spot_img
Wednesday, January 22, 2025
spot_img

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ನೆಟ್‌ವರ್ಕ್ ಸಂಪರ್ಕ ಮಂಜೂರಾತಿ- ಸಂಸದ ಬಿ.ವೈ.ರಾಘವೇಂದ್ರ


ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೂರಸಂಪರ್ಕ ವ್ಯವಸ್ಥೆ ಸುಧಾರಿಸುವಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆಟ್ ವರ್ಕ್ ಸಂಪರ್ಕ ಮಂಜೂರಾತಿ ನೀಡಿದ ಕೇಂದ್ರ ಸರ್ಕಾರವನ್ನು ಸಂಸದ ಬಿ. ವೈ. ರಾಘವೇಂದ್ರ ಅಭಿನಂದಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ದೂರ ಸಂಪರ್ಕ ವ್ಯವಸ್ಥೆಯಲ್ಲಿನ ಅಭಿವೃದ್ದಿ ಮತ್ತು ಸುಧಾರಣ ದೃಷ್ಟಿಯಿಂದ ಅದರಲ್ಲೂ ದೂರಸಂಪರ್ಕ ವ್ಯವಸ್ಥೆಯಿಂದ ವಂಚಿತವಾದ ನೂರಾರು ಕುಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ತುರ್ತಾಗಿ ದೂರಸಂಪರ್ಕ ವ್ಯವಸ್ಥೆಯನ್ನು ಮತ್ತು ಮೊಬೈಲ್ ಟವರ್ ಸ್ಥಾಪನೆಗೆ ಕಳೆದ 3-4 ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದು ಬಿ.ಎಸ್. ಯಡಿಯೂರಪ್ಪರವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್. ಜೊತೆಯಲ್ಲಿ ಖಾಸಗಿ ಕಂಪನಿಗಳಾದ ಜಿಯೋ ಮತ್ತು ಏರ್ ಟೆಲ್ ಸಂಸ್ಥೆಗಳನ್ನು ಸಹ ಕ್ಷೇತ್ರದಲ್ಲಿನ ನೆಟ್ ವರ್ಕ್ ವಂಚಿತ ಪ್ರದೇಶಗಳಿಗೆ ಮೊಬೈಲ್ ಟವರ್ ಒದಗಿಸುವ ನಿಟ್ಟಿನಲ್ಲಿ ಅವರುಗಳೊಂದಿಗೆ ಹಲವಾರು ಬಾರಿ ಸಭೆ ನಡೆಸಿ, ಮೂರು ಸಂಸ್ಥೆಗಳಿಗೆ ಗುರಿ ನಿಗಧಿಪಡಿಸಲಾಗಿತ್ತು. ಕೆಲವು ಕಡೆಗಳಲ್ಲಿ ಖಾಸಗಿ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ ಕಂಪನಿಗಳು ಮೊಬೈಲ್ ಟವರ್ ಗಳನ್ನು ಸ್ಥಾಪಿಸಿದರೂ ಸಹ ಕೆಲವು ಕುಗ್ರಾಮಗಳಲ್ಲಿ ಜನವಸತಿ ಕಡಿಮೆ ಇರುವ ಕಾರಣದಿಂದಾಗಿ ಈ ಖಾಸಗಿ ಕಂಪನಿಗಳು ಟವರ್ ನಿರ್ಮಾಣದಲ್ಲಿ ಆಸಕ್ತಿ ತೋರಿರಲಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದಲೇ ಮೊಬೈಲ್ ಟವರ್ ನಿರ್ಮಾಣವನ್ನು ಕೈಗೊಳ್ಳಲು ದೂರಸಂಪರ್ಕ ಸಚಿವರಾದ ಅಶ್ವಿನಿವೈಷ್ಣವ್ ಅವರಿಗೆ 2022ರಲ್ಲಿ 96 ಸ್ಥಳಗಳಲ್ಲಿ ಟವರ್ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿತ್ತು. ತದನಂತರದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ನೆಟ್ ವರ್ಕ್ ಇಲ್ಲದ ಸ್ಥಳಗಳ ವಿವರಗಳನ್ನೂ ಸಹ ಕೇಂದ್ರ ದೂರಸಂಪರ್ಕ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿಕೊಡಲಾಗಿತ್ತು.

ಸತತ ಪ್ರಯತ್ನಕ್ಕೆ ಮನ್ನಣೆ ನೀಡಿದ ಕೇಂದ್ರ ದೂರಸಂಪರ್ಕ ಸಚಿವರಾದ ಅಶ್ವಿನಿ ವೈಷ್ಣವ್ ರವರು ಶಿವಮೊಗ್ಗ ಟೆಲಿಕಾಂ ಜಿಲ್ಲೆಗೆ 4ಜಿ ಸ್ಯಾಚುರೇಷನ್ ಯೋಜನೆಯಡಿಯಲ್ಲಿ 198 ಹಾಗೂ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ 27 ಹೊಸ 4G ಟವರ್ಗಳಿಗೆ ಒಟ್ಟಾರೆ 225 ಟವರ್‌ಗಳಿಗೆ ಮಂಜೂರಾತಿ ನೀಡಿದ್ದಾರೆ. ಸಾಗರ ತಾಲ್ಲೂಕಿನಲ್ಲಿ 89, ಹೊಸನಗರ ತಾಲ್ಲೂಕಿನಲ್ಲಿ 35, ತೀರ್ಥಹಳ್ಳಿ ತಾಲ್ಲೂಕಿನಲ್ಲಿ 27, ಶಿವಮೊಗ್ಗ ತಾಲ್ಲೂಕಿನಲ್ಲಿ 18, ಶಿಕಾರಿಪುರ ತಾಲ್ಲೂಕಿನಲ್ಲಿ 13, ಭದ್ರಾವತಿ ಮತ್ತು ಸೊರಬ ತಾಲ್ಲೂಕಿನಲ್ಲಿ ತಲಾ8 ಸ್ಥಳಗಳಲ್ಲಿ ಹಾಗೂ ಬೈಂದೂರು ಕ್ಷೇತ್ರದಲ್ಲಿ 25 ಟವರ್ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ ಎಂದು ಸಂಸದರು ತಿಳಿಸಿದ್ದಾರೆ.

ಈ ಪೈಕಿ ಮೊದಲ ೩ ಹಂತಗಳಲ್ಲಿ ಶಿವಮೊಗ್ಗ ಜಿಲ್ಲೆಯ 112 ಸ್ಥಳಗಳಲ್ಲಿ ಹಾಗೂ ಬೈಂದೂರು ಕ್ಷೇತ್ರದಲ್ಲಿ 25 ಟವರ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಈ ಎಲ್ಲಾ ಸ್ಥಳಗಳ ಸರ್ವೆ ಕಾರ್ಯ ನಡೆಸಿದ್ದು, ಸೂಕ್ತ ಜಾಗವನ್ನು ಬಿ.ಎಸ್.ಎನ್.ಎಲ್. ಗುರುತಿಸಿ, ಕಂದಾಯ ಇಲಾಖೆಯ ಭೂಮಿ ಹಸ್ತಾಂತರಕ್ಕೆ ಜಿಲ್ಲಾಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೂಮಿ ಹಸ್ತಾಂತರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಬಿ.ಎಸ್.ಎನ್.ಎಲ್.ರವರು ಮನವಿ ಮಾಡಿದ್ದು ಈ ಪೈಕಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ವತಿಯಿಂದ ಈಗಾಗಲೆ 8 ಸ್ಥಳಗಳನ್ನು ಹಸ್ತಾಂತರಿಸಿದ್ದು, ಇನ್ನೊಂದು ಸ್ಥಳವನ್ನು ಸಹ ಶೀಘ್ರದಲ್ಲಿಯೇ ಹಸ್ತಾಂತರಿಸಲಿದೆ.

ಶಿವಮೊಗ್ಗ ಜಿಲ್ಲೆಯ ಕಂದಾಯ ಇಲಾಖೆಯ 73 ಸ್ಥಳಗಳನ್ನು ಹಾಗೂ ಬೈಂದೂರು ಕ್ಷೇತ್ರದ ಕಂದಾಯ ಇಲಾಖೆಯ 23 ಸ್ಥಳಗಳನ್ನು ಕೂಡಲೇ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ ಜಿಲ್ಲೆಯ 33 ಹಾಗೂ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 2 ಸ್ಥಳಗಳಲ್ಲಿ ಟವರ್ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಈಗಾಗಲೇ ಪರಿವೇಶ್ ಪೋರ್ಟಲ್ ನಲ್ಲಿ ವಿವರಗಳನ್ನು ಒದಗಿಸಲಾಗಿದ್ದು, ಶೀಘ್ರವಾಗಿ ಕೇಂದ್ರ ಸರ್ಕಾರದ ಮೂಲಕ ಅರಣ್ಯ ಪ್ರದೇಶದಲ್ಲಿಯೂ ಸಹ ಟವರ್ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರತಿಯೊಂದು ಟವರ್ ನಿರ್ಮಾಣಕ್ಕೆ 75ಲಕ್ಷ ರೂಪಾಯಿಗಳಿಂದ 1ಕೋಟಿ ರೂಪಾಯಿಗಳವರೆಗೆ ವೆಚ್ಚ ತಗಲಲಿದ್ದು, ಕ್ಷೇತ್ರದ ಸುಮಾರು 225 ಟವರ್ ನಿರ್ಮಾಣಕ್ಕೆ ಸುಮಾರು ರೂ.200 ಕೋಟಿಗೂ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರವು ಬಿ.ಎಸ್.ಎನ್.ಎಲ್. ಮೂಲಕ ಯು.ಎಸ್.ಓ.ಎಫ್. ಅನುದಾನದಲ್ಲಿ ವೆಚ್ಚ ಭರಿಸಲಿದೆ.

ಈ ಎಲ್ಲಾ ಮೊಬೈಲ್ ಟವರ್ ಗಳ ನಿರ್ಮಾಣವನ್ನು ಡಿಸೆಂಬರ್ 2023ರೊಳಗಾಗಿ ಮುಕ್ತಾಯಗೊಳಿಸುವಂತೆ ಸೂಚನೆ ನೀಡಲಾಗಿದ್ದು, ಈಗಾಗಲೇ ಟವರ್ ನಿರ್ಮಾಣಕ್ಕೆ ಗುತ್ತಿಗೆದಾರರನ್ನು ಸಹ ನೇಮಿಸಲಾಗಿದೆ.

ಪಡಿತರ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಬ್ಯಾಂಕ್, ಆರೋಗ್ಯ ಮತ್ತಿತರೆ ಕ್ಷೇತ್ರಕ್ಕೆ ಪ್ರಯೋಜನವನ್ನು ವಿಸ್ತರಿಸಲು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ಡಿಜಿಟಲ್ ಸಂಪರ್ಕ, ಆರ್ಥಿಕ ಚಟುವಟಿಕೆ ಮತ್ತು ಸಾಮಾಜಿಕ ಜೀವನವನ್ನು ಸುಧಾರಿಸಲು ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಸೇವೆಯನ್ನು ಸಹ ನೀಡುವಲ್ಲಿ ದೂರಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದು ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು “ಬ್ಲಾಕ್ ಸ್ಯಾಚುರೇಶನ್ ಪ್ರಾಜೆಕ್ಟ್”ನ್ನು ದೇಶದ ನಾಲ್ಕು ಬ್ಲಾಕ್ ಗಳಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಚಿಂತನೆ ನಡೆಸಿ, ಕರ್ನಾಟಕ ರಾಜ್ಯದ ಸಾಗರ ತಾಲ್ಲೂಕನ್ನು ಆಯ್ಕೆ ಮಾಡಿದ್ದು ನನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರಕಿದಂತಾಯಿತು.
ಈಗಾಗಲೇ ಜಿಲ್ಲೆಯ ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್. ಸಂಪರ್ಕ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ನೆಟ್ವರ್ಕ್ ಇಲ್ಲದೇ ಜನಸಾಮಾನ್ಯರಿಗೆ ಆನ್ಲೈನ್ ಮೂಲಕ ಹಣದ ವ್ಯವಹಾರ ಮಾಡಲೂ ಸಹ ತೊಂದರೆಯಾಗುತ್ತಿರುವುದರಿಂದ, ಹಾಲಿ ಇರುವ ಟವರ್ ಗಳಲ್ಲಿಯೂ ಸಹ ಉತ್ತಮ ರೀತಿಯಲ್ಲಿ ನೆಟ್ವರ್ಕ್ ಸಂಪರ್ಕ ದೊರೆಯುವಂತೆ ತೀವ್ರ ಗಮನಹರಿಸುವಂತೆ ಹಾಗೂ ಗ್ರಾಮಸ್ಥರಿಂದ ಆಕ್ಷೇಪಣೆ ಬಾರದಂತೆ ಕ್ರಮ ವಹಿಸುವಂತೆ ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿರುವ ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮಂಜೂರಾಗಿರುವ ವಿಶೇಷ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಟಾನಗೊಳಿಸುವಲ್ಲಿ ಹೆಚ್ಚಿನ ಆಸಕ್ತಿವಹಿಸಿ ಅಗತ್ಯ ಆದೇಶಗಳನ್ನು ನೀಡುತ್ತಿರುವ ಎಲ್ಲ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!