spot_img
Wednesday, January 22, 2025
spot_img

ತೆಕ್ಕಟ್ಟೆಯಲ್ಲಿ ಸಂಜೀವ ಕದ್ರಿಕಟ್ಟು ಸಂಸ್ಮರಣೆ

ತೆಕ್ಕಟ್ಟೆ: ಉರಿಯುವ ದೀಪದಂತೆ ಸಮಾಜಕ್ಕೆ ಕಲೆಯ ಬೆಳಕಾಗಿ ಬೆಳೆದವರು. ಎಷ್ಟೋ ಜನ ಕಲಾವಿದರನ್ನು ಬಾಲ್ಯದಿಂದಲೂ ಹುಟ್ಟಿ ಹಾಕಿದವರು. ರಂಗಭೂಮಿಯ ಪ್ರೇರಣೆಯಿಂದಲೇ ಸ್ತಬ್ಧ ಚಿತ್ರ ರಚನೆಯಿಂದ ಹಲವಾರು ಪಾತ್ರಗಳಾಗಿ ಸಂಘ ಸಂಸ್ಥೆಗಳಲ್ಲಿ ಕಾಣಿಸಿಕೊಳ್ಳುತ್ತ ಕಲಾಭಿರುಚಿಯನ್ನು ಸಮಾಜಕ್ಕೆ ಪಸರಿಸಿದವರು ಸಂಜೀವಣ್ಣ. ಅವರ ಅಗಲುವಿಕೆ ಕುಟುಂಬಕ್ಕಷ್ಟೇ ಮೀಸಲಾಗಿರದೇ ಸಮಾಜಕ್ಕೂ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ ಎಂದು ಸಂಸ್ಮರಣಾ ನುಡಿಗಳಿಂದ ಹೆರಿಯ ಮಾಸ್ಟರ್ ಸಂಜೀವ ಕದ್ರಿಕಟ್ಟು ಅವರನ್ನು ನೆನೆದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ಜನವರಿ ೭ರಂದು ಅರ್ಥಾಂಕುರ-೬ ಹೊಸ ತಲೆಮಾರಿನ ಅರ್ಥಧಾರಿಗಳ ಪರಿಶೋಧ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಕಲಾ ಪ್ರತಿಭೆ ಸಂಜೀವ ಕದ್ರಿಕಟ್ಟು ಸಂಸ್ಮರಣಾ ನುಡಿಗಳನ್ನಾಡಿದರು.

ಕಲಿಯುವ ಉತ್ಸಾಹಿಗಳಿಗೆ ಈ ಅಭ್ಯಾಸ ಕೂಟ ಹೆಚ್ಚು ಉಪಯುಕ್ತವಾಗಿದೆ. ವೇದಿಕೆಯೇನೋ ಯಶಸ್ವೀ ಕಲಾವೃಂದ ಸಿದ್ಧಗೊಳಿಸಿದೆ. ತಾಳಮದ್ದಳೆಗೆ ಅರ್ಥ ಹೇಳುವ ಮನಸ್ಸುಳ್ಳವರು ಈ ವೇದಿಕೆಯನ್ನು ಉಪಯೋಗಿಸಿಕೊಳ್ಳಬೇಕು. ಉಡುಪಿಯಿಂದೀಚೆ ವಿರಳವಾದ ಅಭ್ಯಾಸಕೂಟ ತೆಕ್ಕಟ್ಟೆಯಲ್ಲಿ ಸಾಹಸದಿಂದ ಮೈದೋರಿದೆ. ಇದರಲ್ಲೆ ಸಹಸ್ರ ಸಂಖ್ಯೆಯಲ್ಲಿ ಕಲಾವಿದರುಗಳು ಪ್ರಬುದ್ಧ ಕಲಾವಿದರಾಗಿ ರೂಪುಗೊಳ್ಳಲಿ ಎಂದು ಯುವ ಅರ್ಥಧಾರಿ ಸುರೇಶ್ ಶೆಟ್ಟಿ ನಂದ್ರೊಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಕೊಮೆ ಶನೇಶ್ಚರ ದೇಗುಲದ ಆಡಳಿತಾಧಿಕಾರಿ ಗಣೇಶ್ ಕೊಮೆ, ಅರ್ಥದಾರಿ ಕೀರ್ತನ್ ಮಿತ್ಯಂತ ಹಾಲಾಡಿ, ಸಂಘಟಕ ಸುಧಾಕರ ಆಚಾರ್, ವಿಜಿತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಮೀರಾ ವಿ. ಸಾಮಗ, ಶಂಕರನಾರಾಯಣ ಉಪಾಧ್ಯಯ, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಕೀರ್ತನ್ ಮಿತ್ಯಂತ ಹಾಲಾಡಿ ಈ ಕಲಾವಿದರುಗಳಿಂದ ಭೀಮ ದ್ರೌಪದಿ ಯಕ್ಷಗಾನ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!