Sunday, September 8, 2024

ಕಮಲಶಿಲೆ: ಕಾಲುಸಂಕದಿಂದ ನದಿಗೆ ಬಿದ್ದು ಅರ್ಚಕ ಸಾವು


ಕುಂದಾಪುರ: ಉಡುಪಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದೆ. ಇದರೊಂದಿಗೆ ಪ್ರಾಣಹಾನಿಯು ಸಂಭವಿಸುತ್ತಿದೆ. ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಯಡಮೊಗೆ ಗ್ರಾಮದ ಶೇಷಾದ್ರಿ ಐತಾಳ್ (71ವ) ತಮ್ಮ ತೋಟಕ್ಕೆ ಹೋಗುವ ಕಾಲುಸಂಕದಿಂದ ಕುಬ್ಜನದಿಗೆ ಬಿದ್ದು ಮೃತಪಟ್ಟಿದ್ದಾರೆ.

ಶೇಷಾದ್ರಿ ಐತಾಳರು ಕೃಷಿಕರಾಗಿದ್ದು ಅವರ ತೋಟಕ್ಕೆ ಹೋಗಲು ಕುಬ್ಜ ನದಿಗೆ ಅವರೇ ನಿರ್ಮಿಸಿಕೊಂಡ ಅಡಿಕೆಮರದ ಕಾಲುಸಂಕವಿದೆ. ಜು.೪ರಂದು ಸಂಜೆ ಅವರು ನದಿಯ ಇನ್ನೊಂದು ಭಾಗದಲ್ಲಿರುವ ತೋಟಕ್ಕೆ ಹೋಗಿದ್ದರು. ರಾತ್ರಿಯಾದರೂ ಅವರು ಮರಳಿ ಮನೆಗೆ ಬಾರದೆ ಇರುವುದರಿಂದ ಆತಂಕಗೊಂಡ ಮನೆಯವರು ಸಾಕಷ್ಟು ಹುಡುಕಾಟ ನಡೆಸಿದರು. ಬಳಿಕ ನದಿಗೆ ಆಯಾತಪ್ಪಿ ಬಿದ್ದಿರಬಹುದೆಂದು ಶಂಕಿಸಿ, ಹುಡುಕಾಟ ಮುಂದುವರಿಸಿದ್ದಾರೆ. ಕುಬ್ಜ ನದಿಯಲ್ಲಿ ನೀರಿನ ಹರಿವಿಕೆ ಹೆಚ್ಚಾಗಿದ್ದರಿಂದ ಶೋಧ ಕಾರ್ಯಕ್ಕೆ ತೊಂದರೆಯಾಯಿತು.

ಬುಧವಾರ ಬೆಳಿಗ್ಗೆ ಮುಳುಗು ತಜ್ಞ, ಶೌರ್ಯ ತಂಡದ ಮಂಜುನಾಥ ನಾಯ್ಕ್ ಕೊಡ್ಲಾಡಿ ಅವರ ನೇತೃತ್ವದ ತಂಡ ಪ್ರವಾಹದ ನೀರಿನಲ್ಲಿ ಶೋಧ ಕಾರ್ಯ ಆರಂಭಿಸಿದರು. ನಿರಂತರ ಶೋಧದ ಬಳಿಕ ಕಾಲುಸಂಕದಿಂದ 50 ಮೀಟರ್ ದೂರದಲ್ಲಿ ಪೊದೆಗಳಿಗೆ ಮೃತದೇಹ ಸಿಲುಕಿಕೊಂಡಿರುವುದನ್ನು ಪತ್ತೆ ಹಚ್ಚಿ, ಮೃತದೇಹವನ್ನು ನದಿಯಿಂದ ಮೇಲೇತ್ತಲಾಯಿತು. ಶವವನ್ನು ಪತ್ತೆ ಹಚ್ಚುವಲ್ಲಿ ಮಂಜುನಾಥ್ ನಾಯ್ಕ್ ಜೊತೆಗೆ ಶೌರ್ಯ ತಂಡದ ಕೌಶಿಕ್ ಕೊಡ್ಲಾಡಿ, ರಾಘವೇಂದ್ರ, ಉಮೇಶ್ ನಾಲ್ಕು ಜನರ ತಂಡ ಸಹಕರಿಸಿತು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!