Thursday, November 21, 2024

ಕೊಲ್ಲೂರು ದೇವಳದ ಪ್ರೌಢಶಾಲೆ ಮಾವಿನಕಟ್ಟೆ: ಬೆಳ್ಳಿ ಸಂಭ್ರಮ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆ ಮಾವಿನಕಟ್ಟೆ ಗುಲ್ವಾಡಿ ಇದರ 25ನೇ ವರ್ಷದ ಬೆಳ್ಳಿ ಸಂಭ್ರಮ ಕಾರ್ಯಕ್ರಮ ಡಿಸೆಂಬರ್ 30 ರಂದು ನಡೆಯಿತು. ಬೆಳಿಗ್ಗೆ ದ್ವಜಾರೋಹಣ, ವಸ್ತುಪ್ರದರ್ಶನ, ಛದ್ಮವೇಷ ಸ್ಪರ್ಧೆ, ವಿವಿಧ ಸಾಂಪ್ರದಾಯಿಕ ಉಡುಗೆಗಳ ಆಕರ್ಷಣೆ, ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆಯಿತು.

ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ, ಮಾಜಿ ಶಾಸಕರು ಹಾಗೂ ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಂದು ಕಟ್ಟಿಬೆಳೆಸಿದ ಶಿಕ್ಷಣ ಸಂಸ್ಥೆ ಇಂದು ಬೆಳ್ಳಿಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಈ ಭಾಗದಲ್ಲಿ ಅಂದು ಆರಂಭವಾದ ಶಿಕ್ಷಣ ಸಂಸ್ಥೆ ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿರುವುದು ಖುಷಿ ನೀಡುತ್ತಿದೆ. ಹೆಚ್ಚಾಗಿ ಕಾರ್ಮಿಕರೇ ಇರುವ ಈ ಭಾಗದಲ್ಲಿ ಅಂದು‌ಈ ಶಿಕ್ಷಣ ಸಂಸ್ಥೆ ಆರಂಭವಾಗಿ ಈ ಭಾಗದ ಜನರಿಕೆ ಶಿಕ್ಷಣವನ್ನು ನೀಡುವ ಮೂಲಕ ಈ ಭಾಗದ ಜನರಿಗೆ ಬೆಳಕನ್ನು ತೋರಿದ ಈ ಶಿಕ್ಷಣ ಸಂಸ್ಥೆ ಇಂದು ೨೫ ವರ್ಷಗಳನ್ನು ಪೂರೈಸುವ ಮೂಲಕ ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ, ಅಂದಿನಿಂದ ಇಂದಿನ ವರೆಗೂ ಈ ಶಾಲೆಯ ಘನತೆ ಗೌರವವನ್ನು ಉಳಿಸಿಕೊಂಡು ಬರುವಲ್ಲಿ ಮುಖ್ಯ ಶಿಕ್ಷಕ ಕುಶಲ್ ಶೆಟ್ಟಿಯವರ ಪಾತ್ರ ಹೆಚ್ಚು, ಕೊಲ್ಲೂರು ಮೂಕಾಂಬಿಕೆಯ ಹೆಸರಿನಲ್ಲಿ ನಡೆಯುವ ಈ ಶಿಕ್ಷಣ ಸಂಸ್ಥೆ ಇನ್ನೂ ಉತ್ತಮವಾಗಿ ಮುನ್ನಡೆಯಬೇಕು ಎಂದರು.

ಶ್ರೀ ಕ್ಷೇತ್ರ ಕೊಲ್ಲೂರು ಇದರ ಕಾರ್ಯನಿರ್ವಹಣಾಧಿಕಾರಿ ಹಾಗೂ ಶಾಲಾ ಸಂಚಾಲಕರಾದ ಪ್ರಶಾಂತಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗುಲ್ವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ, ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ. ಅತುಲ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಹರೀಶ್ ಕುಮಾರ್ ಶೆಟ್ಟಿ, ಸೌಕೂರು ದೇವಸ್ಥಾನದ ಆಡಳಿತ ಧರ್ಮದರ್ಶಿ ಮಂಜಯ್ಯ ಶೆಟ್ಟಿ ಸಬ್ಲಾಡಿ, ಮಲಪ್ರಭಾ ಬ್ಯಾಂಕ್ ಹಾಗೂ ಡಿವಿಜನಲ್ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಪಿ.ಬಿ.ಆರ್.ಹೆಗ್ಡೆ, ಉಧ್ಯಮಿ ಹಾಜಿ.ಜಿ.ಎಮ್. ಚರಿಯಬ್ಬ ಸಾಹೇಬ್, ಬೈಂದೂರುಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ನಿವೃತ್ತ ಶಿಕ್ಷಕಿ ರೀತಾ , ವಿದ್ಯಾರ್ಥಿ ನಾಯಕ ಶ್ರೀಹರ್ಷ ಉಪಸ್ಥಿತರಿದ್ದರು.
ಭಂಡಾರ್‌ಕಾರ್‍ಸ್ ಕಾಲೇಜು ಕುಂದಾಪುರ ಇಲ್ಲಿನ ಕನ್ನಡ ಪ್ರೊಫೇಸರ್ ಡಾ.ರೇಖಾ ವಿ ಬನ್ನಾಡಿ ಆಶಯ ನುಡಿಗಳನ್ನಾಡಿ, ಸೈಂಟ್ ಮೇರಿಸ್ ಶಾಲೆ ಕುಂದಾಪುರ ಇಲ್ಲಿನ ಶಿಕ್ಷಕಿ ಶ್ರೀಮತಿ ಸ್ವಸ್ಥಿವಾಚನ ಮಾಡಿದರು.

ಈ ಸಂದರ್ಭದಲ್ಲಿ ಶಾಲೆಯ ಆರಂಭದಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ, ಶಾಲಾ ಆರಂಭದಲ್ಲಿ ಸಹಕರಿಸಿದ ಮಹನಿಯರಿಗೆ, ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ. ಸಹಶಿಕ್ಷಕಿ ಸುಚೇತಾ ಸ್ವಾಗತ ಮಾಡಿ, ಶಾಲಾ ಮುಖ್ಯ ಶಿಕ್ಷಕ ಎಚ್.ಕುಶಲ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಚೇತ ಶೆಟ್ಟಿ ಕೌಂಜೂರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!