spot_img
Sunday, February 15, 2026
spot_img

ಕಾಂಗ್ರೆಸ್‌ ಪಕ್ಷಕ್ಕೆ ಇದೀಗ ಕರ್ನಾಟಕಕ್ಕಿಂತಲೂ ತೆಲಂಗಾಣ ಚುನಾವಣೆ ಮುಖ್ಯವಾಗಿದೆ : ಬಿಜೆಪಿ

ಜನಪ್ರತಿನಿಧಿ ವಾರ್ತೆ : ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿರುವ ಸಿಎಂ, ಡಿಸಿಎಂ ಬಗ್ಗೆ ರಾಜ್ಯ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ತನ್ನ, ಅಧಿಕೃತ ಮೈಕ್ರೋ ಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯ ಮೂಲಕ ಆಡಳಿತಾರೂಢ ಕಾಂಗ್ರೆಸ್‌ ಬಗ್ಗೆ ಟೀಕೆ ಮಾಡಿದೆ,  ಕಾಂಗ್ರೆಸ್‌ ಪಕ್ಷಕ್ಕೆ ಇದೀಗ ಕರ್ನಾಟಕಕ್ಕಿಂತಲೂ ತೆಲಂಗಾಣ ಚುನಾವಣೆ ಮುಖ್ಯವಾಗಿದೆ. ಕನ್ನಡಿಗರ ಕಿವಿ ಮೇಲೆ ಹೂವಿಟ್ಟಂತೆ ಅಲ್ಲಿಯೂ ಕಾಂಗ್ರೆಸ್ ಇಡುತ್ತಿರುವ ಕಲರ್ ಕಲರ್ ಹೂವುಗಳು:

▪ ದಿನಕ್ಕೆ 24 ಗಂಟೆ ಪ್ರತಿ ಮನೆಗೆ ಉಚಿತ ವಿದ್ಯುತ್, ಕರ್ನಾಟಕದಲ್ಲಿ ಇಲ್ಲ..!

▪ ಮನೆ ಯಜಮಾನಿಗೆ 4 ಸಾವಿರ ಹಣ ಕೊಡುತ್ತೇವೆ, ಕರ್ನಾಟಕದಲ್ಲಿ 2 ಸಾವಿರ ಸಿಗುತ್ತಿಲ್ಲ..!

▪ ಯುವಕರಿಗೆ ಉದ್ಯೋಗ, ಯುವ ನಿಧಿ ಮೂಲಕ‌ 3 ಸಾವಿರ ವೇತನ, ಕರ್ನಾಟಕದಲ್ಲಿ ಜಾರಿಗೆ ಬಂದೇ ಇಲ್ಲ..!

▪ ಮಹಿಳೆಯರಿಗೆ ಉಚಿತ ಪ್ರಯಾಣ, ಕರ್ನಾಟಕದಂತೆ ತೆಲಂಗಾಣ ಸಾರಿಗೆ‌ ನಿಗಮಗಳು‌ ದಿವಾಳಿ ನಿಶ್ಚಿತ..!

▪ ಅನ್ನಭಾಗ್ಯ 10 ಕೆಜಿ ಅಕ್ಕಿ ಉಚಿತ, ಕರ್ನಾಟಕದಲ್ಲಿ ಮೋದಿ ಸರ್ಕಾರದ 5 ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ..!

ಸುಳ್ಳು ಹೇಳಿ ಅಧಿಕಾರ‌ ಹಿಡಿದ ಕಾಂಗ್ರೆಸ್, ಕರ್ನಾಟಕದಲ್ಲಿ ಘೋಷಿಸಿದ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಸೋತಿದೆ. ಈಗ ತೆಲಂಗಾಣದಲ್ಲಿ ಅದೇ ಸುಳ್ಳನ್ನು ಮತ್ತೆ ಹೇಳಿ, ರಾಜ್ಯದ ಅಮಾಯಕ ಜನರಿಗೆ ಟೋಪಿ ಹಾಕುವ ಯೋಜನೆಯಲ್ಲಿ ಕಾಂಗ್ರೆಸ್ ಇದೆ. ಎಂದು ಬರೆದು ಕೊಂಡಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!