spot_img
Wednesday, January 22, 2025
spot_img

ಹಣತೆಗಳಲ್ಲಿ ಉಳಿದಿರುವ ಎಣ್ಣೆಯನ್ನು ಬಸಿದುಕೊಂಡು ಹೋಗುವ ಮಕ್ಕಳ ವೀಡಿಯೋ ಹಂಚಿಕೊಂಡ ಅಖಿಲೇಶ್‌ ಯಾದವ್‌

ಜನಪ್ರತಿನಿಧಿ ವಾರ್ತೆ : ʼದೀಪೋತ್ಸವʼ ಕಾರ್ಯಕ್ರಮದ ಹಣತೆಗಳಿಂದ ಎಣ್ಣೆಯನ್ನು ಕದ್ದು ಬಸಿದುಕೊಳ್ಳುತ್ತಿರುವ ಬಾಲರ ವೀಡಿಯೋವೊಂದನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ತಮ್ಮ ಸಾಮಾಕಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶದ ಸರಯೂ ನದಿ ದಡದಲ್ಲಿ ಸುಮಾರು 22.23 ಲಕ್ಷ ಮಣ್ಣಿನ ಹಣತೆ ಹಚ್ಚಿ ಗಿನ್ನೇಸ್‌ ವಿಶ್ವ ದಾಖಲೆ ಮಾಡಿದ ʼದೀಪೋತ್ಸವʼ ಕಾರ್ಯಕ್ರಮದ ಮತ್ತೊಂದು ಮುಖವನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಬಹಿರಂಗಗೊಳಿಸಿದ ದೇಶದ ಗಮನ ಸೆಳೆದಿದ್ದಾರೆ.

ಹಣತೆಗಳಲ್ಲಿ ಉಳಿದಿರುವ ಎಣ್ಣೆಯನ್ನು ಬಸಿದುಕೊಂಡು ಹೋಗುವಷ್ಟು ಬಡತನ ಕಾಡಿದರೆ, ಅಲ್ಲಿ ಯಾವ ಆಚರಣೆಗೂ ಅರ್ಥವಿಲ್ಲ. ಘಾಟಿಗಳು ಮಾತ್ರವಲ್ಲದೇ ಪ್ರತಿ ಬಡವರ ಮನೆಮನೆಗಳಲ್ಲೂ ದೀಪ ಬೆಳಗಬೇಕು. ಇದೊಂದೇ ನಮ್ಮ ಆಶಯ ಎಂದು ಅಖಿಲೇಶ್‌ ಯಾದವ್‌ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ 2017ರಲ್ಲಿ ಮೊದಲಬಾರಿಗೆ ಸರಯೂ ನದಿ ದಡದಲ್ಲಿ ಈ ʼದೀಪೋತ್ಸವ ʼ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಸುಮಾರು 51 ಸಾವಿರ ಹಣತೆಗಳನ್ನು ಬೆಳಗಿಸಲಾಗಿತ್ತು. 2019ರಲ್ಲಿ 4 ಲಕ್ಷ ಹಣತೆಗಳು, 2020ರಲ್ಲಿ 6 ಲಕ್ಷ ಹಣತೆಗಳು, 2021 ರಲ್ಲಿ 9 ಲಕ್ಷ ಹಣತೆಗಳನ್ನು ಬೆಳಗಿಸುವ ಮೂಲಕ ಗಿನ್ನೆಸ್‌ ದಾಖಲೆ ಬರೆದಿತ್ತು. ಈ ಬಾರಿ 22.23 ಲಕ್ಷ ಹಣತೆಗಳನ್ನು ಬೆಳಗಿಸುವ ಮೂಲಕ ʼದೀಪೋತ್ಸವʼ ಕಾರ್ಯಕ್ರಮವನ್ನು ಆಚರಿಸಿ ತನ್ನದೇ  ದಾಖಲೆಯನ್ನು ಮುರಿದಿದೆ. ಢ್ರೋನ್‌ ಬಳಕೆ ಮಾಡಿ ದೀಪಗಳನ್ನುಲೆಕ್ಕ ಮಾಡಲಾಗುತ್ತದೆ.

(ಅಖಿಲೇಶ್‌ ಯಾದವ್‌ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಹಂಚಿಕೊಂಡ ವೀಡಿಯೋದ ಲಿಂಕ್‌ : https://x.com/yadavakhilesh/status/1723401256113426697?s=20)

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!