Sunday, September 8, 2024

ಯಶಸ್ವೀ ವಾರ್ಷಿಕೋತ್ಸವ: ಬಲಿಪ ನಾರಾಯಣ ಭಾಗವತರ ಸಂಸ್ಮರಣೆ

ತೆಕ್ಕಟ್ಟೆ: ತೆಂಕಣದ ಯಕ್ಷಗಾನದ ಅಭೂತಪೂರ್ವ ಮಾಣಿಕ್ಯ ಸಮಾಜದಿಂದ ಕಳಚಿದ್ದು ಯಕ್ಷಗಾನಕ್ಕೆ ದೊಡ್ಡ ನಷ್ಟ. ತನ್ನದೇ ಶೈಲಿಯನ್ನು ಅಚ್ಚೊತ್ತಿ ಸಮಾಜದಿಂದ ವಿಮುಖರಾದ ಬಲಿಪರು ಪ್ರಸಿದ್ಧ ಭಾಗವತರುಗಳಿಗೆ ಮಾರ್ಗದರ್ಶಿಯಾಗಿದ್ದರು. ಮತ್ತೆ ಮತ್ತೆ ಬಲಿಪರ ನೆನಪು ಮರುಕಳಿಸುವುದು ನಿರಂತರವಾಗಿರುತ್ತದೆ. ಅವರ ಒಡನಾಡಿಗಳು ನಾವಾಗಿದ್ದೇವು ಎನ್ನುವುದೇ ನಮ್ಮ ಭಾಗ್ಯ ಎಂದು ಮಂಗಳೂರು ಯಕ್ಷದಾಮದ ಜನಾರ್ಧನ ಹಂದೆ ಸಂಸ್ಮರಣಾ ಮಾತುಗಳಿಂದ ಪ್ರಸ್ತಾಪಿಸಿದರು.

ತೆಕ್ಕಟ್ಟೆಯ ಕೊಮೆ ಯಶಸ್ವೀ ಕಲಾವೃಂದದ ವಾರ್ಷಿಕೋತ್ಸವ ಸಂದರ್ಭದಲ್ಲಿ ಫೆಬ್ರವರಿ ೨೪ರಂದು ಕೊಮೆಯ ಹೆಗ್ಡೆಕೆರೆ ಬೊಬ್ಬರ್ಯ ದೈವಸ್ಥಾನದ ವಠಾರದಲ್ಲಿ ಬಲಿಪ ನಾರಾಯಣ ಭಾಗವತರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಬಲಿಪರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಹಂದೆಯವರು ಮಾತನ್ನಾಡಿದರು.

ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಅಂತರ್‌ರಾಷ್ಟ್ರೀಯವಾಗಿ ಹೆಸರನ್ನು ಗಳಿಸಿದ ಯಶಸ್ವೀ ಕಲಾವೃಂದ ಬೆಳ್ಳಿ ಹಬ್ಬವನ್ನು ಕಾಣುವಲ್ಲಿ ದಾಪುಗಾಲು ಹಾಕುತ್ತಿದೆ. ಇಲ್ಲಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಬಲಿಪರಂತಹ ಮೇರು ಕಲಾವಿದರನ್ನು ಕಳೆದುಕೊಂಡು ಸಂಸ್ಮರಣೆ ಮಾಡುವಲ್ಲಿ ಬಹಳ ವಿಷಾಧವನ್ನು ತಾಳಿದೆ. ಯಶಸ್ವೀ ವೇದಿಕೆಯಲ್ಲಿ ಸಮ್ಮಾನಗೊಂಡ ಬಲಿಪರು ಇನ್ನಿಲ್ಲವೆನ್ನುವುದನ್ನು ಸಹಿಸಲು ಆಗುತ್ತಿಲ್ಲ ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಗೌರವಾಧ್ಯಕ್ಷ ಗೋಪಾಲ ಪೂಜಾರಿ, ಗುರುಗಳಾದ ಲಂಬೋದರ ಹೆಗಡೆ, ಪಟ್ಟಾಭಿರಾಮ ಭಜನಾ ಮಂಡಳಿ ಅಧ್ಯಕ್ಷ ಚಂದ್ರ ಕೊಮೆ, ಯಶಸ್ವೀ ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಕು| ಪೂಜಾ ಆಚಾರ್ ಧನ್ಯವಾದಗೈದು, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಟ್ಟಾಭಿರಾಮ ಭಜನಾ ಮಂಡಳಿ ಕೊಮೆ-ಕೊರವಡಿಯ ಹಲವು ತಂಡದವರು ಕುಣಿತ ಭಜನೆಯನ್ನು ರಂಗದಲ್ಲಿ ಪ್ರಸ್ತುತ ಪಡಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!