spot_img
Wednesday, January 22, 2025
spot_img

ʼ30 ಲಕ್ಷ ಕೊಟ್ಟವರಿಗೆ ಸರ್ಕಾರಿ ನೌಕರಿ ಗ್ಯಾರಂಟಿ‌ʼ : ಕಾಂಗ್ರೆಸ್‌ ಸರ್ಕಾರವನ್ನು ಲೇವಡಿ ಮಾಡಿದ ಆರ್‌. ಅಶೋಕ್

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಬಡವರ ಮಕ್ಕಳಿಗೆ ಯುವನಿಧಿ ಗ್ಯಾರಂಟಿ, 30 ಲಕ್ಷ ಕೊಟ್ಟವರಿಗೆ ಸರ್ಕಾರಿ ನೌಕರಿ ಗ್ಯಾರಂಟಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿ ಪಕ್ಷದ ನಾಯಕ ಆರ್‌. ಅಶೋಕ್ ಲೇವಡಿ ಮಾಡಿದ್ದಾರೆ.

ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಮೇಲೆ ಇಡಿ ದಾಳಿ ಕುರಿತಾಗಿ ತಮ್ಮ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲದ ರಾಜ್ಯ ಸರ್ಕಾರವನ್ನು ಟೀಕಸಿದ ಅಶೋಕ್, ಯುವನಿಧಿ ಗ್ಯಾರಂಟಿ ಹೆಸರಿನಲ್ಲಿ ನಿರುದ್ಯೋಗಿ ಯುವಕರ ಮೂಗಿಗೆ ಚಿಲ್ಲರೆ ಕಾಸು ನೀಡಿ ಮೂಗಿಗೆ ತುಪ್ಪ ಸವರುತ್ತಿರುವ ಕಾಂಗ್ರೆಸ್ ಸರ್ಕಾರ ಕೋಚಿಮುಲ್ ನಲ್ಲಿ ಒಂದು ಹುದ್ದೆಯನ್ನ 30 ಲಕ್ಷ ರೂಪಾಯಿಗೆ ಮಾರಾಟ ಮಾಡುವ ಮೂಲಕ ಬಡ, ಮಾಧ್ಯಮ ವರ್ಗದ ಯುವಕರಿಗೆ ಮೋಸ ಮಾಡುತ್ತಿದೆ ಎಂದು ಕಟುವಾಗಿ ಆರೋಪಿಸಿದ್ದಾರೆ.

ಶಾಸಕ ನಂಜೇಗೌಡ ನೇತೃತ್ವದ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ (ಕೋಮಲ್) ಹಗರಣವನ್ನು ಇಡಿ ಬಯಲಿಗೆಳೆದಿದೆ. ಸಹಕಾರಿ ಹಾಲು ಉತ್ಪಾದಕರ ಒಟ್ಟೂಕದಲ್ಲಿನ ನೇಮಕಾತಿ ಹಗರಣವನ್ನು ಇ.ಡಿ ಬಯಲಿಗೆಳೆದಿದೆ.

ಈ ಹಿನ್ನೆಲೆಯಲ್ಲಿ ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಅವರ ಮೇಲೆ ಜನವರಿ 8 ಕ್ಕೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಕೋಚಿಮುಲ್ ನ 30 ಹುದ್ದೆಗೆ ಹಣ ಪಡೆದುಕೊಂಡು ನೇಮಕಾತಿ ಮಾಡಿರುವುದು ದಾಳಿ ವೇಳೆ ಪತ್ತೆಯಾಗಿತ್ತು.

ಬೋಗಸ್ ದಾಖಲೆ ಸೃಷ್ಟಿ ಮಾಡಿ 150 ಕೋಟಿ ಜಮೀನು ಹಂಚಿಕೆ ಮಾಡಿರುವುದು ಕೂಡಾ ಪತ್ತೆಯಾಗಿತ್ತು. ದಾಳಿ ವೇಳೆ 25 ಲಕ್ಷ ನಗದು, ಅಕ್ರಮ ಆಸ್ತಿ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.

ಇದೇ ವಿಚಾರದ ವರದಿಯೊಂದನ್ನು ಉಲ್ಲೇಖಿಸಿ ಅಶೋಕ್‌, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಇಂದು (ಶುಕ್ರವಾರ) ʼಯುವನಿಧಿʼ ಯೋಜನೆಗೆ ಚಾಲನೆ ನೀಡಿದೆ. ನಿರುದ್ಯೋಗಿ ಪದವೀಧರ ಯುವಕರಿಗೆ ಭತ್ಯೆ ನೀಡುವ ನಿಟ್ಟಿನಲ್ಲಿ ಈ ಯೋಜನೆಗೆ ಚಾಲನೆ ಸಿಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿ ಪಕ್ಷದ ನಾಯಕ ತರಾಟೆಗೆ ತೆಗೆದುಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!