spot_img
Wednesday, January 22, 2025
spot_img

‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ವಿಸ್ತೃತ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ

ಜನಪ್ರತಿನಿಧಿ (ನವ ದೆಹಲಿ) : ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿ ಇಂದು(ಗುರುವಾರ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ವಿಸ್ತೃತ ವರದಿಯನ್ನು ಸಲ್ಲಿಸಿದೆ. ಏಕಕಾಲಿಕ ಚುನಾವಣೆಯ ಕ್ರಮವನ್ನು ಪುನಃಸ್ಥಾಪಿಸಲು ಕೇಂದ್ರ ಸರ್ಕಾರವು ಕಾನೂನುಬದ್ಧವಾಗಿ ಸಮರ್ಥನೀಯ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ.

ವರದಿಯು 18,626 ಪುಟಗಳನ್ನು ಒಳಗೊಂಡಿದೆ. ಇದು ಸೆಪ್ಟೆಂಬರ್ 2, 2023 ರಂದು ಪ್ರಾರಂಭವಾದಾಗಿನಿಂದ 191 ದಿನಗಳವರೆಗಿನ ಸಮನ್ವರಕಾರರು,  ತಜ್ಞರ ನಡುವಿನ ಸಂಶೋಧನಾ ಕಾರ್ಯಗಳೊಂದಿಗೆ ತಯಾರಿಸಿದ ವ್ಯಾಪಕವಾದ ಸಮಾಲೋಚನೆಯ ವರದಿ ಇದಾಗಿದೆ.

ಸಮಿತಿಯು ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಂದು ಸಲ್ಲಿಸಿದೆ.

“ಪಕ್ಷಗಳು, ತಜ್ಞರು ಮತ್ತು ಸಮನ್ವಯಕಾರರ ಸಲಹೆಗಳ ಆಧಾರದ ಮೇಲೆ, ಏಕಕಾಲಿಕ ಚುನಾವಣೆಯ ವ್ಯವಸ್ಥೆಯು ಚುನಾವಣಾ ಪ್ರಕ್ರಿಯೆ ಮತ್ತು ಒಟ್ಟಾರೆ ಆಡಳಿತದಲ್ಲಿ ಮೂಲಭೂತ ಪರಿವರ್ತನೆಯನ್ನು ತರುತ್ತವೆ ಎಂದು ಸಮಿತಿಯು ಸರ್ವಾನುಮತದ ಅಭಿಪ್ರಾಯವನ್ನು ಹೊಂದಿದೆ” ಎಂದು ವರದಿ ಹೇಳಿದೆ.

ರಾಜ್ಯ ವಿಧಾನಸಭೆ, ಲೋಕಸಭಾ ಚುನಾವಣೆಗಳೊಂದಿಗೆ ಪಂಚಾಯತ್ ಮತ್ತು ಪುರಸಭೆಗಳಲ್ಲಿ ಏಕಕಾಲಿಕ ಚುನಾವಣೆಗಳನ್ನು ಸಕ್ರಿಯಗೊಳಿಸಲು 324 ಎ ಪರಿಚ್ಛೇದವನ್ನು ಪರಿಚಯಿಸಲು ಸಮಿತಿಯು ಶಿಫಾರಸು ಮಾಡಿದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬೇಕು ಮತ್ತು ಅದು ಪೂರ್ಣಗೊಂಡ 100 ದಿನಗಳಲ್ಲಿ ಪುರಸಭೆ ಮತ್ತು ಪಂಚಾಯತ್ ಚುನಾವಣೆಗಳನ್ನು ನಡೆಸಬೇಕು ಎಂದು ವರದಿ ಸೂಚಿಸಿದೆ.

ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಮಾಜಿ ಹಣಕಾಸು ಆಯೋಗದ ಅಧ್ಯಕ್ಷ ಎನ್‌ಕೆ ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಸೇರಿದಂತೆ ಹಲವು ಸದಸ್ಯರಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!