spot_img
Wednesday, January 22, 2025
spot_img

ಮೂಡ್ಲಕಟ್ಟೆ: ‘ಐ ಎಂ ಜೆ ಐ ಎಸ್ ಸಿ ಯಂಗ್ ಲೀಡರ್ ಅವಾರ್ಡ್ 2024’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ: ಜ.12: ಐ‌ಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆ, ಕುಂದಾಪುರ ಸ್ವಾಮಿ ವಿವೇಕಾನಂದರ ಜನ್ಮದಿನದ ಆಚರಣೆಯೊಂದಿಗೆ ’ಐ ಎಂ ಜೆ ಐ ಎಸ್ ಸಿ ಯಂಗ್ ಲೀಡರ್ ಅವಾರ್ಡ್ 2024’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಲಯನ್ಸ್ ಕ್ಲಬ್ ನ ಹಿಂದಿನ ಜಿಲ್ಲಾ ಗವರ್ನರ್, ಅಂತರಾಷ್ಟ್ರೀಯ ಪ್ರೇರಕ ತರಬೇತುದಾರರಾದ ನೀಲಕಂಠ ಎಂ ಹೆಗ್ಡೆ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತ, ಭಾರತ ಸಂಸ್ಕೃತಿಯ ಕುರಿತು ಜಗತ್ತಿಗೆ ತಿಳಿಸಿದಂತಹ ಮಹಾಪುರುಷರು. ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಅವರ ಬದುಕಿನ ಜೀವನವನ್ನು ಅರ್ಥೈಸಿಕೊಂಡರೆ ಇಡೀ ಜಗತ್ತನ್ನು ಅರ್ಥೈಸಿಕೊಂಡ ಹಾಗೆ ಎಂದು ಹೇಳಿದರು.

ನಾಳೆಯ ಬದುಕಿನ ಕನಸನ್ನು ಕಟ್ಟಿಕೊಳ್ಳಿ. ಕೇವಲ ಗೆಲುವಿನ ಹಿಂದೆ ಅಲ್ಲ, ಗೆಲುವು ಸಿಗುವವರೆಗೂ ಪ್ರಯತ್ನ ಪಡಬೇಕು. ಹಾಗೆ ತಮ್ಮ ನಂಬಿಕೆ, ವಿಶ್ವಾಸಗಳು ಅರಿಷಡ್ವರ್ಗಗಳನ್ನು ಬಿಟ್ಟು ತತ್ವದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಮತ್ತು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಅವಕಾಶಗಳನ್ನು ರೂಪಿಸಿಕೊಂಡು ಜೀವನವನ್ನು ಸಾರ್ಥಕಗೊಳಿಸಿ ಎಂದರು.

ಐ‌ಎಂಜೆ ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ ಯವರು ಪ್ರಾಸ್ತಾವಿಕ ಮಾತನಾಡಿ ಸ್ಪರ್ಧೆಯ ಉದ್ದೇಶ, ಹಂತ ಮತ್ತು ವಿವರವನ್ನು ಪ್ರಸ್ತಾಪಿಸಿದರು.

ಪ್ರಾಂಶುಪಾಲೆಯವರಾದ ಡಾ. ಪ್ರತಿಭಾ ಎಂ ಪಟೇಲ್ ಅವರು ಅಧ್ಯಕ್ಷತೆ ವಹಿಸಿ, ಭಾಗವಹಿಸಿರುವ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನೆಯನ್ನು ತಿಳಿಸಿ, ಸೋಲು ಗೆಲುವುಗಳ ಪರಿಕಲ್ಪನೆಯು ನಿಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗಬೇಕು. ಅದು ನಿಮ್ಮ ಜೀವನವನ್ನು ರೂಪಿಸುತ್ತದೆ. ಕಲಿಕೆ ನಿರಂತರ, ಆಶಾವಾದಿಗಳಾಗಿರಿ. ಪ್ರತಿಯೊಬ್ಬರು ಜೀವನದಲ್ಲಿ ಬೆಳೆದು ನಿಮ್ಮ ಗುರಿಯನ್ನು ತಲುಪುವವರಿಗೆ ಪ್ರಯತ್ನಿಸಿ ಎಂದರು.

ಕಾರ್ಯಕ್ರಮದಲ್ಲಿ ಸದಾನಂದ ಭಟ್ ನಿವೃತ್ತ ಸಹಾಯಕ ಮುಖ್ಯ ವ್ಯವಸ್ಥಾಪಕರು ವಿಜಯ ಬ್ಯಾಂಕ್ ಬೆಂಗಳೂರು, ರಾಜೀವ್ ಕೋಟ್ಯಾನ್ ಮಾಜಿ ಅಧ್ಯಕ್ಷರು, ಲಯನ್ಸ್ ಕ್ಲಬ್ ಕುಂದಾಪುರ, ಉಪ ಪ್ರಾಂಶುಪಾಲರಾದ ಪ್ರೊಫೆಸರ್ ಜಯಶೀಲ್ ಕುಮಾರ್, ಸ್ಪರ್ಧೆಗೆ ತೀರ್ಪುಗಾರರಾಗಿ ಅಕ್ಷಯ್ ಹೆಗ್ಡೆ, ರಾಷ್ಟ್ರ ಪ್ರಶಸ್ತಿ ವಿಜೇತ ನಿರೂಪಕರು, ಪ್ರೊ ಅಮೃತಮಾಲ ಡೀನ್ ಆಫ್ ಇಂಡಸ್ಟ್ರಿಯಲ್ ರಿಲೇಶನ್ಸ್ ಆಫ್ ಪ್ಲೇಸ್ಮೆಂಟ್. ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ. ಡಾ.ನಿಖಿಲಾ ಪೈ, ಬಿ‌ಎಸ್‌ಎಚ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕರು, ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಉಪಸ್ಥಿತರಿದ್ದರು.

ಈಗಾಗಲೇ ಮೊದಲ ಸುತ್ತಿನಲ್ಲಿ ನೆಡೆದ ಸ್ಪರ್ಧೆಯಲ್ಲಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ 22 ಕ್ಕೂ ಕಾಲೇಜಿನ 200 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ಅಂತಿಮ ಹಂತದ ಸುತ್ತಿಗೆ ಆಯ್ಕೆಯಾದ 15 ಕಾಲೇಜಿನ 45 ವಿದ್ಯಾರ್ಥಿಗಳು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದರು.

ವಿದ್ಯಾರ್ಥಿನಿ ಚೇತನ ಪ್ರಾರ್ಥನೆಗೈದರು. ಆಂಗ್ಲ ಸಹಾಯಕ ಪ್ರಾಧ್ಯಾಪಕಿ ಪ್ರೊಫೆಸರ್ ಪಾವನ ಅತಿಥಿಗಳನ್ನು ಪರಿಚಯಿಸಿದರು.
ಅನಂತರ ಗಣ್ಯರು ಸ್ಪರ್ಧೆಗಳಿಗೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಮನ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!