spot_img
Saturday, April 18, 2026
spot_img

ಅಯೋಧ್ಯೆ ತೀರ್ಪು ಅನಾಮಧೇಯವಾಗಿತ್ತು ! : ಪಿಟಿಐ ಸಂದರ್ಶನದಲ್ಲಿ ಸಿಜೆಐ ಚಂದ್ರಚೂಡ್‌

ಜನಪ್ರತಿನಿಧಿ ವಾರ್ತೆ (ನವ ದೆಹಲಿ) :  ಅಯೋಧ್ಯೆ ತೀರ್ಪು ಪ್ರಕಟಿಸುವ ಮೊದಲು ತೀರ್ಪಿನ ಬಗ್ಗೆ ನ್ಯಾಯಪೀಠದ ಸದಸ್ಯರು ಚರ್ಚಿಸಲು ಕುಳಿತಾಗ, ಇದು ನ್ಯಾಯಾಲಯದ ತೀರ್ಪು ಎಂದು ನಾವೆಲ್ಲರೂ ಸರ್ವಾನುಮತದಿಂದ ನಿರ್ಧರಿಸಿದ್ದೆವು. ಆದ್ದರಿಂದ ಯಾವುದೇ ವೈಯಕ್ತಿಕ ನ್ಯಾಯಾಧೀಶರಿಗೆ ತೀರ್ಪಿನ ಕರ್ತೃತ್ವವನ್ನು ಹೇಳಲಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ಹೇಳಿದ್ದಾರೆ.

ಚಂದ್ರಚೂಡ್‌ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ಗೆ ಸಂದರ್ಶನ ನೀಡಿದ್ದು, ಅಯೋಧ್ಯೆ ತೀರ್ಪು, ಜಮ್ಮು ಕಾಶ್ಮೀರದ ಆರ್ಟಿಕಲ್ 370, ಸಲಿಂಗ ವಿವಾಹಗಳ ಬಗ್ಗೆ ಸವಿಸ್ತೃತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯ ಆರೋಪವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ಅಲಗಳೆದಿದ್ದಾರೆ. ಸಂದರ್ಶನದಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಟೀಕೆಗಳಿಗೆ ಪ್ರತಿಕ್ರಿಯಿಸಲು ಚಂದ್ರಚೂಡ್ ನಿರಾಕರಿಸಿದ್ದಾರೆ.

ನ್ಯಾಯಮೂರ್ತಿ ಚಂದ್ರಚೂಡ್ ಅವರು ನಿರ್ದಿಷ್ಟ ನ್ಯಾಯಾಧೀಶರಿಗೆ ಪ್ರಕರಣಗಳ ಹಂಚಿಕೆ ಹಾಗೂ ತೀರ್ಪು ತಮ್ಮ ಪರವಾಗಿ ಬರಲು ನಿರ್ದಿಷ್ಟ ನ್ಯಾಯಾಧೀಶರ ಪೀಠಕ್ಕೆ ಬರುವಂತೆ ನೋಡಿಕೊಳ್ಳುವ ಬೆಂಚ್ ಹಂಟಿಂಗ್, ಖ್ಯಾತ ವಕೀಲರ ಟೀಕೆಗಳ ಕುರಿತ ಪ್ರಶ್ನೆಗಳಿಗೆ ಸಿಜೆಐ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ. 

ನ್ಯಾಯಾಧೀಶರಿಗೆ ಪ್ರಕರಣಗಳ ಹಂಚಿಕೆಯನ್ನು ವಕೀಲರು ನಿರ್ಧರಿಸುವುದಿಲ್ಲ ಎಂದು ಹೇಳಿದ್ದು ಸುಪ್ರೀಂ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.

“ಸುಪ್ರೀಂ ಕೋರ್ಟ್‌ನ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕಾದರೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ಹಂಚಿಕೆಯು ವಕೀಲರ ಪ್ರೇರಿತ ಹಂಚಿಕೆಯಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು ಎಂದು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ.” ಎಂದು ಅವರು ಹೇಳಿದ್ದಾರೆ.

ಮಾತ್ರವಲ್ಲದೇ, ಅಯೋಧ್ಯೆ ತೀರ್ಪು ಅನಾಮಧೇಯವಾಗಿತ್ತು, ತೀರ್ಪನ್ನು ಬರೆದ ನ್ಯಾಯಾಧೀಶರ ಹೆಸರನ್ನು ಎಲ್ಲಿಯೂ ಬಹಿರಂಗಗೊಳಿಸಿಲ್ಲವೇಕೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಚಂದ್ರಚೂಡ್‌ ಅಯೋಧ್ಯೆ ತೀರ್ಪು ಪ್ರಕಟಿಸುವ ಮುನ್ನಾ ತೀರ್ಪಿನ ಕುರಿತಾಗಿ ಪಂಚ ಸದಸ್ಯ ನ್ಯಾಯಪೀಠದ ಸದಸ್ಯರಯ ಚರ್ಚಿಸಲು ಕುಳಿತಾಗ, ಇದು ನ್ಯಾಯಾಲಯದ ತೀರ್ಪು ಎಂದು ನಾವೆಲ್ಲರೂ ಸರ್ವಾನುಮತದಿಂದ ನಿರ್ಧರಿಸಿದ್ದೆವು. ಆದ್ದರಿಂದ ಯಾವುದೇ ವೈಯಕ್ತಿಕ ನ್ಯಾಯಾಧೀಶರಿಗೆ ತೀರ್ಪಿನ ಕರ್ತೃತ್ವವನ್ನು ನೀಡಿಲ್ಲ ಎಂದು ಸಿಜೆಐ ಮಾಹಿತಿ ಬಹಿರಂಗೊಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!