spot_img
Wednesday, January 22, 2025
spot_img

ವಿಷ್ಣುವಿನ ಅಂಶಜಾತರು ಪದ್ಮ ಬ್ರಾಹ್ಮಣರು : ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್

ಕುಂದಾಪುರ : ವೈವಸ್ವತ ಮನ್ವಂತರದಲ್ಲಿ ವಿಶಾಲಪುರದ ದುಷ್ಟದೊರೆ ಕಾಲವಾಸುರನನ್ನು ವಧಿಸಲು ತ್ರಿಮೂರ್ತಿಗಳು ಮಾರ್ಕಂಡೇಯರ ತನ್ಮೂಲಕ ಮಹಾಯಾಗವನ್ನು ಮಾಡಿದಾಗ ಹುಟ್ಟಿದ ಭಾವನಾರಾಯಣ ಮತ್ತು ವೇದಶಿರ್ಷರು ವರಬಲಾನ್ವಿತನಾದ ಕಾಲವಾಸುರನನ್ನು ವಧಿಸಿ ಲೋಕಕಲ್ಯಾಣವನ್ನು ಮಾಡಿ ಮುಂದೆ ಆದಿಕಾಲದಲ್ಲಿ ವಿಷ್ಣುವಿನ ನಾಭಿಯ ತನ್ಮೂಲಕ ಹೊರಬಂದ ಪದ್ಮದ ನಾಳವನ್ನು ಹಗ್ಗವನ್ನಾಗಿಸಿ ವಸ್ತ್ರವನ್ನು ನೇಯ್ದು ಲೋಕಮುಖದಲ್ಲಿ ಮಾನಪ್ರಜ್ಞೆ ಮೂಢಿಸಿದ ಭಾವನಾರಾಯಣ ಮೂಲತಃ ವಿಷ್ಣುವಿನ ಅಂಶಜಾತರಾಗಿದ್ದು ತನ್ಮೂಲಕ ಪದ್ಮಬ್ರಾಹ್ಮಣರೆಂದು ಖ್ಯಾತನಾಮರಾದರೆಂದು ಇತ್ತೀಚೆಗೆ ಶ್ರೀ ಕ್ಷೇತ್ರ ಗೋಕರ್ಣದ ಗಂಗವಿಶ್ವೇಶ್ವರ ಸಭಾಭವನದಲ್ಲಿ ನಡೆದ ಅಖಿಲಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ರಜತಮಹೋತ್ಸವದ ಸರ್ವಾಧ್ಯಕ್ಷರಾದ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಭಾವನಾರಾಯಣ ಮತ್ತು ಭದ್ರಾವತಿ ದೇವಿಗೆ ಹುಟ್ಟಿದಂತಹ 101 ಮಕ್ಕಳು, 101 ಗೋತ್ರೋದ್ಭವರಾಗಿ ಪದ್ಮಶಾಲಿ ಜನಾಂಗದವರೆಂದು ಲೋಕಮಾನ್ಯರಾದರು ಇವರಿಗೆ ಪದ್ಮಬ್ರಾಹ್ಮಣ, ಪದ್ಮಶಾಲಿ, ವಸ್ತ್ರಬ್ರಹ್ಮ ಎಂತಲೂ ಕರೆಯುತ್ತಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಹೊಸಕೋಟೆಯ ಅವಿಮುಕ್ತ ದತ್ತಕ್ಷೇತ್ರ ದತ್ತಾತ್ರೇಯ ಆಶ್ರಮದ ಪೀಠಾಧ್ಯಕ್ಷರಾದ ಸದ್ಗುರು ಶ್ರೀ ಶ್ರೀ ಶ್ರೀ ಮಾತೇ ಮುಕ್ತಾಂಬಿಕೇದೇವಿ ಮತ್ತು ಹಾವೇರಿ ಶ್ರೀ ಗುರು ಮಾರ್ಕಾಂಡೇಶ್ವರ ಪದ್ಮಶಾಲಿ ಗುರುಮಠ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಪ್ರಭುಲಿಂಗ ಸ್ವಾಮೀಜೀಯವರು ಆಶೀರ್ವಚನಗೈದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಖಿಲ ಭಾರತದ ಪದ್ಮಬ್ರಾಹ್ಮಣ ಪುರೋಹಿತ ಸಂಘದ ರಾಷ್ಟ್ರಾಧ್ಯಕ್ಷರಾದ ಬ್ರಹ್ಮಶ್ರೀ ಬೋಜ್ಜನ್ನ ಪಂತುಲು, ಹೈದರಾಬಾದ್‌ನ ಅಖಿಲ ಭಾರತದ ಪದ್ಮಶಾಲಿ ಸಂಘದ ಅಧ್ಯಕ್ಷರಾದ ಕಂದಗಟ್ಲ ಸ್ವಾಮಿ, ಅಖಿಲ ಭಾರತದ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಮಹಿಳಾ ವಿಭಾಗದ ರಾಷ್ಟ್ರಾಧ್ಯಕ್ಷರಾದ ನೀಲಾ ಶ್ರೀಮತಿ ರಾಧಾ ಎಸ್., ಕರ್ನಾಟಕ ಪದ್ಮಶಾಲಿ ಸಂಘದ ಅಧ್ಯಕ್ಷರಾದ ಬಲಭದ್ರ ಎಸ್. ಜಗದೀಶ್, ಕರ್ನಾಟಕ ಪದ್ಮಶಾಲಿ ಸಂಘದ ಮಹಿಳಾ ನಿರ್ದೇಶಕರಾದ ಶ್ರೀಮತಿ ಉಮಾ ಎನ್. ಜಗದೀಶ್, ಅಖಿಲ ಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಉಪಾಧ್ಯಕ್ಷರಾದ ಬ್ರಹ್ಮಶ್ರೀ ಡಾ. ಬಿ. ದೇವಿಪ್ರಸಾದ್, ಕರ್ನಾಟಕ ಪದ್ಮಬ್ರಾಹ್ಮಣ ಪುರೋಹಿತ ಸಂಘದ ನಿಖಟಪೂರ್ವ ರಾಜ್ಯಾಧ್ಯಕ್ಷರಾದ ತರಣಿಕಂಟಿ ವಿಜಯಕುರ್ಮಾ ಉಪಸ್ಥಿತರಿದ್ದು ಶುಭ ಹಾರೈಸಿದರು.

ರಜತಮಹೋತ್ಸವದ ಸರ್ವಾಧ್ಯಕ್ಷರಾದ ಡಾ. ಬಸವರಾಜ್ ಶೆಟ್ಟಿಗಾರ್ ಮತ್ತು ಶ್ರೀಮತಿ ಆಶಾ ಬಿ.ಶೆಟ್ಟಿಗಾರ್‌ರವರಿಗೆ ಮಾರ್ಕಂಡೇಯ ಸಹಿತ ಶಿವಲಿಂಗವನ್ನು ನೀಡಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಕರ್ನಾಟಕ ಅಖಿಲ ಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಪ್ರಧಾನ ಕಾರ್ಯದರ್ಶಿ ಬ್ರಹ್ಮಶ್ರೀ ಮಾಚಾರ್ಲು ಕೇಶವಮೂರ್ತಿ ಭಾರ್ಗವಾಚಾರ್ಯರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!