Sunday, September 8, 2024

ಮರವಂತೆ ಮಹಾರಾಜಸ್ವಾಮಿ ದೇವಸ್ಥಾನದ ಹತ್ತಿರ ಎಲ್ಲಾ ಸಾಮಾನ್ಯ ಸಾರಿಗೆ ಬಸ್ ನಿಲುಗಡೆಗೆ ಆದೇಶ

ಮರವಂತೆ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಮರವಂತೆ ಗ್ರಾಮದ ಮಹಾರಾಜಸ್ವಾಮಿ ದೇವಸ್ಥಾನದ ಹತ್ತಿರ ಎಲ್ಲಾ ಸಾಮಾನ್ಯ ಸಾರಿಗೆ ಬಸ್‌ಗಳಿಗೆ ನಿಲುಗಡೆಗೊಳಿಸುವಂತೆ ಮಂಗಳೂರು ಕರಾರಸಾ ನಿಗಮ ಆದೇಶ ಮಾಡಿದೆ.

ಬೈಂದೂರು ತಾಲೂಕಿನ ಮರವಂತೆ ಗ್ರಾಮದ ಮಹಾರಾಜಸ್ವಾಮಿ ಎಂಬ ಪ್ರದೇಶವು ಪ್ರೇಕ್ಷಣೀಯಕ ಸ್ಥಳವಾಗಿದ್ದು, ಉಡುಪಿ ಜಿಲ್ಲೆಯ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವಾಗಿದೆ. ಈ ಸ್ಥಳಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಿರುವುದರಿಂದ ಈ ಪ್ರದೇಶದ ಗ್ರಾಮಗಳ ಸಾರ್ವಜನಿಕ ಪ್ರಯಾಣಿಕರಿಗೆ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಮರವಂತೆ ಮಹಾರಾಜಸ್ವಾಮಿ ಸ್ಥಳದಲ್ಲಿ ಬಸ್ಸು ನಿಲುಗಡೆಗೊಳಿಸುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ನಾಡ ಘಟಕ 2023ರ ನ.21ರಂದು ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಮನವಿಯನ್ನು ಸಲ್ಲಿಸಿದ್ದರು.

ಪ್ರಸ್ತಾಪಿಸಿರುವ ಸ್ಥಳದಲ್ಲಿ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕುಂದಾಪುರ-ಭಟ್ಕಳ ಮಾರ್ಗದ ಎಲ್ಲಾ ಸಾಮಾನ್ಯ ಸಾರಿಗೆಗಳಿಗೆ ಮಹಾರಾಜಸ್ವಾಮಿ ದೇವಸ್ಥಾನದ ಬಳಿ ನಿಲುಗಡೆ ನೀಡಿ ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕ ಪ್ರಯಾಣಿಕರನ್ನು ಹತ್ತಿಸಿ/ಇಳಿಸಿಕೊಂಡು ಸಾರಿಗೆ ಕರ್ಯಾಚರಣೆ ಮಾಡುವಂತೆ ಮಂಗಳೂರು ಕರಾರಸಾ.ನಿಗಮ:ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯವರು ಕರಾರಸಾ.ನಿಗಮದ ಕುಂದಾಪುರ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!