Thursday, November 21, 2024

ಅರೆಹೊಳೆ ನಂದಗೋಕುಲ ರಂಗಶಾಲೆಯಲ್ಲಿ ಹೂವಿನಕೋಲು ಪ್ರದರ್ಶನ

ಬೈಂದೂರು: ದೋಣಿಯಲ್ಲಿ ನಡೆಸುವ ನಾವಿಕರು ನಾವು. ಮುಳುಗದಂತೆ ಜಾಗೃತೆ ವಹಿಸುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿದ್ದೇವೆ. ಯಶಸ್ವೀ ಕಲಾವೃಂದ ಹಾಗೂ ಅರೆಹೊಳೆ ಪ್ರತಿಷ್ಠಾನ ಅವಿರತವಾಗಿ ಸಾಂಸ್ಕೃತಿಕವಾಗಿ ಚಿಂತಿಸುತ್ತಿರುವ, ಒಂದಷ್ಟು ಕಲಾವಿದರನ್ನು ಹುಟ್ಟು ಹಾಕುವ ಸಂಸ್ಥೆ. ನಂದಗೋಕುಲ ರಂಗಶಾಲೆಯ ಜನಾರ್ಪಣೆ ಕಾರ್ಯಕ್ರಮಕ್ಕೆ ಈ ಸಂಸ್ಥೆಯನ್ನು ಅರೆಹೊಳೆಗೆ ಬರಮಾಡಿಕೊಂಡು ಕಾರ್ಯಕ್ರಮ ಏರ್ಪಡಿಸಿಕೊಳ್ಳುವ ಮೂಲಕ ಶ್ರಮಿಸುತ್ತಿರುವ ಸಂಸ್ಥೆಯನ್ನು ಹತ್ತಿರದಿಂದ ಬಲ್ಲ ನಾನು ಸಾಂಪ್ರದಾಯಿಕ ಕಲೆಗೆ ಪ್ರಾಶಸ್ತ್ಯ ನೀಡಿ ಗೌರವಿಸುತ್ತೇನೆ ಎಂದು ಅರೆಹೊಳೆ ಪ್ರತಿಷ್ಠಾನದ ರೂವಾರಿ ಸದಾಶಿವ ರಾವ್ ಅರೆಹೊಳೆ ಉಲ್ಲೇಖಿಸಿದರು.

ಜನವರಿ 26ರಂದು ತೆಕ್ಕಟ್ಟೆ ಕೊಮೆಯ ಯಶಸ್ವೀ ಕಲಾವೃಂದದ ಚಿಣ್ಣರ ಹೂವಿನಕೋಲು ಕಾರ್ಯಕ್ರಮವು ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ದಿಬ್ಬಣದಲ್ಲಿ ನಂದಗೋಕುಲ ರಂಗಶಾಲೆಯ ಜನಾರ್ಪಣೆ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಕಾರ ಹೂವಿನಕೋಲು ಕಾರ್ಯಕ್ರಮ ನೆರವೇರಿಸಿಕೊಂಡು ತಂಡಕ್ಕೆ ಗೌರವ ಸಲ್ಲಿಸಿ ಸದಾಶಿವ ರಾವ್ ಮಾತನ್ನಾಡಿದರು.

ಕಾರ್ಯಕ್ರಮದಲ್ಲಿ ಕೆ.ಸಿ. ಪ್ರಭು, ಯಕ್ಷ ಸಂಘಟಕ ಪ್ರಶಾಂತ್ ಶೆಟ್ಟಿ, ಶಿವರಾಮ ಮಧ್ಯಸ್ಥ, ಪೋಷಕರಾದ ಗೋಪಾಲ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯಶಸ್ವೀ ಕಲಾವೃಂದದ ಚಿಣ್ಣರಿಂದ ಸುಧನ್ವಾರ್ಜುನ ಯಕ್ಷಗಾನದ ಒಂದು ಭಾಗ ಹೂವಿನಕೋಲು ಕಾರ್ಯಕ್ರಮ ಉದ್ಘಾಟನೆಗೊಂಡ ನಂದಗೋಕುಲ ರಂಗ ಮಂದಿರದಲ್ಲಿ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!