spot_img
Wednesday, March 4, 2026
spot_img

ಕರ್ನಾಟಕದ ಜನತೆಗೆ ಉಚಿತವಾಗಿ ಸಿಗಬಹುದಾಗಿದ್ದ ಅಕ್ಕಿಯನ್ನು ಅದೇ ಜನತೆಗೆ 29 ರೂಪಾಯಿಗೆ ಮಾರಾಟ ಮಾಡುವುದು ದ್ರೋಹವಲ್ಲದೆ ಇನ್ನೇನು? : ಕಾಂಗ್ರೆಸ್‌ ಪ್ರಶ್ನೆ

ಜನಪ್ರತಿನಿಧಿ ವಾರ್ತೆ (ಬೆಂಗಳೂರು ) : ಕೇಂದ್ರ ಸರ್ಕಾರದ ಮತ್ತೊಂದು ದ್ರೋಹಕ್ಕೆ ನಿದರ್ಶನವೇ “ಭಾರತ್ ಅಕ್ಕಿ“ ಎಂದು ರಾಜ್ಯ ಕಾಂಗ್ರೆಸ್‌ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಟೀಕೆ ಮಾಡಿದೆ.

ಈ ಬಗ್ಗೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ʼಎಕ್ಸ್‌ʼ ಖಾತೆಯ ಮೂಲ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಜ್ಯ ಕಾಂಗ್ರೆಸ್‌, ನಮ್ಮ ಸರ್ಕಾರ ಕೆಜಿಗೆ 34 ರೂಪಾಯಿ ನೀಡುತ್ತೇವೆ ಎಂದರೂ ರಾಜ್ಯ ಸರ್ಕಾರಕ್ಕೆ ನೀಡಲು ಒಪ್ಪದ ಕೇಂದ್ರ ಸರ್ಕಾರ ಈಗ ರೂ. 29ಕ್ಕೆ ಮಾರುತ್ತಿದೆ ಎಂದು ಹೇಳಿದೆ.

ಕರ್ನಾಟಕದ ಜನತೆಗೆ ಉಚಿತವಾಗಿ ಸಿಗಬಹುದಾಗಿದ್ದ ಅಕ್ಕಿಯನ್ನು ಅದೇ ಜನತೆಗೆ 29 ರೂಪಾಯಿಗೆ ಮಾರಾಟ ಮಾಡುವುದು ದ್ರೋಹವಲ್ಲದೆ ಇನ್ನೇನು? ಎಂದು ರಾಜ್ಯ ಬಿಜೆಪಿನ್ನು ರಾಜ್ಯ ಕಾಂಗ್ರೆಸ್‌ ಕಟುವಾಗಿ ಪ್ರಶ್ನಿಸಿದ್ದಲ್ಲದೇ,  ಬಡವರ ಹಸಿವನ್ನು ಹಂಗಿಸುವ ಬಿಜೆಪಿಗೆ ಮಾನವೀಯತೆಯ ಲವಲೇಶವೂ ಇಲ್ಲ ಎಂದು ಹೇಳಿದೆ.

ಇನ್ನು, ಕೇಂದ್ರ ಸರ್ಕಾರವು ‘ಭಾರತ್‌’ ಬ್ರ್ಯಾಂಡ್‌ ಅಡಿಯಲ್ಲಿ ಪ್ರತಿ ಕೆ.ಜಿ ಅಕ್ಕಿಯನ್ನು 29 ರೂಪಾಯಿ ಬೆಲೆಗೆ ಮಾರಾಟ ಮಾಡುತ್ತಿದ್ದು, ಸದ್ಯ ನಿನ್ನೆ(ಬುಧವಾರ) ಬೆಂಗಳೂರಿನಲ್ಲಿಯೂ ಇದಕ್ಕೆ ಚಾಲನೆ ದೊರಕಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!