spot_img
Wednesday, January 22, 2025
spot_img

ನೇಜಾರು ಕೊಲೆ ಕೇಸ್‌ : ಆರೋಪಿ ಸ್ಥಳ ಮಹಜರು ವೇಳೆ ಸಿಡಿದೆದ್ದ ಸ್ಥಳೀಯರು : ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಚಾರ್ಜ್‌

ಜನಪ್ರತಿನಿಧಿ ವಾರ್ತೆ: ನೇಜಾರಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸ್‌ ವಿಚಾರಣಾ ತಂಡ ಸ್ಥಳ ಮಹಜರಿಗಾಗಿ ಇಂದು(ಗುರುವಾರ) ಹತ್ಯೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಸ್ಥಳೀಯರು ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ. ಉದ್ರಿಕ್ತ ಸ್ಥಳಿಯರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಮೂಲದ ಆರೋಪಿ ಪ್ರವೀಣ್‌ ಅರುಣ್‌ ಚೌಗಲೆ (39 ವ)ಯನ್ನು ಪೊಲೀಸರು ಹತ್ಯೆ ನಡೆದ ಮನೆಗೆ ಸ್ಥಳ ಮಹಜರು ನಡೆಸಲು ಬಿಗಿ ಭದ್ರತೆಯೊಂದಿಗೆ ಕರೆತಂದಿದ್ದಾರೆ. ಈ ಸಂದರ್ಭದಲ್ಲಿ ಜಮಾಯಿಸಿದ್ದ ಸ್ಥಳಿಯರು ಆರೋಪಿ ವಿರುದ್ಧ  ಸಿಡಿದೆದ್ದಿದ್ದು, ಮಾತ್ರವಲ್ಲದೇ ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು. ಜಮಾಯಿಸಿದ್ದ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ನಿಯಂತ್ರಿಸುವ ಸಲುವಾಗಿ ಲಾಠಿ ಚಾರ್ಚ್‌ ನಡೆಸಿ ಉದ್ರಿಕ್ತ ಸ್ಥಳಿಯರನ್ನು ಚದುರಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಕೆಲ ಕಾಲ ರಸ್ತೆ ತಡೆ ಮಾಡಲಾಯಿತು. ಕೆಲ ಕಾಲ ಟ್ರಾಫಿಕ್‌ ದಟ್ಟನೆ ಉಂಟಾಯಿತು. ಸ್ಥಳಕ್ಕೆ ಕೂಡಲೇ ಹೆಚ್ಚುವರಿ ಪೊಲೀಸರನ್ನು  ಕರೆಸಿಕೊಳ್ಳಲಾಯಿತು. ಹತ್ಯೆ ನಡೆದ ಸ್ಥಳದಿಂದ ಸಂತೆಕಟ್ಟೆಯವರೆಗೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ನಿನ್ನೆ (ಬುಧವಾರ) ಆರೋಪಿ ಪ್ರವೀಣ್‌ ಚೌಗಲೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ 14 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿತ್ತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!