spot_img
Wednesday, January 22, 2025
spot_img

‘ಗುಜರಾತಿಗಳು ಮಾತ್ರ ದರೋಡೆಕೋರರಾಗಲು ಸಾಧ್ಯ’ ಹೇಳಿಕೆ : ತೇಜಸ್ವಿ ವಿರುದ್ಧದ ಕೇಸು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ !

ಜನಪ್ರತಿನಿಧಿ (ನವ ದೆಹಲಿ) : ‘ಗುಜರಾತಿಗಳು ಮಾತ್ರ ದರೋಡೆಕೋರರಾಗಲು ಸಾಧ್ಯ’ ಎಂದು ಹೇಳಿಕೆ ನೀಡಿದ್ದ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ರದ್ದುಗೊಳಿಸಿದೆ.

ಕಳೆದ ವರ್ಷ “ಗುಜರಾತಿ ಹೈ ಥಗ್ ಹೈ ಹೋ ಸಕ್ತಾ ಹೈ” (ಗುಜರಾತಿಗಳು ಮಾತ್ರ ದರೋಡೆ ಮಾಡಬಹುದು) ಎಂದು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ (RJD) ತೇಜಸ್ವಿ ಯಾದವ್ ಅವರು ಸ್ಪಷ್ಟನೆ ನೀಡಿ ವಿವರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ತೇಜಸ್ವಿ ಯಾದವ್ ಅವರು ತಮ್ಮ ಹೇಳಿಕೆಯನ್ನು ವಾಪಾಸ್ ಪಡೆದ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಗೊಳಿಸಲಾಗಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಹಾಗೂ ನ್ಯಾಯಮೂರ್ತಿ ಉಜ್ಜೈನ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು, ತೇಜಸ್ವಿ ಯಾದವ್ ಹೇಳಿಕೆ ಅಸ್ಪಷ್ಟವಾಗಿದ್ದರಿಂದ ಈ ಬಗ್ಗೆ ವಿವರಣೆ ಒಂದು ವಾರ ಕಾಲಾವಕಾಶವನ್ನು ನೀಡಿತ್ತು. 

ಅಖಿಲ ಭಾರತ ಭ್ರಷ್ಟಾಚಾರ ವಿರೋಧಿ ಹಾಗೂ ಅಪರಾಧ ತಡೆ ಮಂಡಳಿಯ ಗುಜರಾತ್ ರಾಜ್ಯ ಉಪಾಧ್ಯಕ್ಷ ಹರೇಶ್ ಮೆಹ್ತಾ ಅವರು ಅಹಮದಾಬಾದ್‌ನಲ್ಲಿ ತೇಜಸ್ವಿ ಯಾದವ್ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಘಟನೆಯು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. 

ಮಾನನಷ್ಟ ಮೊಕದ್ದಮೆಯಲ್ಲಿ, ಇಡೀ ಗುಜರಾತಿ ಸಮುದಾಯವನ್ನು “ದರೋಡೆಕೋರರು” ಎಂದು ಅವಮಾನಿಸಿ ಸಾರ್ವಜನಿಕವಾಗಿ ನೀಡಿದ ಹೇಳಿಕೆಯು ಎಲ್ಲಾ ಗುಜರಾತಿಗಳಿಗೆ ಮಾನಹಾನಿ ಮತ್ತು ಅವಮಾನಕರವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. 

ನಿರ್ದಿಷ್ಟ ಸಮುದಾಯ ಅಥವಾ ಜನರು ಅಥವಾ ನಿರ್ದಿಷ್ಟ ರಾಜ್ಯದ ವಿರುದ್ಧ ಯಾದವ್ ಏನು ಹೇಳಿದ್ದರೂ ಅದನ್ನು ಹಿಂತೆಗೆದುಕೊಳ್ಳುವ ಅಗತ್ಯವಿದೆ ಎಂದು ನ್ಯಾಯಾಲಯ ಮನಗಂಡಿತು. 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!