spot_img
Saturday, December 7, 2024
spot_img

ಫೆ.4: ಕೋಡಿಕನ್ಯಾಣ ಮಾರಿಕಾಂಬ ದೇವಸ್ಥಾನದಲ್ಲಿ ಕೆಂಡಸೇವೆ

ಸಾಸ್ತಾನ: ಶ್ರೀದೇವಿ ಮಾರಿಕಾಂಬ ಶ್ರೀನಾಲ್ಕುಪಾದದ ಹೈಗುಳಿ ಹಾಗೂ ಕೋಳೆಯರಮಾವನ ದೇವಸ್ಥಾನ ಕೋಡಿಕನ್ಯಾಣದಲ್ಲಿ ಫೆ.3ರಿಂದ 6ರ ತನಕ ಜಾತ್ರೆ, ವರ್ಧಂತಿ ಜರಗಲಿದೆ.

ಈ ಪ್ರಯುಕ್ತ ಫೆ.3ರಂದು ಬೆಳಗ್ಗೆ ಕಲಾಹೋಮ, ಅನ್ನಸಂತರ್ಪಣೆ ಜರಗಲಿದ್ದು, ಫೆ.4ರಂದು ಬೆಳಗ್ಗೆ ವಸಂತ ಪೂಜೆ, ರಾತ್ರಿ 7ಕ್ಕೆ ಭಜನೆ, ಅ ನಂತರ ಕೆಂಡಸೇವೆ, ಅನ್ನಸಂತರ್ಪಣೆ, ಕೋಲಸೇವೆ ನಡೆಯಲಿದೆ. ಫೆ.5ರಂದು ಅಪರಾಹ್ನ ಅನ್ನ ಸಂತರ್ಪಣೆ, ತುಲಾಭಾರ ಸೇವೆ, ದರ್ಶನ ಸೇವೆ ನಡೆಯಲಿದೆ. ಫೆ.6ರಂದು ರಾತ್ರಿ 8ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಕುರಿತು ರಚಿಸಿದ ಶ್ರೀನಾಲ್ಕು ಪಾದದ ಹೈಗುಳಿ, ಕೋಳೆಯರ ಮಾವನ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗ ಬಿಡುಗಡೆ ನಡೆಯಲಿದ್ದು ವಿಪಕ್ಷನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಸಂಗ ಬಿಡುಗಡೆ ನಡೆಸಲಿದ್ದಾರೆ. ಸಭಾ ಕಾರ್ಯಕ್ರಮದ ಅನಂತರ ಯಕ್ಷಸೌರಭ ಕಲಾವಿದರು, ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ಜರಗಲಿದೆ ಎಂದು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣ ಮಾಸ್ತರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!