Thursday, October 31, 2024

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ

ಕುಂದಾಪುರ: ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 93ನೇ ತಿಂಗಳ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಇತ್ತೀಚೆಗೆ ಜರುಗಿತು.

ವಸಂತಿ‌ಆರ್. ಪಂಡಿತ್, ರಂಜನಿ ಪೂಜಾರಿ, ವಿನಯಾ ವಿ. ಶೆಣೈ, ಸರೋಜಿನಿ ಪಿ. ಭಟ್, ನಿವೃತ್ತ ಶಿಕ್ಷಕ ಸದಾಶಿವ ಐತಾಳ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಎಸ್.ಬಿ. ಮಹಿಳಾ ವೃಂದ, ಶ್ರೀ ಪೇಟೆ ವೆಂಕಟರಮಣ ದೇವಸ್ಥಾನ, ಕುಂದಾಪುರ ಇದರ ಅಧ್ಯಕ್ಷೆಯಾದ ವಸಂತಿ ಆರ್. ಪಂಡಿತ್ ಹಾಗೂ ಗೊಂಬೆಯಾಟದ ಹಿತೈಷಿ ರಾಜಶ್ರೀ ಆರ್. ಪೈ ಯವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.

ಶೋಭಾ ಭಂಡಾರ್ ಕಾರ್, ಭಾರತಿ‌ಎಸ್. ಪೈ, ವಿನಯ ವಿ. ಶೆಣೈ, ಸರೋಜಿನಿ ಪಿ. ಭಟ್, ಸೌರಭಿ ವಿ. ಪೈ ಹಾಗೂ ಗೀತಾಂಜಲಿ ಬಿ. ಕಾಮತ್‌ರವರನ್ನು ಜಿ.ಎಸ್.ಬಿ ಮಹಿಳಾ ವೃಂದದ ವತಿಯಿಂದ ಗೌರವಿಸಲಾಯಿತು. ಜಿ.ಎಸ್.ಬಿ. ಮಹಿಳಾ ವೃಂದ, ಶ್ರೀ ಪೇಟೆ ವೆಂಕಟರಮಣ ದೇವಸ್ಥಾನ, ಕುಂದಾಪುರದವರು ವಿಷ್ಣು ಸಹಸ್ರನಾಮ, ರಾಮರಕ್ಷಾ ಮಂತ್ರ ಹಾಗೂ ಭಜನೆ ನಡೆಸಿಕೊಟ್ಟರು. ಭಾಸ್ಕರ್ ಕೊಗ್ಗ ಕಾಮತ್ ಮತ್ತು ಪ್ರತಿಭಾ ಪೈ ಯವರು ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!