spot_img
Saturday, April 18, 2026
spot_img

ವಿಜಯೇಂದ್ರ ಅವರೇ, ಮಧು ಬಂಗಾರಪ್ಪನವರ ಕತೆ ಬಿಟ್ಟು 40 ಸಾವಿರ ಕೋಟಿಯ ಬಗ್ಗೆ ಉತ್ತರ ನೀಡಿ : ಕಾಂಗ್ರೆಸ್‌ ಒತ್ತಾಯ

ಜನಪ್ರತಿನಿಧಿ ವಾರ್ತೆ ( ಬೆಂಗಳೂರು ) : ಸಚಿವ ಮಧು ಬಂಗಾರಪ್ಪರವರದ್ದು ವಯಕ್ತಿಕ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರ, ಅವರು ಸಾರ್ವಜನಿಕರ ತೆರಿಗೆಯ ಹಣವನ್ನು ಲಾಪಟಾಯಿಸಿಲ್ಲ, ತಮ್ಮ ಇಲಾಖೆಯಲ್ಲಿ ಅವ್ಯವಹಾರ ಮಾಡಿಲ್ಲ, ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದೇ ಹಗರಣ ನಡೆಸಿಲ್ಲ, ಸರ್ಕಾರದ ಹಣಕ್ಕೆ ನಷ್ಟ ಉಂಟುಮಾಡಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಸಮರ್ಥಿಸಿಕೊಂಡಿದೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 6 ತಿಂಗಳುಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.  6 ಕೋಟಿ 96 ಲಕ್ಷ 60 ಸಾವಿರ ರೂಪಾಯಿ ಮೊತ್ತದ ಚೆಕ್ ಬೌನ್ಸ್ ಆಗಿದ್ದು, ಸರ್ಕಾರಕ್ಕೆ 10 ಸಾವಿರ ರೂಪಾಯಿ ದಂಡ ಪಾವತಿಸಬೇಕೆಂದು ಕೋರ್ಟ್ ಆದೇಶಿಸಿತ್ತು. ಈ ಪ್ರಕರಣವನ್ನು ಬಿಜೆಪಿ ಟೀಕಿಸಿತ್ತು ಮಾತ್ರವಲ್ಲದೇ ಸಚಿವ ಮಧು ಬಂಗಾರಪ್ಪ ರಾಜೀನಾಮೆಗೂ ಆಗ್ರಹಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.  

ಮಧು ಬಂಗಾರಪ್ಪನವರ ವಯಕ್ತಿಕ ವ್ಯವಹಾರವನ್ನು ಹಿಡಿದು ಜಗ್ಗಾಡುತ್ತಿರುವ ರಾಜ್ಯ ಬಿಜೆಪಿ ನಾಯಕರು ತಮ್ಮ ತಮ್ಮದೇ ಪಕ್ಷದ ನಾಯಕರು ಹೇಳಿದ 40 ಸಾವಿರ ಕೋಟಿ ರೂಪಾಯಿಯ ಬೃಹತ್ ಹಗರಣದ ಬಗ್ಗೆ ಜನತೆಗೆ ಉತ್ತರ ನೀಡುವುದು ಯಾವಾಗ? ಎಂದು ಪ್ರಶ್ನಿಸಿದೆ.

ಅದು ಜನರ ಬೆವರಿನ ಹಣ, ಸರ್ಕಾರದ ಹಣ. ಬಿ. ವೈ ವಿಜಯೇಂದ್ರ ಅವರೇ, ಮಧು ಬಂಗಾರಪ್ಪನವರ ಕತೆ ಬಿಟ್ಟು 40 ಸಾವಿರ ಕೋಟಿಯ ಬಗ್ಗೆ ಉತ್ತರ ನೀಡಿ ಕಾಂಗ್ರೆಸ್‌ ಒತ್ತಾಯಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!