spot_img
Saturday, April 18, 2026
spot_img

‘ಇನಿದನಿ’ ಆಹ್ವಾನ ಪತ್ರಿಕೆ ಬಿಡುಗಡೆ

ಕುಂದಾಪುರ: ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ಸಂಗೀತಾಭಿಮಾನಿಗಳ ಬಹು ನಿರೀಕ್ಷೆಯ ‘ಇನಿದನಿ’ ಸಂಗೀತ ಸಂಜೆ ಕಾರ್ಯಕ್ರಮವು ಜನವರಿ 14 ರಂದು ನಡೆಯಲಿದ್ದು ಅದರ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕಲಾಕ್ಷೇತ್ರ-ಕುಂದಾಪುರ ದ ‘ಪ್ರಕಾಶಾಂಗಣ’ದಲ್ಲಿ ನಡೆಯಿತು.

ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ ಕೃಷ್ಣ ಪ್ರಸಾದ್ ಕ್ಯಾಶ್ಯೂಸ್ ವಂಡಾರು, ಇದರ ಮಾಲಕರಾದ ಸಂಪತ್ ಕುಮಾರ್ ಶೆಟ್ಟಿ ಮಾತನಾಡುತ್ತಾ, ‘ಇನಿದನಿ’ ಪ್ರಾರಂಭದ ವರ್ಷದಲ್ಲಿ ಕೇವಲ 150 ಜನ ಪ್ರೇಕ್ಷಕರಿಂದ ಶುರುವಾಗಿ ಈಗ 8,000 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮನಸೂರೆಗೊಳ್ಳುತ್ತದೆ ಅಂತಾದರೆ, ಅದು ಇನಿದನಿಯ ಗುಣಮಟ್ಟವನ್ನು ಸಾರುತ್ತದೆ ಎಂದರು.

12ನೇ ವರ್ಷದ ‘ಇನಿದನಿ’ ಯಾವಾಗೆಂದು ಕಾಯುತ್ತಿದ್ದ ನನಗೆ ಅದೇ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡುವ ಸುಯೋಗ ದೊರಕಿದ್ದು ಖುಷಿಯ ವಿಚಾರ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಶ್ರೀ ಕೃಷ್ಣಕೃಪಾ ಕ್ಯಾಶ್ಯೂಸ್ ಜಪ್ತಿ ಇದರ ನಿರ್ದೇಶಕ ಜಯಪ್ರಕಾಶ್ ಶೆಟ್ಟಿ ಮತ್ತು. ಹಿರಿಯ ಗಾಯಕ ಮೊಹನ್ ಸಾರಂಗ್ ಕುಂದಾಪುರ ಇವರು ಶುಭಕೋರಿದರು.

ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ರಾಜೇಶ್ ಕಾವೇರಿ ಕಾರ್ಯಕ್ರಮ ನಿರೂಪಿಸಿ, ದಾಮೋದರ ಪೈ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!