Sunday, September 8, 2024

ಮಿಜೋರಾಂ ಅಧಿಕಾರ ಹಿಡಿದ ಝಡ್‌ಪಿಎಂ | ಸೋಲನುಭವಿಸಿದ ಸಿಎಂ ಜೊರಾಂತಂಗ

ಜನಪ್ರತಿನಿಧಿ ವಾರ್ತೆ (ಮಿಜೋರಾಂ) :  ಮಿಜೋರಾಂ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಝೋರಾಂ ಪೀಪಲ್ಸ್‌ ಮೂವ್ಮೆಂಟ್‌ (ಝಡ್‌ಪಿಎಂ) ಬಹುಮತ ಗಳಿಸಿದೆ. 40 ಸ್ಥಾನಗಳಲ್ಲಿ 27 ಸ್ಥಾನಗಳನ್ನು  ಗೆದ್ದಿದೆ.

ಆರು ಪಕ್ಷಗಳನ್ನು ಒಳಗೊಂಡ ಪ್ರತಿಪಕ್ಷ ಜೋರಾಂ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಮೈತ್ರಿಕೂಟವು ಮಿಜೋರಾಂನಲ್ಲಿ ಮ್ಯಾಜಿಕ್ ಸಂಖ್ಯೆಯ ಗಡಿಯನ್ನು ದಾಟುವ ಮೂಲಕ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ನವೆಂಬರ್ 7ರಂದು ನಡೆದ ಚುನಾವಣೆಯ ಫಲಿತಾಂಶ ಡಿ. 4ರಂದು ಪ್ರಕಟವಾಗಿದೆ.

ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ವಿರೋಧ ಪಕ್ಷದ ಸ್ಥಾನಕ್ಕೆ ಕುಸಿದಿದೆ. ಸ್ವತಃ ಸಿಎಂ ಜೊರಾಂತಂಗ ಸೋಲು ಕಂಡಿದ್ದಾರೆ. ಡಿಸಿಎಂ ತಾವ್ನ್‌ಲುಯಾ ಕೂಡ ಸೋಲಿನ ಕಹಿ ಅನುಭವಿಸಿದ್ದಾರೆ. 40 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಝಡ್‌ಪಿಎಂ 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಅಧಿಕಾರಕ್ಕೆ ಬರಲು 21 ಸೀಟುಗಳ ಅವಶ್ಯಕತೆ ಇದೆ. ಆಡಳಿತಾರೂಢ ಎಂಎನ್ಎಫ್ 10 ಸೀಟುಗಳಲ್ಲಿ ಗೆದ್ದಿದೆ. ಬಿಜೆಪಿ ಎರಡು ಕಡೆ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

ಸೋಲನುಭವಿಸಿದ ಸಿಎಂ ಜೊರಾಂತಂಗ

ಮಿಜೋರಾಂ ಹಾಲಿ ಸಿಎಂ ಜೊರಾಂತಂಗ ಅವರು ಐಜಾವ್ಲ್ ಪೂರ್ವ-1 ಕ್ಷೇತ್ರದಲ್ಲಿ ಪರಾಭವ ಹೊಂದಿರುವುದು ಆಘಾತ ಮೂಡಿಸಿದೆ. ಅವರಿಗೆ ಝೆಡ್‌ಪಿಎಂ ಅಭ್ಯರ್ಥಿ ಲಾಲ್ತನ್‌ಸಂಗಾ ಅವರ ಎದುರು 2,101 ಮತಗಳ ಸೋಲಾಗಿದೆ. ರಾಜ್ಯದಲ್ಲಿ ಪಕ್ಷದ ಸೋಲಿನ ಜತೆಗೆ, ಸ್ವತಃ ವೈಯಕ್ತಿಕವಾಗಿ ಸೋಲು ಅನುಭವಿಸಿರುವುದು ಜೊರಾಂತಂಗಾ ಅವರಿಗೆ ಭಾರಿ ಮುಖಭಂಗವಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!