರೀಕ್ಷೆಗಳ ದಿನಾಂಕವೂ ಬದಲಾಗಿದ್ದು, ಗ್ರೂಪ್‌ 1 ಫೈನಲ್‌ ಪರೀಕ್ಷೆಯು ಮೇ 2,4 ಹಾಗೂ 8ರಂದು ನಡೆಯಲಿದೆ. ಗ್ರೂಪ್‌ 2 ಫೈನಲ್‌ ಪರೀಕ್ಷೆಯನ್ನು ಮೇ 10, 14 ಹಾಗೂ 16ರಂದು ನಡೆಸಲಾಗುವುದು ಎಂದು ತನ್ನ ಅಧಿಕೃತ ಎಕ್ಸ್‌ ಖಾತೆಯ ಮೂಲಕ ಐಸಿಎಐ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ ಸ್ಥಳೀಯ ಪ್ರಾಧೀಕರ ಸಾರ್ವಜನಿಕರ ರಜೆ ಎಂದು ಘೋಷಣೆ ಮಾಡಿದರೇ, ಈಗ ತಿಳಿಸಲಾದ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದೂ ಪ್ರಕಟಣೆ ಹೊರಡಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!