spot_img
Tuesday, March 3, 2026
spot_img

ಗುಂಡ್ಮಿ ಸಾಸ್ತಾನ: ಕಲಾ ಕುಸುಮ ಪ್ರಶಸ್ತಿ ಪ್ರದಾನ

ಕೋಟ: ಸಮಕಾಲೀನ ಸಮಾಜದ ಸ್ಥಿತಿಗತಿಯಲ್ಲಿ ನಾವೆಲ್ಲ ಕಲಿತು-ಬೆರೆತು ಅನನ್ಯತೆಯನ್ನು ಸಾಧಿಸಬೇಕಾಗಿದೆ. ಮೌಲ್ಯಗಳು ಕಟ್ಟಾಜ್ಞೆ ಆಗುವುದಿಲ್ಲ. ಅದು ದಿನೇ ದಿನೇ ರೂಢಿಸಿಕೊಳ್ಳುವ ಪ್ರಕ್ರಿಯೆಯಾಗಿದ್ದು ನಾವುಗಳು ಸನ್ನಿವೇಶವನ್ನು ರೂಪಿಸಿಕೊಡುವ ಮಹತ್ತರ ಕೆಲಸ ಮಾಡಬೇಕಾಗಿದೆ. ಮೌಲ್ಯ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ತಂದೆ, ತಾಯಿ, ಪಾಲಕರು, ಸಂಘ ಸಂಸ್ಥೆಯವರು ಕ್ರಿಯಾತ್ಮಕ ಹೆಜ್ಜೆ ಇಡುವಂತೆ ಮಗುವಿನಲ್ಲಿ ಅಂತರಂಗದ ತುಡಿತವನ್ನು ಪ್ರೇರೇಪಿಸುವುದಾಗಿದೆ ಎಂದು ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಕೆ.ಆರ್. ನಾಯಕ್, ಹಂಗಳೂರು ಹೇಳಿದರು.

ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ ಇದರ 14ನೇ ವಾರ್ಷಿಕೋತ್ಸವದ ಅಂಗವಾಗಿ ಸರಕಾರಿ ಪ್ರೌಢಶಾಲೆ, ಗುಂಡ್ಮಿ, ಸಾಸ್ತಾನ ಇಲ್ಲಿ ಹಮ್ಮಿಕೊಂಡ ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು ಎಂಬ ಮಾಹಿತಿ ಶಿಬಿರ ಹಾಗೂ ಸಂಸ್ಥೆ ನೀಡುವ ಕಲಾ ಕುಸುಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಸಭಾಧ್ಯಕ್ಷತೆಯನ್ನು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್ ಐತಾಳ್ ನಿರ್ವಹಿಸಿ ನಮ್ಮಲ್ಲಿ ಅಡಕವಾಗಿರುವ ಸೂಕ್ತ ಪ್ರತಿಭೆ ಅನಾವರಣಗೊಳ್ಳುವುದೇ ಅತೀ ಪ್ರಮುಖ ಘಟ್ಟವಾಗಿದ್ದು ನಮ್ಮ ದೈನಂದಿನ ಕ್ರಿಯೆಯಲ್ಲಿ ಅದನ್ನು ಅನುಷ್ಠಾನಗೊಳಿಸುವುದು ಗುರು-ಹಿರಿಯರಲ್ಲಿ ಗೌರವ, ಪ್ರೀತಿ ಮತ್ತು ಸ್ವಾಭಿಮಾನವನ್ನು ಪ್ರಕಟಿಸಬೇಕಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಬಾರ್ಕೂರಿನ ಖ್ಯಾತ ಉದ್ಯಮಿ ರಾಜಗೋಪಾಲ್ ನಂಬಿಯಾರ್ ಮಾತಾಡಿ ಮೌಲ್ಯ ಪ್ರಜ್ಞೆ ಮತ್ತು ಶಿಕ್ಷಣ ಪರಸ್ಪರ ಪೂರಕವಾಗಿದ್ದು ಅವಿನಾಭಾವ ಸಂಬಂಧ ಹೊಂದಿದೆ. ಮೌಲ್ಯಗಳಿಗೆ ಕ್ರಿಯಾ ಸ್ವರೂಪ ಕೊಡುವ ಕೆಲಸವನ್ನು ಶಿಕ್ಷಣವು ಮಾಡುತ್ತದೆ ಎಂದರು.

ಮುಖ್ಯ ಅತಿಥಿ ಮಂದಾರ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಜಿ., ಶಾಲಾ ಮುಖ್ಯ ಶಿಕ್ಷಕರಾದ ಸತೀಶ್ ಐತಾಳ್, ಕಲಾ ಕುಸುಮ ಪ್ರಶಸ್ತಿ ವಿಜೇತರಾದ ಆವರ್ಸೆ ಶ್ರೀನಿವಾಸ ಮಡಿವಾಳ, ಸಂಪನ್ಮೂಲ ವ್ಯಕ್ತಿ ಗಿರೀಶ್ ಅಚ್ಲಾಡಿ, ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ, ಪೋಷಕ ಪರಿಷತ್ ಸದಸ್ಯ ಗಣೇಶ್ ಗಾಣಿಗ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ವರ್ಷ ಸಾಲಿಗ್ರಾಮ ನಿರೂಪಿಸಿ ಶಾಲಾ ಮುಖ್ಯ ಶಿಕ್ಷಕ, ಸತೀಶ್ ಐತಾಳ್ ಸ್ವಾಗತಿಸಿ, ರಮೇಶ್ ವಕ್ವಾಡಿ ಪ್ರಸ್ತಾವನೆ ಮಾತುಗಳನ್ನಾಡಿ ವಂದಿಸಿದರು. ಸುಮಾರು ೧೮೫ ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!