Sunday, September 8, 2024

ಕೊಂಡಳ್ಳಿಯಲ್ಲಿ ವಿಜ್ಞಾನ ಮತ್ತು ಕಲಾಮೇಳ

     ಕುಂದಾಪುರ:  ರಾಷ್ಟೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಸ.ಹಿ.ಪ್ರಾ.ಶಾಲೆ ಕೊಂಡಳ್ಳಿ ಕುಂದಾಪುರ ವಲಯ ಇಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ ವಿಜ್ಞಾನ ಪ್ರಯೋಗ, ವಿಜ್ಞಾನ ಮಾದರಿಗಳು ಹಾಗೂ ಕ್ರಾಫ್ಟ್   ಪ್ರದರ್ಶನ ಜರುಗಿತು.

ವಿದ್ಯಾರ್ಥಿಗಳು ತಾವು ತಯಾರಿಸಿದ ೫೦ಕ್ಕೂ ಹೆಚ್ಚು ಮಾದರಿಗಳು ಹಾಗೂ ಕಲಾ ಸಾಮಗ್ರಿಗಳನ್ನು ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳೆದುರು ಪ್ರದರ್ಶಿಸಿ ಅವುಗಳಲ್ಲಿನ ವೈಜ್ಞಾನಿಕ ಕಾರಣಗಳನ್ನು ವಿಶ್ಲೇಷಿಸುತ್ತಾ ಭೇಷ್ ಎನಿಸಿಕೊಂಡರು. ವಿದ್ಯಾರ್ಥಿಗಳು ತಾವೇ ತಯಾರಿಸಿದ ಫೋಟೋ ಕಾರ್ನರ್ ನಲ್ಲಿ ನಿಂತು ಪೋಷಕರು ಹಾಗೂ ವಿದ್ಯಾರ್ಥಿಗಳು ಸಂಭ್ರಮಿಸಿದರು.

ವಿಜ್ಞಾನ ಹಾಗೂ ವಿಜ್ಞಾನಿಗಳ ಮಹತ್ವವನ್ನು ಸಾರುವ ವಿಜ್ಞಾನ ಗೀತೆಯ ಮೂಲಕ ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ಕಲಾಮೇಳಕ್ಕೆ ಚಾಲನೆ ನೀಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಭಾಸ್ಕರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶಂಕರನಾರಾಯಣ ಭಟ್ ಹಾಗೂ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಉಷಾಲತಾ ವಿಜ್ಞಾನ ದಿನಾಚರಣೆ ಅಂಗವಾಗಿ ನಡೆಸಿದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ವಿಜ್ಞಾನ ಸಹಶಿಕ್ಷಕ ರಾಮ ಮೊಗವೀರ ರಾಮನ್ ಪರಿಣಾಮ ಹಾಗೂ ವಿಜ್ಞಾನ ದಿನಾಚರಣೆಯ ಮಹತ್ವದ ಕುರಿತು ಪ್ರಸ್ತಾವನೆಗೈದರು. ಶಿಕ್ಷಕಿ ಶೈಲಜ ಶೆಟ್ಟಿ ಹಾಗೂ ಸುಜಾತ ಎಚ್ ಕಾಯ೯ಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಶ್ರುತಿ, ಗೌರವ ಶಿಕ್ಷಕಿ ಶಿವಾನಿ ಹಾಗೂ ನಿಶಾ ಕಾರ್ಯಕ್ರಮ ಸಂಯೋಜಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!