spot_img
Wednesday, January 22, 2025
spot_img

ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಐ.ಬಿ.ಎಮ್. ಪ್ರೈವೆಟ್ ಲಿಮಿಟೆಡ್ ಶೈಕ್ಷಣಿಕ ಒಪ್ಪಂದ

         ಕುಂದಾಪುರ: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ಐಬಿ‌ಎಮ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನಡುವೆ ಶೈಕ್ಷಣಿಕ ಒಪ್ಪಂದ ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
 
ಮುಖ್ಯ ಅತಿಥಿ ಐಬಿ‌ಎಮ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಕಂಟ್ರಿ ಮ್ಯಾನೇಜರ್ ಶ್ರೀ ಜಗದೀಶ್ ಭಟ್ ಅವರು ಐಬಿ‌ಎಮ್ ತರಬೇತಿಯ ಅಗತ್ಯತೆ ಹಾಗೂ ಅನಿವಾರ್ಯತೆ ಬಗ್ಗೆ ಮಾಹಿತಿ ನೀಡಿದರು.
 
ಇನ್ನೋರ್ವ ಅತಿಥಿಯಾದ ಐಬಿ‌ಎಮ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ರೀಜಿನಲ್ ಮ್ಯಾನೇಜರ್ ಶ್ರೀ ಮಧುಸೂಧನ್ ರಾವ್ ಆರ್.ಡಿ. ಅವರು  ತಂತ್ರಜ್ಞಾನದಲ್ಲಿ ಆಗುತ್ತಿರುವ ಮಹತ್ವದ ಬದಲಾವಣೆ ಕುರಿತು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
 
ತುಳಿಸಿ ಪ್ರೈವೆಟ್ ಲಿಮಿಟೆಡ್‌ನ ಶ್ರೀ ಕೆ. ಬಾಲ ಗಂಗಾಧರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ, MOUನ ಉದ್ದೇಶ, ಅವಶ್ಯಕತೆ ಹಾಗೂ MOUನಿಂದ ಆಗುವ ಪ್ರಯೋಜನಗಳ ಕುರಿತು ವಿಶ್ಲೇಸಿದರು. 

 ಐಕ್ಯೂ‌ಎಸಿ ಸಂಯೋಜಕರಾದ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ವಿ.ಭಟ್ ಪ್ರಾಸ್ತಾವಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ರೀ ಮಹೇಶ್ ಕುಮಾರ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ಸುಧೀರ್ ಕುಮಾರ್ ನಿರೂಪಿಸಿದರು. ವಿದ್ಯಾರ್ಥಿನಿ ಪವಿತ್ರಾ ಪೈ ಪ್ರಾರ್ಥಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!