Sunday, September 8, 2024

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ


ಕುಂದಾಪುರ: ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 81 ನೇ ತಿಂಗಳ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಗುರು ದೇವದಾ ಕೂಡ್ಲಿಯವರು ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ವಿವರಣೆ ನೀಡಿದರು.

ವೇದಿಕೆಯಲ್ಲಿ ಶ್ರೀ ವಾಸುದೇವ ಅಂಗನವಾಡಿಯ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ಸೇರುಗಾರ್, ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ಮಂಡಳಿ, ಕುಂದಾಪುರದ ಶ್ರೀಮತಿ ವಸಂತಿ ಆರ್. ಪಂಡಿತ್, ವಾಸುದೇವ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಶ್ರೀಮತಿ ಸರೋಜಾ, ಆಶಾ ಕಾರ್ಯಕರ್ತೆ ಶ್ರೀಮತಿ ಜ್ಯೋತಿ ಮಹಾಬಲ ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಪ್ಪಿನಕುದ್ರು ಶಾಖೆಯ ಉಪಾಧ್ಯಕ್ಷೆ ಶ್ರೀಮತಿ ಜಯಶ್ರೀ ಪ್ರಭಾಕರ್ ಆಚಾರ್, ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಹಾಗೂ ಕಾರ್ಯದರ್ಶಿ ಶ್ರೀಮತಿ ಗೀತಾಂಜಲಿ ಬಿ. ಕಾಮತ್‌ರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಕುಮಾರಿ ಲಾವಣ್ಯ, ಉಪ್ಪಿನಕುದ್ರು ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ ಶ್ರೀ ವಾಸುದೇವ ಮಹಿಳಾ ಕುಣಿತ ಭಜನಾ ಮಂಡಳಿ ಮತ್ತು ಬಾಲ ಭಜನಾ ಮಂಡಳಿಯ ಉದ್ಘಾಟನೆಯೂ ಜರುಗಿತು. ಊರ ಮಹಿಳೆಯರು ಹಾಗೂ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನೂ ವಿತರಿಸಲಾಯಿತು. ಕೊನೆಯಲ್ಲಿ ಶ್ರೀ ವಾಸುದೇವ ಮಹಿಳಾ ಕುಣಿತ ಭಜನಾ ಮಂಡಳಿಯವರು ಪ್ರಪ್ರಥಮವಾಗಿ ತಮ್ಮ ಕಾರ್ಯಕ್ರಮವನ್ನು ಕೊಗ್ಗ ದೇವಣ್ಣ ಕಾಮತ್ ವೇದಿಕೆಯಲ್ಲಿ ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಭಾಸ್ಕರ್ ಕೊಗ್ಗ ಕಾಮತ್ ಮತ್ತು ಕುಮಾರಿ ಲಾವಣ್ಯ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!