spot_img
Monday, April 27, 2026
spot_img

ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಮಿಚೆಲ್‌ ಮಾರ್ಷ್‌ ಪೋಸ್‌ | ಆಸಿಸ್‌ ಆಟಗಾರನ ಅತಿರೇಖದ ಧೋರಣೆಗೆ ಕ್ರಿಕೇಟ್‌ ಅಭಿಮಾನಿಗಳ ಆಕ್ರೋಶ

ಜನಪ್ರತಿನಿಧಿ ವಾರ್ತೆ : ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ವಿಶ್ವಕಪ್‌ ಕ್ರಿಕೇಟ್‌ ಪಂದ್ಯಾವಳಿ ಟೀಮ್‌ ಇಂಡಿಯಾವನ್ನು ಸೋಲಿಸಿ ಆಸ್ಟ್ರೇಲಿಯಾ ಆರನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ವಿಶ್ವಕಪ್‌ ಟೂರ್ನಮೆಂಟ್‌ ನಲ್ಲಿ ಸದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದ ಟೀಮ್‌ ಇಂಡಿಯಾ ಫೈನಲ್‌ನಲ್ಲಿ  ಎಡವಿತ್ತು. ಆಸ್ಟ್ರೇಲಿಯಾ ಗೆದ್ದು ಬೀಗಿತ್ತು.

ಟ್ರೋಫಿ ಜೊತೆಗೆ ಆಸ್ಟ್ರೇಲಿಯಾ ಸಂಭ್ರಮಿಸಿದೆ. ಆದರೇ ಆಸೀಸ್‌ ಆಟಗಾರನೊಬ್ಬ ಟ್ರೋಫಿ ಜೊತೆಗೆ ನೀಡಿದ ಒಂದು ಅತಿರೇಖದ ಪೋಸ್‌ ಸಾಮಾಜಿಕ ಜಾಲತಾಣದಲ್ಲಿ ಬಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಆಸಿಸ್‌ ಆಟಗಾರ ಮಿಚೆಲ್‌ ಮಾರ್ಷ್, ಕೈಯಲ್ಲಿ ಬಿಯರ್‌ ಬಾಟಲ್ ಹಿಡಿದು ಟ್ರೋಫಿಯ ಮೇಲೆ ಕಾಲು ಉದ್ದಕ್ಕೆ ಚಾಚಿ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಮಿಚೆಲ್‌ ಮಾರ್ಷ್‌ ಕೈಯಲ್ಲಿ ಬಿಯರ್‌ ಬಾಟಲ್‌ ಹಿಡದುಕೊಂಡು, ವಿಶ್ವಕಪ್‌ ಟ್ರೋಫಿಯ ಮೇಲೆ ಎರಡೂ ಕಾಲುಗಳನ್ನು ಚಾಚಿ ಸೋಫಾ ಮೇಲೆ ಕುಳಿತಿರುವುದನ್ನು ನೋಡಬಹುದು. ಈ ಫೋಟೋವನ್ನು ಆಸಿಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಕೇಟ್‌ ಅಭಿಮಾನಿಗಳು ಮಿಚೆಲ್‌ ಮಾರ್ಷ್‌ ಅತಿರೇಖದ ಧೋರಣೆಗೆ ಆಕ್ರೋಶ ಹೊರ ಹಾಕಿದ್ದು, ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!