Sunday, September 8, 2024

ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಮೂರನೇ ಸ್ಥಾನ | 50 ಸ್ತ್ರೀ ಕಳ್ಳಸಾಗಣೆ ಪ್ರಕರಣಗಳು ದಾಖಲು ! : ಎನ್‌ಸಿಆರ್‌ಬಿ ವರದಿ

ಜನಪ್ರತಿನಿಧಿ ವಾರ್ತೆ (ಸಿಲಿಕಾನ್‌ ಸಿಟಿ) : ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆಗೊಳಿಸಿರುವ ಮಾಹಿತಿಯೊಂದರ ಪ್ರಕಾರ, 2022ರಲ್ಲಿ 2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ 19 ಮೆಟ್ರೋನಗರಗಳಲ್ಲಿ ಅಥವಾ ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಮುಂಬೈ ನಂತರ ಸಿಲಿಕಾನ್‌ ಸಿಟಿ ಬೆಂಗಳೂರು ಸ್ಥಾನ ಪಡೆದುಕೊಂಡಿದೆ.

ಎನ್‌ಸಿಆರ್‌ಬಿ ಮಾಡಿರುವ ವರದಿ ಪ್ರಕಾರ, ನಗರದಲ್ಲಿ ಆ್ಯಸಿಡ್ ದಾಳಿಯ ಆರು ಘಟನೆಗಳು ವರದಿಯಾಗಿದ್ದು, ಇದು ದೇಶದ ಯಾವುದೇ ಮೆಟ್ರೋಪಾಲಿಟನ್ ನಗರದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣವಾಗಿದ ಎಂದು ಪರಿಗಣಿಸಲಾಗಿದೆ. ನಗರದಲ್ಲಿ 151 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ವರದಿಯಾಗಿದ್ದು, ಈ ಪೈಕಿ 149 ಪ್ರಕರಣಗಳಲ್ಲಿ ಸಂತ್ರಸ್ತರಿಗೆ ತಿಳಿದಿರುವ ವ್ಯಕ್ತಿಗಳಿಂದಲೇ ನಡೆದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇಂಡಿಯನ್‌ ಪಿನಲ್‌ ಕೋಡ್‌  ಅಥವಾ ಭಾರತೀಯ ದಂಡ ಸಂಹಿತೆ (ಐಪಿಸಿ) ಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳೆಂದು ವರ್ಗೀಕರಿಸಲಾದ ಅಪಹರಣ, ಸ್ತ್ರೀ ಕಳ್ಳಸಾಗಣೆ (ವುಮೆನ್‌ ಟ್ರಾಫಿಕಿಂಗ್), ಅತ್ಯಾಚಾರ ಹಾಗೂ ಸ್ತ್ರೀಯರ ಮೇಲಿನ ಹಲ್ಲೆ, ದೌರ್ಜನ್ಯಗಳಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು, ವಾರ್ಷಿಕ ಅಪರಾಧ ವರದಿ ಪ್ರಕಾರ, 2020ಕ್ಕೆ ಹೋಲಿಸಿದರೆ, 1,194 ಪ್ರಕರಣಗಳು ಹೆಚ್ಚಳವಾಗಿದ್ದು, 2020 ಮತ್ತು 2021 ಎರಡನ್ನೂ ಮೀರಿ 2022ರಲ್ಲಿ ಪ್ರಕರಣಗಳು ಹೆಚ್ಚಾಗಿವೆ. 639 ಅಪಹರಣ ಪ್ರಕರಣಗಳ ಜೊತೆಗೆ, 763 ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳು ಸೇರಿದಂತೆ ಹೆಚ್ಚಿನ ವಿಭಾಗಗಳಲ್ಲಿ, ಬೆಂಗಳೂರು ನಗರವು ನವದೆಹಲಿ ಮತ್ತು ಮುಂಬೈ ನಂತರ ಮೂರನೇ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ 50 ಸ್ತ್ರೀ ಕಳ್ಳಸಾಗಣೆ ಪ್ರಕರಣಗಳು ವರದಿಯಾಗಿದ್ದು, ನವದೆಹಲಿಯಲ್ಲಿ 53 ಪ್ರಕರಣಗಳು ವರದಿಯಾಗಿವೆ. ಎರಡು ಆ್ಯಸಿಡ್ ದಾಳಿ ಪ್ರಕರಣಗಳೊಂದಿಗೆ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದರೆ, ನವದೆಹಲಿಯಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ. 

ಐಟಿ ಹಬ್ ಎಂದು ಕರೆಯಲ್ಪಡುವ ಬೆಂಗಳೂರು ಸೈಬರ್ ಅಪರಾಧಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ವರದಿ ಪ್ರಕಾರ, ಅಶ್ಲೀಲ ವಿಚಾರಗಳ ಪ್ರಕಟಣೆ ಮತ್ತು ಪ್ರಸಾರವನ್ನು ಒಳಗೊಂಡ 73 ಪ್ರಕರಣಗಳು ವರದಿಯಾಗಿವೆ ಎಂದು ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ ಬ್ಯೂರೋ ತನ್ನ ವರದಿಯಲ್ಲಿ ಹೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!