spot_img
Saturday, April 18, 2026
spot_img

ಕಪ್ಪು ಕುಳಿಗಳ ಅಧ್ಯಯನಕ್ಕೆ ಎಕ್ಸ್‌ಪೋಸ್ಯಾಟ್‌ ಉಡಾವಣೆ ಮಾಡಿದ ಇಸ್ರೋ  !

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಪ್ಪು ಕುಳಿಗಳು ಹಾಗೂ ನ್ಯೂಟ್ರಾನ್‌ ಸ್ಟಾರ್‌ಗಳ ಕುರಿತಾಗಿ ಅಧ್ಯಯನ ಮಾಡಲುಲು ಎಕ್ಸ್‌ – ರೇ ಪೋಲಾರ್‌ಮೀಟರ್‌ ಉಪಗ್ರಹವನ್ನು (ಎಕ್ಸ್‌ಪೋಸ್ಯಾಟ್‌) ಇಂದು(ಸೋಮವಾರ) ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಚಂದ್ರಯಾನ-3, ಆದಿತ್ಯ ಎಲ್‌-1 ಯಶಸ್ಸಿನ ಬೆನ್ನಿಗೆ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಸಂಶೋಧನೆಗೆ ಮುಂದಾಗಿರುವ ಇಸ್ರೋದ ಈ ಮಹತ್ತರ ಪ್ರಯತ್ನದಿಂದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಬಳಿಕ ಕಪ್ಪು ಕುಳಿಗಳ ಅಧ್ಯಯನಕ್ಕೆ ಮುಂದಾದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ದೇಶ ಪಾತ್ರವಾಗಿದೆ.

ಇಂದು ಬೆಳಗ್ಗೆ 9.10ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಎಕ್ಸ್‌ಪೋಸ್ಯಾಟ್‌ ಉಡಾವಣೆ ಆಗಿದೆ. ಬ್ರಹ್ಮಾಂಡದ ಕುರಿತು ಶತಮಾನಗಳಿಂದ ಇರುವ ನಿಗೂಢತೆಯನ್ನು ಭೇದಿಸುವ ಪ್ರಯತ್ನಿಸುವ ಹೊಸ ಯೋಜನೆಯೊಂದಿಗೆ ಇಸ್ರೋ ಮತ್ತೆ ಜಗತ್ತಿನ ಗಮನ ಸೆಳೆದಿದೆ.

ಸುಮಾರು 260 ಟನ್ ತೂಕ ಇರುವ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ತನ್ನ 60ನೇ ಹಾರಾಟವನ್ನು ಆರಂಭಿಸಿದ್ದು, ಈ ರಾಕೆಟ್ ಅತ್ಯಾಧುನಿಕ ಖಗೋಳ ವೀಕ್ಷಣಾ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ ಅಧ್ಯಯನಕ್ಕಂತಲೇ ಮೀಸಲಿಡಲಾಗಿದೆ.

ಪ್ಪು ಕುಳಿಗಳ ಅಧ್ಯಯನ

ಎಕ್ಸ್‌ – ರೇ ಪೋಟಾನ್‌ಗಳು ಮತ್ತು ಅವುಗಳ ಧ್ರುವೀಕರಣವನ್ನು ಬಳಸಿಕೊಂಡು, ಕಪ್ಪು ಕುಳಿಗಳು ಹಾಗೂ ನ್ಯೂಟ್ರಾನ್ ಸ್ಟಾರ್‌ಗಳ ಸಮೀಪದಿಂದ ವಿಕಿರಣಗಳ ಅಧ್ಯಯನಕ್ಕೆ ಎಕ್ಸ್‌ಪೋ ಸ್ಯಾಟ್ ಸಹಾಯ ಮಾಡಲಿದ್ದು, ಇದು ಪೋಲಿಕ್ಸ್ (ಪೋಲಾರಿಮೀಟರ್ ಇನ್‌ಸ್ಟ್ರುಮೆಂಟ್ ಇನ್ ಎಕ್ಸ್‌ ರೇ) ಹಾಗಾಉ ಎಕ್ಸ್‌ಪೆಕ್ಟ್ (ಎಕ್ಸ್‌- ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) ಎಂಬ ಎರಡು ಪೇ ಲೋಡ್‌ಗಳನ್ನು ಕೊಂಡೊಯ್ದಿದೆ.

ಉಪಗ್ರಹವು ಎಕ್ಸ್- ರೇಗಳ ಧ್ರುವೀಕರಣವನ್ನು 8- 30 ಕೆಇವಿ ಎನರ್ಜಿ ಬ್ಯಾಂಡ್‌ನಲ್ಲಿ ಪೋಲಿಕ್ಸ್ ಪೇಲೋಡ್‌, ಥಾಮ್ಸನ್ ಸ್ಕಾಟರಿಂಗ್ ಮೂಲಕ ಸುಮಾರು 50 ಸಮೃದ್ಧ ಕಾಸ್ಮಿಕ್ ಮೂಲಗಳ ಮಾಪನ ಮಾಡಲಿದೆ.

ಕಪ್ಪು ಕುಳಿಗಳು ಬ್ರಹ್ಮಾಂಡದಲ್ಲಿಯೇ ಅತ್ಯಧಿಕ ಗುರುತ್ವಾಕರ್ಷಣ ಶಕ್ತಿ ಹೊಂದಿರುತ್ತವೆ ಮತ್ತು ನ್ಯೂಟ್ರಾನ್ ನಕ್ಷತ್ರಗಳು ಅತ್ಯಧಿಕ ಸಾಂಧ್ರತೆ ಹೊಂದಿರುತ್ತವೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವುದರಿಂದ ಬಾಹ್ಯಾಕಾಶದಲ್ಲಿನ ಅತಿ ತೀವ್ರ ಸ್ವರೂಪದ ನಿಗೂಢತೆಗಳನ್ನು ಭೇದಿಸಲು ಸಹಾಯ ಮಾಡುತ್ತದೆ.


Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!