Sunday, September 8, 2024

ನಿಮ್ಮ ಕನಸುಗಳೆ ನನ್ನ ಸಂಕಲ್ಪ ಇದು ಮೋದಿಯ ಗ್ಯಾರಂಟಿ. ನನ್ನ ಆಧ್ಯತೆ ದೇಶದ ಯುವ ಜನತೆ : ಪ್ರಧಾನಿ ನರೇಂದ್ರ ಮೋದಿ

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ರಾಷ್ಟ್ರೀಯ ಮತದಾರರ ದಿನದಂದು ಪ್ರತಿ ಮತದಾರರನ್ನೂ ಅಭಿನಂದಿಸತ್ತೇನೆ. ಯುವಕರೊಂದಿಗೆ ಇರುವಾಗ ಶಕ್ತಿ ಉದ್ದೀಪನಗೊಳ್ಳುತ್ತದೆ, ಅದೀಗ ನನಗೆ ಭಾಸವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನನ್ನ ಜೀವನದಲ್ಲಿ  ಇಷ್ಟೊಂದು ಸಂಖ್ಯೆಯ ಯುವಕರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿದ್ದು ಇದೇ ಮೊದಲು ಮತ್ತು ವಿಶ್ವದ ಯಾವುದೇ ರಾಜಕಾರಣಿಯನ್ನು ತೆಗೆದುಕೊಂಡರೂ ಇದು ಮೊದಲನೇ ಅವಕಾಶವೇ ಆಗಿರುತ್ತದೆ. ೧೮-೨೫ ವಯಸ್ಸು ಪ್ರತಿಯೊಬ್ಬರ ಜೀವನದಲ್ಲೂ ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಗುತ್ತದೆ. ಈ ಬದಲಾವಣೆಗಳ ನಡುವೆ ನೀವು ಮತ್ತೊಂದು ಜವಾಬ್ದಾರಿಯನ್ನೂ ಕೂಡ ನಿರ್ವಹಿಸಬೇಕಾಗುತ್ತದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗುವುದೇ ಈ ಜವಾಬ್ದಾರಿ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಕಾಲಚಕ್ರ ಎರಡು ಕಾರಣಗಳಿಗಾಗಿ ಬಹಳ ಮುಖ್ಯವಾಗುತ್ತದೆ. ಮೊದಲನೆಯದು, ಭಾರತದ ಅಮೃತಕಾಲ ಪ್ರಾರಂಭವಾಗುತ್ತಿರುವ ಶುಭ ಸಂದರ್ಭದಲ್ಲಿ ನೀವು ಮತದಾರರಾಗುತ್ತೀದ್ದೀರಿ. ಎರಡನೇಯದು, ನಾಳೆ ಜನವರಿ ೨೬ರಂದು ಭಾರತ ತನ್ನ ೭೫ನೇ ಗಣರಾಜ್ಯೋತ್ಸವ ಆಚರಿಸುತ್ತಿದೆ.

ಮುಂದಿನ ೨೫ ವರ್ಷ ನಿಮಗೆ ಮತ್ತು ಭಾರತಕ್ಕೆ ಅತ್ಯಂತ ಮಹತ್ವಪೂರ್ಣವಾಗಿದೆ. ೨೦೪೭ರ ವೇಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಗುರಿಯೊಂದಿಗೆ ದೇಶ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಿಮ್ಮ ಮತ ಭಾರತದ ದಿಕ್ಕನ್ನು ಬದಲಾಯಿಸಬಹುದು. ೧೯೪೭ಕ್ಕಿಂತ ೨೫ ವರ್ಷಗಳ ಮೊದಲು ಭಾರತದ ಯುವಕರ ಮೇಲೆ ದೇಶವನ್ನು ಸ್ವತಂತ್ರಗೊಳಿಸುವ ಜವಾಬ್ದಾರಿ ಹೇಗೆ ಇತ್ತೊ, ಅದೇ ರೀತಿ ೨೦೪೭ರ ವೇಳೆಗೆ ಅಂದರೆ ೨೫ ವರ್ಷಗಳೊಳಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡುವ ಜವಾಬ್ದಾರಿ  ನಿಮ್ಮ ಮೇಲಿದೆ ಎಂದು ಅವರು ಹೇಳಿದ್ದಾರೆ.

ನಿಮ್ಮ ಒಂದು ಮತ ಮತ್ತು ದೇಶದ ಅಭಿವೃದ್ಧಿ ದಿಕ್ಕು ಎರಡೂ ಒಂದಕ್ಕೊಂದು ಬೆಸೆದುಕೊಂಡಿದೆ. ನಿಮ್ಮ ಒಂದು ಮತ ಭಾರತವನ್ನು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಮಾಡಬಲ್ಲದು. ಭಾರತದಲ್ಲಿ ಸ್ಥಿರ ಹಾಗೂ ಸಂಪೂರ್ಣ ಬಹುಮತವುಳ್ಳ ಸರ್ಕಾರವನ್ನು ತರಬಲ್ಲದು. ಭಾರತದ ಸುಧಾರಣೆಯ ಪಯಣಕ್ಕೆ ಹೊಸ ವೇಗ ನೀಡಬಲ್ಲದು. ದಿಜಿಟಲ್‌ ಕ್ರಾಂತಿಗೆ ಮತ್ತಷ್ಟು ಹುಮ್ಮಸ್ಸು ತುಂಬಬಲ್ಲದು, ಭಾರತವನ್ನು ಸ್ವಂತ ಬಲದ ಮೇಲೆ ಅಂತರಿಕ್ಷಕ್ಕೆ ತಲುಪಿಸಬಲ್ಲದು, ಭಾರತದಲ್ಲಿ ಮೊದಲ ಪ್ರಯಾಣಿಕ ಯುಗ ವಿಮಾನವನ್ನು ತಯಾರಿಸಬಲ್ಲದು, ನಿಮ್ಮ ಒಂದು ಮತ ವಿಶ್ವದಲ್ಲೇ ಭಾರತದ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸಬಲ್ಲದು.

ಸ್ಥಿರ ಸರಕಾರ ಬಂದರೆ ದೇಶದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂದು, ದಶಕಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಿ ಮುನ್ನಡೆಯುತ್ತದೆ. ಯುವಕರ ಸಾಮರ್ಥ್ಯ ಇನ್ನಷ್ಟು ವೃದ್ಧಿಸಲಿ, ಅವರ ಕನಸುಗಳು ಸಾಕಾರಗೊಳ್ಳಲಿ ಎಂಬ ನಿಟ್ಟಿನಲ್ಲಿ ನಮ್ಮಸರ್ಕಾರ ದಿನ ರಾತ್ರಿ ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ನಿಮ್ಮ ಕನಸುಗಳೆ ನನ್ನ ಸಂಕಲ್ಪ ಇದು ಮೋದಿಯ ಗ್ಯಾರಂಟಿ. ನನ್ನ ಆಧ್ಯತೆ ದೇಶದ ಯುವ ಜನತೆ. ನಾವು ಈ ದೇಶದ ಯುವ ಜನತೆಯ ಮೇಕಲೆ ಸದಾ ವಿಶ್ವಾಸವನ್ನು ಇಟ್ಟಿದ್ದೇವೆ. ನನ್ನ ಯುವ ಭಾರತ-ಮೈ ಭಾರತ್‌ ವೇದಿಕೆಗೆ ಸೇರಿಕೊಳ್ಳಿ ಎಂದು ಅವರು ಯುವಕರಿಗೆ ಕರೆ ನೀಡಿದ್ದಾರೆ. ನೀವು ನಿಮ್ಮ ಅಭಿಪ್ರಾಯ, ಸಲಹೆಗಳನ್ನು ನಮೋ ಆಪ್‌ ಮಾಧ್ಯಮದ ಮೂಲಕ ನನಗೆ ತಲುಪಿಸಿ. ಮುಂದಿನ ಲೋಕಸಬಾ ಚುನಾವಣೆಯಲ್ಲಿ ಬಿಜೆಪಿಯ ಸಂಕಲ್ಪ ಪತ್ರ ಹೇಗಿರಬೇಕು, ವಿಶೇಷವಾಗಿ ಯುವಕರಿಗೆ ಅದರಲ್ಲಿ ಏನಿರಬೇಕು, ಅದಕ್ಕೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನಮೋ ಆಪ್‌ ಮೂಲಕ ತನಗೆ ತಲುಪಿಸಿ ಎಂದು ಯುಕರಲ್ಲಿ ಪ್ರಧಾನಿ ಕೇಳಿಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!