Sunday, April 28, 2024

ತೆರದ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಿ | ಹರಿದು ಬಂದ ಭಕ್ತ ಸಾಗರ

ಜನಪ್ರತಿನಿಧಿ ವಾರ್ತೆ (ಶಬರಿಮಲೆ) : ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಜಗತ್ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶಬರಿಮಲೆಯ ಬಾಗಿಲು ಇಂದು (ಶುಕ್ರವಾರ) ತೆರೆಯಲಾಗಿದ್ದು, ಭಕ್ತ ಸಾಗರವೇ ಅಯ್ಯಪ್ಪನ ಸನ್ನಿಧಿಯೆಡೆಗೆ ಹರಿದು ಬಂದಿದೆ.

ಮುಂಜಾನೆ ಮೂರು ಗಂಟೆಗೆ ಸನ್ನಿಧಿಯ ಬಾಗಿಲುಗಳನ್ನು ತೆರೆಯಲಾಗಿದೆ. ಸನ್ನಿಧಿಯ ಮುಖ್ಯ ಅರ್ಚಕ ತಂತ್ರಿ ಮಹೇಶ್‌ ಮೊಹನಾರು ಅಯ್ಯಪ್ಪ ಸ್ವಾಮಿಯ ಗರ್ಭಗುಡಿಯ ಬಾಗಿಲುಗಳನ್ನು ತೆರೆದರು. ಶಬರಿಮಲೆಯಲ್ಲಿರುವ ಸನ್ನಿಧಿಯ ಬಾಗಿಲು ಎರಡು ತಿಂಗಳುಗಳ ಅವಧಿಗೆ ತೆರೆದಿದೆ.

ಕೇರಳ, ಕರ್ನಾಟಕ, ತಮಿಳುನಾಡು, ಅಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಭಕ್ತ ಸಾಗರ ದೇಗುಲಕ್ಕೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಹರಿದು ಬರುತ್ತಿದೆ. ಇಂದು ದೇಗುಲದ ಬಾಗಿಲು ತೆರೆಯುವ ಸಂದರ್ಭದಲ್ಲಿ ಕೇರಳದ ದೇವಸಂ ಸಚಿವ ಕೆ. ರಾಧಾಕೃಷ್ಣನ್‌, ಶಾಸಕರುಗಳಾದ ಪ್ರಮೋದ್‌ ನಾರಾಯಣ್‌, ಕೆ. ಯು ಜಿನೀಶ್‌ ಕುಮಾರ್‌ ಉಪಸ್ಥಿತರಿದ್ದರು. ತಿರುವಾಂಕೂರು ದೇವಸ್ಥಾನಂ ಮಂಡಳಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಎಸ್.‌ ಪ್ರಶಾಂತ್‌ ಈ ಸಂದರ್ಭದಲ್ಲಿ ಹಾಜರಿದ್ದು, ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅಯ್ಯಪ್ಪ ಸನ್ನಿಧಾನದಲ್ಲಿ ಅನ್ನದಾನ ಮಂಟಪಮ್‌ನಲ್ಲಿ ಆಯೋಜಿಸಲಾಗಿರುವುಚಿತ ಪ್ರಸಾದ ವಿತರಣೆಗೆ ಸಚಿವ ರಾಧಾಕೃಷ್ಣನ್‌ ಚಾಲನೆ ನೀಡಿದರು.  

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!