spot_img
Wednesday, January 22, 2025
spot_img

ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆ ಅವರಿಗೆ ಡಾ. ಎಸ್. ರಾಧಾಕೃಷ್ಣನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪುರಸ್ಕಾರ


ಕೋಟ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವ ವಿದ್ಯಾ ನಿಲಯ ಧಾರವಾಡ, ಚೇತನ ಫೌಂಡೇಶನ್ ಹುಬ್ಬಳ್ಳಿ ಇವರ ಸಹಯೋಗದ ಆಯೋಜನೆಯ ಧಾರವಾಡ ನುಡಿ ಸಡಗರ-ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನೀಡಲಾಗುವ ಡಾ. ಎಸ್. ರಾಧಾಕೃಷ್ಣನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಗೌರವ ಪುರಸ್ಕಾರಕ್ಕೆ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆ ಭಾಜನರಾಗಿದ್ದಾರೆ.

ಸುಮಾರು 26 ವರ್ಷಗಳ ಕಾಲ ಶಿಕ್ಷಣದೊಂದಿಗೆ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಂದೆಯವರು ವಿದ್ಯಾರ್ಥಿಗಳ ಕ್ರಿಯಾ ಶೀಲ ಚಟುವಟಿಕೆಗಳಿಗೆ ವೇದಿಕೆವೊದಗಿಸಿದವರು. ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದವರು. ಇವರ ಅನೇಕ ಕತೆ, ಕವನ, ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿ ಹಲವು ಕೃತಿಗಳನ್ನು ಹೊರತಂದಿದ್ದಾರೆ. ಇದೆ

ಸೆಪ್ಟಂಬರ್ 9 ರಂದು ಧಾರವಾಡ ವಿಶ್ವ ವಿದ್ಯಾನಿಲಯದ ಕನಕ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನುಡಿ ಸಡಗರ ಸಂಯೋಜಕ ಚಂದ್ರ ಶೇಖರ ಮಾಡಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!