Wednesday, September 11, 2024

ಕಜ್ಕೆಯಲ್ಲಿ ಮಧ್ಯಾಹ್ನ ಅನ್ನದಾಸೋಹದ ಯೋಜನೆ-ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ

ಬ್ರಹ್ಮಾವರ: ಕಜ್ಕೆಯಲ್ಲಿ ಅರೆಮಾದನಹಳ್ಳಿ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದಲ್ಲಿ ನಾನಾ ಭಾಗದಿಂದ ಬರುವ ಭಕ್ತಾಧಿಗಳ ಅನುಕೂಲತೆಗೆ ಪ್ರತೀ ದಿನ ಮಧ್ಯಾಹ್ನ ಅನ್ನದಾಸೋಹ ಮಾಡುವ ಯೋಜನೆ ಇದೆ ಎಂದು ಶಿವಸುಜ್ಞಾನತೀರ್ಥ ಸ್ವಾಮೀಜಿ ತಿಳಿಸಿದರು.

ಅತೀ ಕುಗ್ರಾಮದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ನಿರ್ಮಾಣ ಮತ್ತು ಪ್ರತಿಷ್ಠಾ ಕಾರ್ಯ ಸ್ವಯಂ ಸೇವಕರ , ದಾನಿಗಳ ಅಪಾರ ಶ್ರಮದಿಂದ ಯಶಸ್ವೀಯಾಗಿ ನಡೆದ ಕುರಿತು ನಾನಾ ಸಮಿತಿಗಳ ಪಧಾಧಿಕಾರಿಗಳ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತವಾಯಿತು.

ದೇವಸ್ಥಾನ ನಿರ್ಮಾಣ ಸಮಿತಿ, ಮಹಾ ಕುಂಭಾಭಿಷೇಕ , ಸ್ವಾಗತ ಸಮಿತಿಯ ಪಧಾಧಿಕಾರಿಗಳು ಸಲಹೆ ಸೂಚನೆ ನೀಡಿದರು , ರಾಜೇಶ್ ಆಚಾರ್ಯ ಮೆಠದಬೆಟ್ಟು ಹೆಬ್ರಿ, ದೇವಸ್ಥಾನದ ಸ್ಥಳದಾನಿಗಳಾದ, ಕೃಷ್ಣಯ್ಯ ಶೆಟ್ಟಿ, ಶ್ರೀಧರ ಕಾಮತ್‌ಬಾಲಕೃಷ್ಣ ಶೆಟ್ಟಿ, ಗಣ್ಯರಾದ ಕಾಶೀನಾಥ ಶೆಣೈ, ಕರುಣಾಕರ ಶೆಟ್ಟಿ ಕಜ್ಕೆ, ಖಜಾನೆ ಸುಕುಮಾರ್ ಆಚಾರ್ಯ ಮುನಿಯಾಲು, ರತ್ನಾಕರ ಆಚಾರ್ಯ ಶಿವಪುರ , ಕೇಶವ ಆಚಾರ್ಯ ಮುದ್ರಾಡಿ ಜಯರಾಮ ಆಚಾರ್ಯ ಮಿಯಾರು ರವೀಂದ್ರ ಆಚಾರ್ಯ ಪಕ್ಕಾಲು, ವಿಶ್ವನಾಥ್ ಆಚಾರ್ಯ ಕಲ್ಗೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!