Sunday, September 8, 2024

ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಜವಬ್ದಾರಿ- ರಶ್ಮಿ ಎಸ್.ಆರ್ : ‘ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ’ ಜನಜಾಗೃತಿ ಕಾರ್ಯಕ್ರಮ


ಕುಂದಾಪುರ, ಅ.2: ಸ್ವಚ್ಛತೆ ವಿಚಾರದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ನಿರ್ವಹಿಸಬೇಕು. ಪ್ರತಿ ಕಾರ್ಯನಿರ್ವಹಣೆಯಲ್ಲಿಯೂ ದೂರದೃಷ್ಟಿ ಇರಬೇಕು. ನಾವು ಎಸೆಯುವ ಒಂದು ಪ್ಲಾಸ್ಟಿಕ್ ಸ್ಟ್ರಾ ಕೂಡ ಬಹುಕಾಲ ಉಳಿಯುವ ಆಮೆಯಂತಹ ಜೀವಿಯ ಜೀವಕ್ಕೆ ಮಾರಕವಾಗಬಹುದು. ಹಾಗಾಗಿ ಪ್ರಜ್ಞಾವಂತರಾದ ನಾವು ಜಾಗೃತರಾಗಿ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್. ಹೇಳಿದರು.

ಕುಂದಾಪುರ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ ಕಾಲೇಜು, ಶ್ರೀ ಕುಂದೇಶ್ವರ ದೇವಸ್ಥಾನ, ಆರೋಗ್ಯ ಇಲಾಖೆ, ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯ ಪ್ರಯುಕ್ತ ನಡೆದ ಕಾಯಕ್ರಮ ‘ನಮ್ ಕುಂದಾಪ್ರ- ಸ್ವಚ್ಛ ಕುಂದಾಪ್ರ 2.0’ ಬ್ರಹತ್ ಸ್ವಚ್ಛತಾ ಅಭಿಯಾನ ಮತ್ತು ಜನಜಾಗೃತಿ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ತಾಳ್ಮೆಯ ಪ್ರತೀಕ. ತಾರತಮ್ಯ ನೀತಿಯ ವಿರುದ್ಧ ಅವರ ಛಲ, ತಾಳ್ಮೆಯಿಂದ ಸಾಧಿಸಿದ ಯಶಸ್ಸು ನಮಗೆ ಮಾದರಿಯಾಗುವಂತಹದ್ದು. ಹಾಗೆಯೇ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಆರ್ಥಿಕತೆಯ ಕುರಿತಾದ ದೂರದೃಷ್ಟಿ ಹೆಚ್ಚು ಅರ್ಥಪೂರ್ಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ, ತಾಲೂಕು ಆರೋಗ್ಯಾಧಿಕಾರಿ ಡಾ.ಶೋಭಾ, ಸಮಾಜಸೇವಕ ದತ್ತಾನಂದ ಗಂಗೊಳ್ಳಿ, ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಚಾತ್ರ, ಯು.ಎಸ್.ಶೆಣೈ, ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಕಾಲೇಜಿನಲ್ಲಿ ೧೯೭೩ನೇ ಸಾಲಿನಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿ ರೋಹಿಣಿ ಕಾರ್ಯಕ್ರಮ ನಿರ್ವಹಿಸಿದರು.

ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ ಎಂಬ ಜನಜಾಗೃತಿ ಕಾರ್ಯಕ್ರಮದ ಕಾಲೇಜಿನ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುಂದಾಪುರದ 23 ವಾರ್ಡ್‌ಗಳಲ್ಲಿ ಪ್ರತ್ಯೇಕ ತಂಡಗಳಾಗಿ ವಿದ್ಯಾರ್ಥಿಗಳು ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸಿದರು. ಪುರಸಭಾ ವ್ಯಾಪ್ತಿಯ ಸುಮಾರು 15000 ಕ್ಕೂ ಮಿಕ್ಕಿ ಮನೆಗಳ ಸಂಪರ್ಕಿಸಿ ಜನರಲ್ಲಿ ಪರಿಸರದ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿ ಮಾಹಿತಿ ಕರಪತ್ರಗಳನ್ನು ವಿತರಿಸಿದರು.

ಸುಸ್ಥಿರ ಬದುಕಿಗೆ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಅತ್ಯಗತ್ಯವಾಗಿರುವ ಉತ್ತಮ ಪರಿಸರವನ್ನು ಉಳಿಸುವ ಕುರಿತು ಜನಜಾಗೃತಿ ಹಾಗೂ ಪರಿಸರ ಮಾಲಿನ್ಯವನ್ನು ತಡೆಯುವುದರ ಕುರಿತು ವಿದ್ಯಾರ್ಥಿಗಳು ವಿವರಿಸಿದರು. ಪುರಸಭಾ ಸದಸ್ಯರು ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!