spot_img
Wednesday, April 22, 2026
spot_img

ನಾಲ್ಕೇ ವರ್ಷದಲ್ಲಿ ಹವಾನಿಯಂತ್ರಿತ ಸ್ವಂತ ಕಟ್ಟಡ ನಿರ್ಮಿಸಿದ ಜಡ್ಕಲ್ ವ್ಯವಸಾಯ ಸೇವಾ ಸಂಘದ ಕಾರ್ಯವೈಖರಿ ಮಾದರಿ-ಡಾ.ಎಂ.ಎನ್.ರಾಜೇಂದ್ರ ಕುಮಾರ್


ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ‘ಸಹಕಾರ ಸಿರಿ’ ಉದ್ಘಾಟನೆ
ಕುಂದಾಪುರ: ಕೃಷಿ ಸಾಲವನ್ನು ಕಳೆದ 27 ವರ್ಷಗಳಿಂದ ಶೇ.100ರಷ್ಟು ಮರುಪಾವತಿ ಮಾಡುವಲ್ಲಿ ಅವಿಭಜಿತ ದ.ಕ ಜಿಲ್ಲೆಯ ಸಹಕಾರ ಸಂಘಗಳ ದೇಶದಲ್ಲಿಯೇ ಗುರುತಿಸಿಲ್ಪಟ್ಟಿದ್ದರೆ ಸಹಕಾರ ವ್ಯವಸ್ಥೆಯಲ್ಲಿನ ಬದ್ಧತೆ, ಪ್ರಾಮಾಣಿಕತೆ ಕಾರಣ. ಸಹಕಾರ ವ್ಯವಸ್ಥೆ ಇವತ್ತು ವಿಶ್ವಾಸಾರ್ಹವಾಗಿ ಬೆಳೆದಿದೆ. ಅದಕ್ಕೆ ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಬೆಳವಣಿಗೆಯೇ ಸಾಕ್ಷಿಯಾಗಿದೆ. ಕೇವಲ ನಾಲ್ಕು ವರ್ಷದಲ್ಲಿ ಈ ಗ್ರಾಮೀಣ ಪ್ರದೇಶದಲ್ಲಿ ಭವ್ಯವಾದ, ಹವಾನಿಯಂತ್ರಿತ ಕಟ್ಟಡ ನಿರ್ಮಿಸಿದೆ. ಇದು ಸಹಕಾರದಿಂದ ಮಾತ್ರ ಸಾಧ್ಯ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಜಡ್ಕಲ್ ಗ್ರಾಮದ ಬೀಸಿನಪಾರೆಯಲ್ಲಿ ನಿರ್ಮಾಣ ಮಾಡಲಾದ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ಸಹಕಾರ ಸಿರಿಯನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ಸೇವೆಯೇ ಪ್ರಮುಖವಾಗುತ್ತದೆ. ಸೇವೆಯಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ಸಂಘ ಪ್ರಥಮ ವರ್ಷದಿಂದಲೇ ಲಾಭಾಂಶ ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಈ ಸಾಲಿನಲ್ಲಿ ಒಂದು ಕೋಟಿ ಲಾಭ ಮಾಡಿದರೆ ಎಸ್.ಸಿ.ಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ಚಿನ್ನ ನೀಡಿ ವಿಶೇಷವಾಗಿ ಗೌರವಿಸುತ್ತೇನೆ ಎಂದು ಹೇಳಿದ ಅವರು ನೂತನ ಕಟ್ಟಡ ನಿರ್ಮಾಣ, ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಿದಕ್ಕೆ ರೂ.10 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು.

ಸಹಕಾರ ಕ್ಷೇತ್ರದಲ್ಲಿ ಏನೇ ಸಮಸ್ಯೆ ಬಂದರೂ ನನಗೆ ಕರೆ ಮಾಡಿ. ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನಿಸುತ್ತೇನೆ. ಕೃಷಿ ಸಾಲದ ಜೊತೆಯಲ್ಲಿ ಕೃಷಿಯೇತರ ಸಾಲವನ್ನು ನೀಡಿ. ಸದಸ್ಯರ ಆರ್ಥಿಕ ಅಭಿವೃದ್ದಿಯಲ್ಲಿ ಸ್ಪಂದಿಸಿ, ದ.ಕ ಜಿಲ್ಲಾ ಕೇಂದ್ರ ಬ್ಯಾಂಕು ಕೂಡಾ ಸಹಕಾರ ನೀಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಮಾತನಾಡಿ, ಸಂಘವು ವಿಭಜನೆಯಾದಾಗ ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ರೂ. 1,76,34,812 ಕೊಡಲು ಬಾಕಿ ಇದ್ದು, ಈ ಮೊತ್ತವನ್ನು ಒಂದು ವರ್ಷದೊಳಗೆ ಸಂಪೂರ್ಣ ಪಾವತಿಸಲಾಗಿದೆ. ಸಂಘವು ವಿಭಜನೆಯಾದ 8 ತಿಂಗಳಲ್ಲಿ 31-3-2019ಕ್ಕೆ ರೂ 35, 27,662 ಲಾಭ ಗಳಿಸಿದೆ. ನಂತರ 31-3-2020 ಕ್ಕೆ ರೂ 6,18,217 ಲಾಭ 31-3-2021 ಕ್ಕೆ ರೂ 58,86,917 ಹಾಗೂ 31-3-2022ಕ್ಕೆ ರೂ. 74,94,058 ಲಾಭವನ್ನು ಗಳಿಸಿದೆ ಎಂದರು.

ಬೀಸಿನಪಾರೆಯಲ್ಲಿ 45 ಸೆಂಟ್ಸ್ ಜಾಗ ಖರೀದಿಸಿ 1 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಹಾಯ ಪಡೆದು ನಬಾರ್ಡನವರ ಎನ್.ಎಸ್.ಸಿ ಘಟಕದಿಂದ ರೂ 53 ಲಕ್ಷದ ನೆರವನ್ನು ಪಡೆಯಲಾಗಿದೆ. ಈಗಾಗಲೆ ನಬಾರ್ಡ ರೂ. 42 ಲಕ್ಷ ಸಾಲವನ್ನು ಮಂಜೂರು ಮಾಡಿದೆ. ಕಟ್ಟಡಕ್ಕೆ ನಬಾರ್ಡನಿಂದ ರೂ 42 ಲಕ್ಷ ಹಾಗೂ ಉಳಿದ ಮೊತ್ತವನ್ನು ಕಟ್ಟಡ ನಿಧಿಯಿಂದ ವಿನಿಯೋಗಿಸಲಾಗಿದೆ ಎಂದು ಪ್ರಭಾಕರ ಶೆಟ್ಟಿ ತಿಳಿಸಿದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಸಹಕಾರ ಕ್ಷೇತ್ರವನ್ನು ಬೆಳೆಸುವಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಪಾತ್ರ ಮಹತ್ವದ್ದು. ಮಾರಾಟ ಮಂಡಳದ ನೇತೃತ್ವ ವಹಿಸಿ ರಾಜ್ಯದ ಸಹಕಾರ ಕ್ಷೇತ್ರವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸ ಅವರು ಮಾಡುತ್ತಿದ್ದಾರೆ. ಕೇವಲ 4 ವರ್ಷ ಹಿಂದೆ ಕೊಲ್ಲೂರು ವ್ಯವಸಾಯ ಸಂಘದ ವಿಭಜನೆಗೊಂಡ ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘ ಜಡ್ಕಲ್‌ನ ಹೃದಯ ಭಾಗದಲ್ಲಿ 45 ಸೆಂಟ್ಸ್ ಸ್ಥಳ ಖರೀದಿಸಿ, ರಾಷ್ಟ್ರೀಕೃತ ಬ್ಯಾಂಕುಗಳ ಮಾದರಿಯಲ್ಲಿ ಭವ್ಯವಾದ ಕಟ್ಟಡ ನಿರ್ಮಾಣ ಮಾಡಿದ್ದು ಇಡೀ ಸಹಕಾರ ವ್ಯವಸ್ಥೆಗೆ ಮಾದರಿಯಾಗಿದೆ ಎಂದರು.

ಭದ್ರತಾ ಕೊಠಡಿಯನ್ನು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು. ಸಭಾಭವನವನ್ನು ಸೆಳ್ಕೋಡು ಶ್ರೀ ಮಹಿಷಾಮರ್ದಿನಿ ದೇವಸ್ಥಾನದ ಆಡಳೀತ ಮೊಕ್ತೇಸರ ವೇ.ಮೂ.ಸೂರ್ಯನಾರಾಯಣ ಭಟ್ ಉದ್ಘಾಟಿಸಿದರು. ಪ್ರೇರಕರ ಕೊಠಡಿಯನ್ನು ಜಡ್ಕಲ್ ಸೈಂಟ್ ಜೋರ್ಜ್ ಫೊರೋನ್ ಚರ್ಚ್ ಧರ್ಮಗುರುಗಳಾದ ರೆ|ಫಾ|ಥೋಮಸ್ ಪಾರೆಕಾಟಿಲ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ, ಎಂ.ಮಹೇಶ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ, ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಡುಪಿ, ದ.ಕ ಜಿಲ್ಲೆಯ ನಬಾರ್ಡ್ ಡಿ.ಡಿ.ಎಂ.ಸಂಗೀತ ಕರ್ತ, ರೆ|ಫಾ| ಆಗಸ್ಟಿನ್ ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷರಾದ ದೇವದಾಸ ವಿ.ಜೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ಶರ್ಮ, ನಿರ್ದೇಶಕರಾದ ಸುರೇಂದ್ರ ನಾಯ್ಕ್, ಜೋಷಿ ಪಿ.ಷಿ., ಮಹಾಬಲ ಪೂಜಾರಿ, ಮುತ್ತ, ಮನೋಜ್ ಪಿ.ಜೆ., ನಾರಾಯಣ ಶೆಟ್ಟಿ, ಜೋಸೆಫ್ ಕೆ.ಎಂ., ವಿನೋದ್ ಜೋರ್ಜ್, ಗುರುರಾಜ ಪೂಜಾರಿ, ಶ್ರೀಮತಿ ರೋಸಮ್ಮ, ಶ್ರೀಮತಿ ಸವಿತಾ ಶೆಟ್ಟಿ, ವಲಯ ಮೇಲ್ವಿಚಾರಕರಾಗಿ ಶಿವರಾಮ್ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಬಂಗಾರದ ಜೀನೇಶ್ವರನ ಪ್ರತಿಮೆ ನೀಡುವ ಮೂಲಕ ಗೌರವಿಸಲಾಯಿತು. ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಮಾಜಿ ಯೋಧ, ಸಂಘದ ನಿರ್ದೇಶಕ ಜೋಷಿ ಪಿ.ಪಿ ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣ ಮಾಡಿದ ಸೈಮನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಕ್ಷತ್ರ ನವೋದಯ ಸ್ವಸಹಾಯ ಸಂಘವನ್ನು ಉದ್ಘಾಟಿಸಲಾಯಿತು.

ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಆರ್.ಜೆ ರೇವತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ವಿನೋದ್ ಜೋರ್ಜ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!