spot_img
Wednesday, January 22, 2025
spot_img

ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರದ ಅನ್ನದಾಸೋಹಕ್ಕೆ ಅ.6ರಂದು ಚಾಲನೆ

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಕರಾವಳಿ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಶಕ್ತಿ ಕೇಂದ್ರವಾಗಿ ಕುಂದಾಪುರ ತಾಲೂಕಿನ ಬಗ್ವಾಡಿ ಬೆಳೆಯುತ್ತಿದೆ. ಪುರಾಣ, ಚಾರಿತ್ರಿಕ, ಐತಿಹಾಸಿಕ ಭವ್ಯ ಪರಂಪರೆಯನ್ನು ಹೊಂದಿರುವ, ನಂಬಿದ ಭಕ್ತರ ಇಷ್ಟಾರ್ಥ ಈಡೇರಿಸುವ ಬಗ್ವಾಡಿಯಲ್ಲಿ ಪ್ರತೀ ಸಂಕ್ರಮಣ ಹಾಗೂ ವಿಶೇಷ ಉತ್ಸವದ ಸಂದರ್ಭದಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನೆಡೆಯುತ್ತಿದೆ. ಈ ಪ್ರಕ್ರಿಯೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಗೆ ಶ್ರೀಕ್ಷೇತ್ರ ಸಜ್ಜಾಗಿದೆ.
ಬಗ್ವಾಡಿಯಲ್ಲಿ ಮಧ್ಯಾಹ್ನ ಭಕ್ತರ ಉದರ ತಂಪಾಗಿಸುವ ನಿತ್ಯ ಅನ್ನಸಂತರ್ಪಣೆಗೆ ಯೋಜನೆ ರೂಪಿಸಬೇಕೆಂಬುದು ಭಕ್ತ ಜನರ ಬಹುದಿನದ ಕನಸು. ಕರುನಾಡು ಕರಾವಳಿಯ ಶ್ರೇಷ್ಠ ಸಮಾಜ ಸೇವಕ, ಮೇರು ವ್ಯಕ್ತಿತ್ವದ ಮಾರ್ಗದರ್ಶಕರು, ಬಗ್ವಾಡಿ ಹೋಬಳಿ ಹಿತಚಿಂತಕರು ಶ್ರೀ ಕ್ಷೇತ್ರ ಬಗ್ವಾಡಿ ಇದರ ಜೀರ್ಣೋದ್ಧಾರದ ಹರಿಕಾರರಾದ ನಾಡೋಜ ಡಾ.ಜಿ.ಶಂಕರ 68ನೇ ಹುಟ್ಟುಹಬ್ಬ ಅಕ್ಟೋಬರ್ 05ರಂದು ನಡೆಯಲಿದ್ದು ಅದರ ಸವಿ ನೆನಪಿನೊಂದಿಗೆ ಮೊದಲ ಹಂತವಾಗಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಪ್ರತೀ ಶುಕ್ರವಾರದ ಅನ್ನಸಂತರ್ಪಣೆಗೆ ಚಿಂತನೆ ನಡೆಸಲಾಗಿದ್ದು, ಅದರಂತೆ ಅ.06 ಶುಕ್ರವಾರದಂದು ಚಾಲನೆ ನೀಡಲಾಗುವುದು.

ನಿತ್ಯ ಅನ್ನದಾನ ಕಾರ್ಯಕ್ರಮಕ್ಕೆ ಪೂರಕವಾಗಿ ಶ್ರೀ ಮಹಿಷಾಸುರಮರ್ದಿನಿ ಅನ್ನದಾಸೋಹ ನಿಧಿ ಸ್ಥಾಪಿಸಲಾಗಿದೆ. ಭವಿಷ್ಯದ ನಿರಂತರ ಅನ್ನದಾಸೋಹದ ಹಿತದೃಷ್ಟಿಯಿಂದ ದೊಡ್ಡ ಮೊತ್ತದಲ್ಲಿ ಹಣ ಕ್ರೋಢೀಕರಿಸಿ ನಿಧಿಯಾಗಿಟ್ಟು ಅದರ ಮೂಲಕ ಅನ್ನದಾನದ ವ್ಯವಸ್ಥೆ ಮಾಡುವ ಸದುದ್ದೇಶದಿಂದ ಕನಿಷ್ಠ 365 ಸದ್ಭಕ್ತರಿಂದ ತಲಾ ರೂ. 10,000 ಮತ್ತು ಮೇಲ್ಪಟ್ಟು ಹಣ ಸಂಗ್ರಹಿಸುವ ಗುರಿ ಇಟ್ಟುಕೊಂಡು ಕಾರ್ಯಪ್ರವೃತ್ತವಾಗಿದೆ.

ಅ.6ರಂದು ಚಾಲನೆ:
ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದ ಚರಿತ್ರೆಯ ಪುಟದಲ್ಲಿ ದಾಖಲಾಗುವ ಈ ಕಾರ್ಯಕ್ರಮಕ್ಕೆ ಅಕ್ಟೋಬರ್ 6 ಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು. ನಾಡೋಜ ಡಾ.ಜಿ.ಶಂಕರ್ ಹಾಗೂ ಸಮಾಜದ ಗಣ್ಯರ ಸಮ್ಮುಖದಲ್ಲಿ ವಿಶಿಷ್ಠ ರೀತಿಯಲ್ಲಿ ಶುಕ್ರವಾರದ ಅನ್ನಸಂತರ್ಪಣೆಗೆ ಶುಭ ನಾಂದಿಗೆ ಚಾಲನೆ ನೀಡಲಾಗುವುದು.

ಚಂಡಿಕಾ ಹೋಮ:
68ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಮೊಗವೀರ ಕುಲರತ್ನ ಡಾ.ಜಿ.ಶಂಕರ್ ಅವರ ಶ್ರೇಯಸ್ಸಿಗಾಗಿ ಶ್ರೀದೇವಿಯ ಸನ್ನಿಧಿಯಲ್ಲಿ ಅ.6ರಂದು ಬೆಳಿಗ್ಗೆ ಚಂಡಿಕಾ ಹೋಮ ನಡೆಯಲಿದೆ.

ಸಾಮೂಹಿಕ ಕುಂಕುಮಾರ್ಚನೆ:
ಚಂಡಿಕಾ ಹೋಮದ ಬಳಿಕ 68 ಮಹಿಳೆಯರಿಂದ ಶ್ರೀದೇವಿಗೆ ಏಕಕಾಲದಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ. ಮಹಿಷಾಸುರ ಮರ್ದಿನಿ ಕುಂಕುಮಾರ್ಚನೆ ಪ್ರಿಯೆ. ಕುಂಕುಮಾರ್ಚನೆಯಿಂದ ದೇವಿಯನ್ನು ಪ್ರಸನ್ನೀಕರಿಸಲು ಸಾಧ್ಯ. ಆ ಹಿನ್ನಲೆಯಲ್ಲಿ 68 ಮಹಿಳೆಯರು ಏಕಕಾಲದಲ್ಲಿ ದೇವಿಗೆ ಕುಂಕುಮರ್ಚನೆ ಮಾಡಲಿದ್ದಾರೆ. ಇದು ಕೂಡಾ ಅವಿಸ್ಮರಣೀಯ ಕ್ಷಣ.

ಸಾಮೂಹಿಕ ತುಪ್ಪ ದೀಪಾರ್ಚನೆ:
ಕುಂಕುಮಾರ್ಚನೆ ಸಮಾಪ್ತವಾಗುತ್ತಿದ್ದಂತೆ 68 ಮಂದಿ ಪುರುಷರು ಶ್ರೀ ದೇವಿಗೆ ಏಕಕಾಲದಲ್ಲಿ ತುಪ್ಪ ದೀಪ ಬೆಳಗಲಿದ್ದಾರೆ. ಇದು ಇಲ್ಲಿ ಬಹು ಅಪರೂಪದ ಸೇವೆಯಾಗಿದೆ. ದೀಪ ಬೆಳಗಿಸಿ ದೇವಿಯನ್ನು ಏಕಾಗ್ರಚಿತ್ತದಿಂದ ಪ್ರಾರ್ಥಿಸುವ ದಿವ್ಯಕ್ಷಣವೂ ಅನಾವರಣಗೊಳ್ಳಲಿದೆ.

ಅನ್ನದಾಸೋಹದ ನಿಧಿ ಸಮರ್ಪಣೆ:
ಅನ್ನದಾಸೋಹದ ಹಿತದೃಷ್ಟಿಯಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಿ ನಿಧಿಯಾಗಿಟ್ಟು ಅದರ ಮೂಲಕ ಅನ್ನದಾನದ ವ್ಯವಸ್ಥೆ ಮಾಡುವ ಸದುದ್ದೇಶಕ್ಕೆ ಪೂರಕವಾಗಿ ಅನ್ನದಾನದ ನಿಧಿ ಸ್ಥಾಪಿಸಲಾಗಿದ್ದು ಈಗಾಗಲೇ ಹೆಸರು ನೊಂದಾಯಿಸಿಕೊಂಡ ಸೇವಾರ್ಥಿಗಳು ಸಂಕಲ್ಪ ಮಾಡಿ, ಹುಂಡಿಗೆ ನಿಧಿ ಸಮರ್ಪಣೆ ಮಾಡಲಿದ್ದಾರೆ. ಈಗಾಗಲೇ ನೋಂದಾಯಿಸಿಕೊಂಡ 365ಕ್ಕೂ ಹೆಚ್ಚು ಮಂದಿ ಸೇವಾಕರ್ತರು ಭಾಗವಹಿಸಲಿದ್ದಾರೆ. ಭಕ್ತಿಯಿಂದ ಸಂಕಲ್ಪದೊಂದಿಗೆ ದೇಗುಲಕ್ಕೆ ಪ್ರದಕ್ಷಿಣೆ ಬಂದು ಅನ್ನದಾಸೋಹದ ಹುಂಡಿಗೆ ನಿಧಿ ಸಮರ್ಪಣೆ ಮಾಡಲಿದ್ದಾರೆ.

ಧಾರ್ಮಿಕ ಸಭಾ ಕಾರ್ಯಕ್ರಮ:
ಸಭಾ ಕಾರ್ಯಕ್ರಮದಲ್ಲಿ ಶುಕ್ರವಾರದ ಅನ್ನದಾಸೋಹಕ್ಕೆ ಚಾಲನೆ ನೀಡಲಾಗುವುದು. ಸಾಮೂಹಿಕವಾಗಿ ಅನ್ನ ಸಹಿತ ಭಕ್ಷ್ಯಗಳಿಗೆ ವೇದಿಕೆಯಲ್ಲಿ ಪೂಜೆ ಸಲ್ಲಿಸಿ ಉದ್ಘಾಟನೆಗೊಳಿಸಲಾಗುವುದು. ಡಾ.ಜಿ.ಶಂಕರ್ ಈ ಮಹತ್ವಕಾಂಕ್ಷಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಐದು ಹಿರಿಯ ದಂಪತಿಗಳನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಹೀಗೆ ಅನ್ನದಾಸೋಹ ಕಾರ್ಯಕ್ರಮದ ಲೋಕಾರ್ಪಣೆ ಅವಿಸ್ಮರಣೀಯವನ್ನಾಗಿಸುವ ನಿಟ್ಟಿನಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳನ್ನು ಜೋಡಣೆ ಮಾಡಿಕೊಂಡು ಬಗ್ವಾಡಿಯಲ್ಲಿ ಚಾರಿತ್ರಿಕ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗಿ ಚಾಲನೆ ನೀಡಲಾಗುವುದು ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನ್ನದಾನ ನಿಧಿಗೆ ನೆರವು:
ಅನ್ನದಾಸೋಹಕ್ಕೆ ಪ್ರತ್ಯೇಕ ನಿಧಿ ಸ್ಥಾಪಿಸಲಾಗಿದೆ. ಪ್ರತ್ಯೇಕ ಹುಂಡಿಯ ವ್ಯವಸ್ಥೆಯೂ ಇರುತ್ತದೆ. ಹೊರಭಾಗದ ಆಸಕ್ತ ಭಕ್ತಾದಿಗಳು ಯೂನಿಯನ್ ಬ್ಯಾಂಕ್ ಶಾಖೆ ಕುಂದಾಪುರ, ಉಳಿತಾಯ ಖಾತೆ ಸಂಖ್ಯೆA/c No. 520101223834463, IFSC Code : UBIN0900028 ಇಲ್ಲಿಗೆ ಕಳುಹಿಸಬಹುದಾಗಿದೆ. 9449554691, 7795229092, 9110871688

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!