spot_img
Wednesday, January 22, 2025
spot_img

ಬಾರ್ಕೂರು ಶೆಟ್ಟಿಗಾರ್ ಇಂಡಸ್ಟ್ರೀಸ್ ಸಾರ್ವಜನಿಕ ಗಣೇಶೋತ್ಸವ: ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ

ಕುಂದಾಪುರ, (ಜನಪ್ರತಿನಿಧಿ ವಾರ್ತೆ): ಬಾರ್ಕೂರು-ರಂಗನಕೇರಿ ಶೆಟ್ಟಿಗಾರ ಇಂಡಸ್ಟ್ರೀಸ್ ಇದರ ೧೮ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಎರಡನೇ ದಿನದ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ. 20 ರಂದು ಬುಧವಾರ ನಡೆಯಿತು.

ಈ ಕ್ಷೇತ್ರ ಧರ್ಮಸ್ಥಳ ಇಲ್ಲಿನ ಪಾರುಪತ್ಯಗಾರರಾದ ಪಿ.ಲಕ್ಷ್ಮೀ ನಾರಾಯಣ್ ರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಉತ್ತಮ ಬದುಕಿಗೆ ಶಾಂತಿ ನೆಮ್ಮದಿ ಅಗತ್ಯ, ಇಂತಹ ಶಾಂತಿಗೆ ಧರ್ಮಚರಣೆಯಾಗಬೇಕು. ನಮ್ಮಲ್ಲಿರುವ ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಶ್ರದ್ಧಾ, ಭಕ್ತಿಯಿಂದ ದೇವರ ಆರಾಧನೆಯಿಂದ ಅದರ ಪ್ರಾಪ್ತಿ ನಮಗಾಗುತ್ತದೆ. ದೇವರ ಸೇವೆ ಮಾಡುತ್ತಾ ದಾನ-ಧರ್ಮದ ಮೂಲಕ ಊರಿಗೆ ಬೇಕಾದ ವ್ಯಕ್ತಿ ಶ್ರೀನಿವಾಸ ಶೆಟ್ಟಿಗಾರರಿಂದ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದರು.

ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘ (ನಿ) ಉಡುಪಿ ಇದರ ಅಧ್ಯಕ್ಷರಾದ ರತ್ನಾಕರ ಇಂದ್ರಾಳಿ ಅವರು ಮಾತನಾಡಿ, ಉಡುಪಿ ಸೀರೆಯ ಕಂಪನ್ನು ಪಸರಿಸುವ ಪ್ರಯತ್ನವಾಗಿ ಕುಲಕಸುವಿನ ಉಳಿವಿಗಾಗಿ ನಮ್ಮ ಕೈಮಗ್ಗ ನೆಯ್ಗೆಯ ಮತ್ತು ಉಡುಪಿ ಸೀರೆಗಳ ಪುನಶ್ಚೇತನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅತ್ಯಗತ್ಯ. ಆ ನಿಟ್ಟಿನಲ್ಲಿ ಶ್ರೀನಿವಾಸ ಶೆಟ್ಟಿಗಾರರು ಧಾರ್ಮಿಕ ಸಮಾಜ ಸೇವಾ ಕಾರ್ಯದ ಜೊತೆಗೆ ಉಡುಪಿ ಸೀರೆಯ ಪುನಶ್ಚೇತನಕ್ಕೆ ಅವರ ವಿಶೇಷ ಕೊಡುಗೆ ಅಪಾರ ಎಂದರು.

ಈ ಸಂದರ್ಭದಲ್ಲಿ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ಮತ್ತು ಶ್ರೀಮತಿ ಸ್ವರ್ಣಗೌರಿ ದಂಪತಿಗೆ ಸನ್ಮಾನ ನೀಡಲಾಯಿತು. ಈ ವೇಳೆ ಬಾರ್ಕೂರು ಶೌರ್ಯ ತಂಡದವರು ಅವರನ್ನು ವಿಶೇಷವಾಗಿ ಗೌರವಿಸಿದರು.

ಬಾರ್ಕೂರು ನ್ಯಾಷನಲ್ ಕೈಗಾರಿಕಾ ತರಬೇತಿ ಕೇಂದ್ರ ಹೇರಾಡಿ ನಿವೃತ್ತ ಪ್ರಾಂಶುಪಾಲರಾದ ದಿನಕರ್ ತೋಳಾರ್, ಹನೆಹಳ್ಳಿ ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರು ಧನಂಜಯ ಆಚಾರ್, ಬಾರ್ಕೂರು ನ್ಯಾಷನಲ್ ಪದವಿಪೂರ್ವ ಕಾಲೇಜಿನ ನಿವೃತ್ತ ಕಚೇರಿ ಮುಖ್ಯಸ್ಥರಾದ ಶ್ರೀ ಸೀತಾರಾಮ್ ಎಸ್, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾದ ಧನಂಜಯ ಶೆಟ್ಟಿ ವೇದಮೂರ್ತಿ ರಮೇಶ್ ಭಟ್ ಅವರನ್ನು ಸನ್ಮಾನಿಸಲಾಯಿತು.

ಸಿ‌ಎ ಶಿವಪ್ರಸಾದ್ ರಾವ್ ಕೂಡ್ಲಿ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ೬ನೇ ಸ್ಥಾನ ಪಡೆದಿರುವ ಕುಮಾರಿ ಅಂಕಿತಾ ವಿಜಯ ಶೆಟ್ಟಿಗಾರ್, ಬಾಲ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ರಾದ ಕುಮಾರಿ ಯಶಸ್ವಿನಿ ಬಾರ್ಕೂರು ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಸಹಾಯಧನ ವಿತರಣೆ ನಡೆಯಿತು.

ಶ್ರೀಮತಿ ಆಶಾಲತಾ ಮತ್ತು ಲೋಕಯ್ಯ, ಶ್ರೀಮತಿ ಪವಿತ್ರ ಮತ್ತು ರಾಜ್ ಪ್ರಸಾದ್, ಉಮೇಶ್ ಆಚಾರ್ಯ ವೀಣಾ ಜ್ಯುವೆಲ್ಲರ್ಸ್ ಬಾರ್ಕೂರು, ಸುಬ್ರಮಣ್ಯ ಪೂಜಾರಿ ಕಾರ್ತಿಕೇಯ, ಗೋಪಿನಾಥ, ಸುಧಾಕರ ರಾವ್, ರಾಮಕೃಷ್ಣ ಅಡಿಗ ಅವರಿಗೆ ವಿಶೇಷವಾದ ಗೌರವ ನೀಡಿ ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಬಿ ಶಾಂತರಾಮ್ ಶೆಟ್ಟಿ, ತ್ರಿಭುಜ ಇಂಡಸ್ಟ್ರೀಸ್ ಹಾಗೂ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆ ಇದರ ನಿಯೋಜಿತ ಅಧ್ಯಕ್ಷರಾದ ಹರೀಶ್ ಕುಂದರ್, ಹನೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಗೋಪಾಲ ನಾಯ್ಕ್ ಉಪಸ್ಥಿತರಿದ್ದರು.

ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಬಿ ಶ್ರೀನಿವಾಸ್ ಶೆಟ್ಟಿಗಾರ್ ರಂಗನಕೆರೆ ಸ್ವಾಗತಿಸಿದರು. ಬಿ ಸುಧಾಕರ್ ರಾವ್ ಬಾರ್ಕೂರು ಇವರು ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಭಾರತಿ, ಶ್ರೀಮತಿ ಪ್ರಫುಲ್ಲ, ಶ್ರೀಮತಿ ವಾಣಿ ಪ್ರಾರ್ಥಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!