spot_img
Wednesday, January 22, 2025
spot_img

ಜ.26: ಕಾವ್ರಾಡಿ ಮುಂಬಾರುಮನೆ ವಠಾರದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

kundapura: ಕಾವ್ರಾಡಿ ಗ್ರಾಮದ ಮುಂಬಾರುಮನೆ ಕುಟುಂಬಸ್ಥರ ಏಕಪವಿತ್ರ ನಾಗಮಂಡಲೋತ್ಸವ ಜನವರಿ 26 ಶುಕ್ರವಾರ ಮುಂಬಾರುಮನೆ ವಠಾರದಲ್ಲಿ ನಡೆಯಲಿದೆ.

ಆ ಪ್ರಯುಕ್ತ ಜ.25ರಂದು ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಜ.26ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಬೆಳಿಗ್ಗೆ 10-30ಕ್ಕೆ ನಾಗ ಸಂದರ್ಶನ, ತೀರ್ಥಪ್ರಸಾದ ವಿತರಣೆ, ಮಧ್ಯಾಹ್ನ 12ಗಂಟೆಯಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಬೆನಕ ಸುಗಮ ಸಂಗೀತ ತಂಡ ಕುಂದಾಪುರ ಮತ್ತು ಶ್ರೀ ವಿನಾಯಕ ಉಡುಪ ಬಲಾಡಿ ಇವರಿಂದ ಭಕ್ತಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಾಗ್ಮಿ, ಪ್ರಸಂಗಕರ್ತ ಪ್ರೊ ಪವನ್ ಕಿರಣ್‌ಕೆರೆ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಸಂಜೆ 7 ಗಂಟೆಗೆ ಹಾಲಿಟ್ಟು ಸೇವೆ, ದೇವ ದರ್ಶನ, ರಾತ್ರಿ 9 ರಿಂದ ಏಕಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ಪ್ರಧಾನ ಪುರೋಹಿತರಾಗಿ ವೇ,ಮೂ,. ಶ್ರೀಧರ ಅಡಿಗರು ಹಾಲಕ್ಕಿ, ಧಾರ್ಮಿಕ ಕಾರ್ಯಕ್ರಮಗಳನ್ನು ವೇ.ಮೂ ಶ್ರೀಕಾಂತ ಅಡಿಗರು ಹಾಲಕ್ಕಿ, ಗಣೇಶ ಸೋಮಯಾಜಿ ಕರ್ಕುಂಜೆ ಮತ್ತು ಬಳಗದವರು ನಿರ್ವಹಿಸಲಿದ್ದಾರೆ. ನಾಗಪಾತ್ರಿಗಳಾಗಿ ವೇ.ಮೂ.ಬಿ.ಲೋಕೇಶ ಅಡಿಗ, ಪ್ರಾಂತೀಯ ಧರ್ಮಾಧಿಕಾರಿ ಶ್ರೀ ಶಾರದಾ ಪೀಠ ಶೃಂಗೇರಿ ಮತ್ತು ನಾಗಪಾತ್ರಿಗಳು, ವೈದ್ಯರು ಸರ್ವೋತ್ತಮ ವೈದ್ಯರು ಹಾಗೂ ಬಳಗದವರು ಅಂಪಾರು ನೆರವೇರಿಸಲಿದ್ದಾರೆ.

ಮುಂಬಾರು ಕುಟುಂಬದ ಹಿನ್ನೆಲೆ: ಕುಂದಾಪುರ ತಾಲೂಕಿನ, ಕಾವ್ರಾಡಿ ಗ್ರಾಮದ ಮುಂಬಾರು ಮನೆ ಕುಟುಂಬ ವಿಶಿಷ್ಠವಾದುದು. 200ಕ್ಕೂ ಅಧಿಕ ಜನಸಂಖ್ಯೆ ಈ ಕುಟುಂಬ ಹೊಂದಿದೆ. ಮುಂಬಾರು ತುಂಗಮ್ಮ ಎನ್ನುವವರಿಗೆ ಒಬ್ಬಳೇ ಮಗಳು ಪುಟ್ಟಮ್ಮ, ಮುಂಬಾರು ತುಂಗಮ್ಮ, ಶೆಟ್ಟಿ ಇವರು ಕೊಡ್ಲಾಡಿ ರಾಮಣ್ಣ ಶೆಟ್ಟಿ ಎನ್ನುವರ ಮಗಳೇ ಪುಟ್ಟಮ್ಮ. ಇವಳನ್ನು ಬಿಲಾಡಿ ಗ್ರಾಮದ ಬೋದಾಡಿ ಮನೆ ನಂದಿಪ್ಪ ಹೆಗ್ಡೆ, ಮತ್ತು ಲಕ್ಷ್ಮಿ ಹೆಗ್ಡೆ ಇವರ ಮಗ ನಾರಾಯಣ ಹೆಗ್ಡೆಯವರ ಜೊತೆ, ೧೯೧೭ ರಲ್ಲಿ ಪುಟ್ಟಮ್ಮ ವಿವಾಹವಾಗುತ್ತದೆ. ಈ ನಾರಾಯಣ ಹೆಗ್ಡೆಯವರನ್ನು ಯಾರೂ ಕೂಡ ಹೆಗ್ಡೆ ಎಂದೇ ಕರೆಯಲಿಲ್ಲ, ಇವರ ಹುಟ್ಟೂರಿನಗಿಂತಲೂ, ಇವರು ವಿವಾಹ ಆಗಿ ಬಂದ ಪರಿಸರದಲ್ಲಿ, ಬಾಳ ಚಿರಪರಿಚಿತರಾದರು. ಇವರು ಮುಂಬಾರು ನಾರಾಯಣ ಶೆಟ್ಟಿ ಎಂದೇ ಚಿರಪರಿಚಿತರಾದರು, ಈ ನಾರಾಯಣ ಶೆಟ್ಟಿ ಮತ್ತು ಪುಟ್ಟಮ್ಮ ಶೆಟ್ಟಿ ಇವರಿಗೆ ಒಂಬತ್ತು ಜನ ಮಕ್ಕಳು, ಹೆಣ್ಣು ಏಳು, ಗಂಡು ಎರಡು. ಹೆಣ್ಣು ಮಕ್ಕಳಿಗೂ ಅವರಿಗೆ ಸರಿಯಾದ ಸಂಬಂಧವನ್ನು ಹುಡುಕಿ, ವಿವಾಹ ಮಾಡಿಕೊಟ್ಟರು, ಇಬ್ಬರು ಗಂಡು ಮಕ್ಕಳು ಕೂಡ ತುಂಬಾ ಬುದ್ಧಿವಂತರು, ತಕ್ಕಮಟ್ಟಿಗೆ ವಿದ್ಯಾವಂತರು ಆಗಿದ್ದರು, ಬೇಕಾದಷ್ಟು ಜಮೀನನ್ನು ಹೊಂದಿರುವ ಈ ಕುಟುಂಬ, ತಂದೆಯ ಕಸುಬನ್ನೆ ಮುಂದುವರೆಸಿಕೊಂಡು ಹೋದರು. ಇತ್ತೀಚಿನ ದಿನದಲ್ಲಿ ಕಾಲ ಬದಲಾದಂತೆ, ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಹೀಗೆ ಎಲ್ಲರೂ ಕೂಡ ವಿದ್ಯಾವಂತರಾಗಿ, ವಿವಿಧ ಊರಲ್ಲಿ ತಮ್ಮ ಉದ್ಯೋಗವನ್ನೇ ಅವಲಂಬಿಸಿಕೊಂಡು ಬೇರೆ ಬೇರೆ ಊರಿನಲ್ಲಿ ನೆಲೆಯಾದರು.

ಈ ಕುಟುಂಬಕ್ಕೆ ಸಂಬಂಧಪಟ್ಟ ನಾಗಬನ, ನಾಲ್ಕು ಕಡೆಗಳಲ್ಲಿ ಕುಟುಂಬಕ್ಕೆ ಅನುಕೂಲ ದೃಷ್ಟಿಯಲ್ಲಿ ನಾಗ ದೇವರು ಕೂಡ, ಸ್ಥಾಪನೆಯಾಗಿರುವುದು ಇನ್ನೊಂದು ವಿಶೇಷ, ಪುಟ್ಟಮ್ಮ ಶೆಟ್ಟಿ ಮತ್ತು ನಾರಾಯಣ ಶೆಟ್ಟಿಯ ಹಿರಿಯ ಮಗಳು, ಪ್ರಪುಲ್ಲ ಶೆಟ್ಟಿ ಇವರ ಮನೆ ಹತ್ತಿರ ಒಂದು ನಾಗಬನ, ಇದೆ ಅದೇ ರೀತಿ ಇನ್ನೂ ಮೂರು ಕಡೆಯಲ್ಲೂ ಇವರ ಮಕ್ಕಳ ಗೃಹಕ್ಕೆ ಹೊಂದಿಕೊಂಡು ಇನ್ನೂ ಎರಡು ಬನಗಳಿವೆ, ಆದರೆ ಈ ಕುಟುಂಬಕ್ಕೆ ಮೂಲನಾಗಬನ ಇರುವುದು, ಇವರ ಆದಿ ಮನೆಯಲ್ಲಿ. ಅದು ಪುಟ್ಟಮ್ಮ ಶೆಡ್ತಿ ಇವರ ಮೂಲಮನೆ, ಅದೇ ಮೂಲ ಬನದಲ್ಲಿ ಇಂದು ನಾಗಮಂಡಲ ಉತ್ಸವ ಕಾರ್ಯಕ್ರಮ ಜರುಗುತ್ತಿದೆ.
-ದಿನಕರ ಶೆಟ್ಟಿ ಮುಂಬಾರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!