spot_img
Sunday, June 14, 2026
spot_img

ಬಿಗ್‌ ಬಾಸ್‌ ಮನೆಯಲ್ಲಿ ಹೆಣ್ಣಿನ ಆರೋಗ್ಯ ಮಂತ್ರ : ಎಂಟ್ರಿ ಕೊಟ್ಟ ʼಕಾಂತಾರʼದ ಸಿಂಗಾರ ಸಿರಿ ಸಪ್ತಮಿ ಗೌಡ

ಜನಪ್ರತಿನಿಧಿ ವಾರ್ತೆ ( ಬೆಂಗಳೂರು) : ಬಿಗ್‌ ಬಾಸ್‌ ಸೀಸರ್‌ ೧೦ ಅನೇಕ ವಿಶೇಷತೆಗಳನ್ನೊಳಗೊಂಡಿದೆ. ಬಿಗ್‌ ಬಾಸ್‌ ಟೀಮ್‌ ಆರಂಭಕ್ಕೂ ಮುನ್ನಾ ಈ ಬಾರಿ ಬಿಗ್‌ ಬಾಸ್‌ ಉಳಿದ ಸೀಸನ್‌ಗಳಂತಿರುವುದಿಲ್ಲ, ಈ ಬಾರಿ ʼಹ್ಯಾಪಿ ಬಿಗ್‌ ಬಾಸ್‌ʼ ಎಂದು ಹೇಳಿತ್ತು. ಆದರೇ, ಈ ಬಾರಿಯ ಬಿಗ್‌ ಬಾಸ್‌ ರಾಜ್ಯ ಮಟ್ಟದ ಎರಡು ದೊಡ್ಡ ಸುದ್ದಿಗಳಿಗೆ (ಹುಲಿ ಉಗುರು ಹಾಗೂ ಜಾತಿ ನಿಂದನೆ) ಕಾರಣವಾಗಿದೆ ಎನ್ನುವುದು ಕೂಡ ಇಲ್ಲಿ ಮುಖ್ಯ.

ಬಿಗ್‌ ಬಾಸ್‌ ವಾರಪೂರ್ತಿ ಗುಸು ಗುಸು, ಜಗಳ, ಗಲಾಟೆ, ಮನರಂಜನೆಯಿಂದ ಕೂಡಿದ್ದರೇ, ವೀಕೆಂಡ್‌ ಅಭಿನವ ಚಕ್ರವರ್ತಿ ಸುದೀಪ್‌ ನಡೆಸಿಕೊಡುವ ವಾರದ ಕಥೆ ಕಿಚ್ಚನ ಜೊತೆ ಹಾಗೂ ಪ್ರತಿ ಆದಿತ್ಯವಾರ ಫನ್‌ ಡೇ ವಿಶೇಷ. ಆದರೇ, ಕಳೆದ ವಾರ ಸುದೀಪ್‌ ಅನುಪಸ್ಥಿತಿಯಲ್ಲಿ ನಟಿ ಶ್ರುತಿ ʼಬಿಗ್‌ ಬಾಸ್‌ ನ್ಯಾಯಾಲಯʼ ಎಂಬ ಹೊಸ ಕಾನ್ಸೆಪ್ಟ್‌ ನನ್ನು ನಡೆಸಿಕೊಟ್ಟು ಹೊರಬಂದಿದ್ದರು. ಈ ವಾರ ʼಕಾಂತಾರʼ ಸಿನೆಮಾ ನಟಿ ಸಪ್ತಮಿ ಗೌಡ ಬಿಗ್‌ ಬಾಸ್‌ ಗೆ ಎಂಟ್ರಿ ಕೊಡುತ್ತಿದ್ದಾರೆ.

ಹೌದು, ಈ ವಾರ ವೀಕೆಂಡ್‌ ಸ್ಪೆಷಲ್‌. ಯಾಕೆಂದರೇ ರಿಷಬ್‌ ಶೆಟ್ಟಿ ನಿರ್ದೇಶನದ ʼಕಾಂತಾರʼ ಸಿನೆಮಾದ ಲೀಲಾ ಅಲಿಯಾಸ್‌ ಸಪ್ತಮಿ ಗೌಡ ಬಿಗ್‌ ಬಾಸ್‌ ಗೆ ಎಂಟ್ರಿ ನೀಡುತ್ತಿದ್ದಾರೆ.

ಬಿಗ್‌ ಬಾಸ್‌ ಗೆ ಎಂಟ್ರಿ ನೀಡುತ್ತಿರುವ ಸಪ್ತಮಿ ಗೌಡ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಪ್ರವೇಶಿಸುತ್ತಿದ್ದಾರೆ ಎಂದುಕೊಂಡರೆ ಅದು ತಪ್ಪು. ಸಪ್ತಮಿ ಗೌಡ ಬಿಗ್‌ ಬಾಸ್‌ ಪ್ರವೇಶಿಸುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಯೋಜನೆಯೊಂದರ ರಾಯಭಾರಿಯಾಗಿ. ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ʼಶುಚಿ : ನನ್ನ ಮೈತ್ರಿ : ಮುಟ್ಟಿನ ಕಪ್ (ಮೆನ್ಸ್ಟ್ರುವೆಲ್‌ ಕಪ್) ಯೋಜನೆʼಯ ರಾಯಭಾರಿ  ಆಗಿರುವ ಸಪ್ತಮಿ ಗೌಡ,‌ ಈ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಬಿಗ್‌ ಬಾಸ್‌ ಪ್ರವೇಶಿಸುತ್ತಿದ್ದಾರೆ.‌

ಶೇ. 80 ರಷ್ಟು ಹೆಣ್ಣು ಮಕ್ಕಳು ಮುಟ್ಟಿನ ಕಪ್‌ ಬಳಸುತ್ತಿದ್ದು, ಹೆಣ್ಣು ಮಕ್ಕಳನ್ನು ಪ್ಯಾಡ್‌ನಿಂದ ಮೆನ್ಸ್ಟ್ರುವೆಲ್‌ ಕಪ್‌ಗೆ ಕರೆದು ತರುವ ಉದ್ದೇಶವಿದೆ. ಇಲ್ಲಿಯೂ ಹೆಣ್ಣು ಮಕ್ಕಳಿದ್ದೀರಿ. ನಿಮಗೆ ಸರ್ಕಾರದ ಕಡೆಯಿಂದ ಕಪ್‌ ನೀಡುತ್ತಿದ್ದೇನೆ ಎಂದು ಬಿಗ್‌ ಬಾಸ್‌ ನಲ್ಲಿರುವ ಮಹಿಳಾ ಸ್ಪರ್ಧಿಗಳಿಗೆ ಮುಟ್ಟಿನ ಕಪ್‌ ನನ್ನು ಸಪ್ತಮಿ ವಿತರಿಸಿದ್ದಾರೆ.  

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!