spot_img
Saturday, December 7, 2024
spot_img

ಕೇಂದ್ರ ಸರ್ಕಾರದ “ ಒಂದು ಕೋಟಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್” ಯೋಜನೆಯನ್ನು ಕಾಂಗ್ರೆಸ್‌ ಟೀಕಿಸಿದ್ದು ಹೇಗೆ ಗೊತ್ತಾ ?

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಕೇಂದ್ರ ಸರ್ಕಾರದ “ ಒಂದು ಕೋಟಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್” ಯೋಜನೆಗೆ ರಾಜ್ಯ ಸರ್ಕಾರ ವ್ಯಂಗ್ಯವಾಡಿದೆ.

ಈ ಬಗ್ಗೆ ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ʼಎಕ್ಸ್‌ʼ ಮೂಲಕ ಈ ಬಗ್ಗೆ ಅಪಹಾಸ್ಯ ಮಾಡಿದ ಕಾಂಗ್ರೆಸ್‌, “ ಒಂದು ಕೋಟಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್” ಯೋಜನೆ ಎಂಬ ಘೋಷಣೆಯ ಹಿಂದಿನ ಸತ್ಯ..ಮನೆಯೂ ನಿಮ್ಮದೇ, ಚಾವಣಿಯೂ ನಿಮ್ಮದೇ, ಸೂರ್ಯನೂ ನಿಮ್ಮವನೇ, ಬೆಳಕೂ ನಿಮ್ಮದೇ, ಸೋಲಾರ್ ಪ್ಯಾನಲ್ ಗೆ ಅರ್ಧ ಬಂಡವಾಳವೂ ನಿಮ್ಮದೇ! ಅದರಿಂದ ಬರುವ ವಿದ್ಯುತ್ ಮಾತ್ರ ಕೇಂದ್ರ ಸರ್ಕಾರ ಕೊಡುವುದಂತೆ! ಎಂದು ಹೇಳಿದೆ.

ಇಂತಹ ಹೆಡ್ಲೈನ್ ಮ್ಯಾನೇಜ್ಮೆಂಟ್ ನಿಂದಲೇ ಜನರನ್ನು ಮೂರ್ಖರನ್ನಾಗಿಸುತ್ತ ಬಂದಿದೆ ಕೇಂದ್ರ ಸರ್ಕಾರ ಎಂದು ಟೀಕೆ ಮಾಡಿದೆ.

ಇನ್ನು, ಮನೆಯ ಮೇಲ್ಛಾವಣಿಗೆ ಸೌರಶಕ್ತಿ ಬಳಸುವ ಮೂಲಕ ಉಚಿತ ವಿದ್ಯುತ್ ಅನ್ನು ಘೋಷಿಸಿದ ಸಚಿವೆ, ರೂಫ್‌ಟಾಪ್ ಸೋಲಾರ್ ತಂತ್ರಜ್ಞಾನದ ಮೂಲಕ ಒಂದು ಕೋಟಿ ಕುಟುಂಬಗಳು ತಿಂಗಳಿಗೆ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು ಅಷ್ಟುಮಾತ್ರವಲ್ಲದೆ ಈ ಯೋಜನೆಯಿಂದ ದೇಶದ ವಿದ್ಯುತ್ ಸಮಸ್ಯೆಯನ್ನು ನಿಭಾಯಿಸಲು ಸಾಕಷ್ಟು ಸಹಾಯ ಮಾಡುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಬಜೆಟ್‌ ಬಾಷಣದಲ್ಲಿ ಹೇಳಿದ್ದರು.

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಡಿಯಲ್ಲಿ ಒಂದು ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರ ವಿದ್ಯುತ್ ಅಳವಡಿಸುವ ಕೇಂದ್ರದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಘೋಷಿಸಿದ್ದರು. ಈ ಯೋಜನೆಯ ಉದ್ದೇಶವು ಮೇಲ್ಛಾವಣಿ ಸೌರೀಕರಣದ ಮೂಲಕ ಕಡಿಮೆ ಮತ್ತು ಮಧ್ಯಮ ಆದಾಯದ ವ್ಯಕ್ತಿಗಳಿಗೆ ವಿದ್ಯುತ್ ಅನ್ನು ಒದಗಿಸುವುದು ಮತ್ತು ವಿದ್ಯುತ್ ಉತ್ಪಾದನೆಯ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸುವುದಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!