spot_img
Saturday, April 18, 2026
spot_img

ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ನವೀಕೃತ ಶಿಲಾದೇಗುಲದ ಲೋಕಾರ್ಪಣೆ: ನೂತನ ವಿಗ್ರಹಗಳ ಪುರ ಪ್ರವೇಶ ಮೆರವಣಿಗೆ

ಗಂಗೊಳ್ಳಿ, ಜ.24: ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ನವೀಕೃತ ಶಿಲಾದೇಗುಲದ ಲೋಕಾರ್ಪಣೆ, ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ ಅಂಗವಾಗಿ ನೂತನ ವಿಗ್ರಹಗಳ ಪುರ ಪ್ರವೇಶ ಮೆರವಣಿಗೆ ಅದ್ದೂರಿಯಾಗಿ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.

ಪುನರ್ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಮಹಾಂಕಾಳಿ ಮತ್ತು ಪರಿವಾರ ದೇವರುಗಳ ನೂತನ ವಿಗ್ರಹಗಳಿಗೆ ಉಪ್ಪುಂದದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಜರಗಿಸಿದ ಬಳಿಕ ತೆರೆದ ವಾಹನದಲ್ಲಿ ವಿಗ್ರಹಗಳನ್ನು ಮೆರವಣಿಗೆ ಮೂಲಕ ಗಂಗೊಳ್ಳಿಗೆ ತರಲಾಯಿತು.

ತ್ರಾಸಿಯಲ್ಲಿ ನೂತನ ವಿಗ್ರಹಗಳನ್ನು ಭಕ್ತಪೂರ್ವಕವಾಗಿ ಸ್ವಾಗತಿಸಿದ ಭಕ್ತಾದಿಗಳು ನಾಯಕವಾಡಿವರೆಗೆ ಬೈಕ್ ರ್‍ಯಾಲಿ ನಡೆಸಿ ಅದ್ದೂರಿ ಸ್ವಾಗತ ನೀಡಿದರು. ನಾಯಕವಾಡಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಕೊಂಕಣಿ ಖಾರ್ವಿ ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ಪುನ: ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಮಹಾಂಕಾಳಿ ಅಮ್ಮನವರ ಹಾಗೂ ಪರಿವಾರ ದೇವರ ನೂತನ ವಿಗ್ರಹಗಳ ಭವ್ಯ ಪುರಮೆರವಣಿಗೆ ನಡೆಸಿದರು. ನಾಯಕವಾಡಿಯಿಂದ ಆರಂಭಗೊಂಡ ಪುರಮೆರವಣಿಗೆಯು ಗಂಗೊಳ್ಳಿಯ ಬಂದರು ಬಸ್ ನಿಲ್ದಾಣದ ತನಕ ಸಾಗಿ ಪುನ: ಮುಖ್ಯರಸ್ತೆ ಮೂಲಕ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನ ತಲುಪಿತು.

ದೇವಳಕ್ಕೆ ಆಗಮಿಸಿದ ನೂತನ ವಿಗ್ರಹಗಳನ್ನು ಋತ್ವಿಜರು ಸ್ವಾಗತಿಸಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಅನ್ನಸಂತರ್ಪಣೆ ಮತ್ತಿತರ ಧಾರ್ಮಿಕ ಅನುಷ್ಠಾನಗಳು ನಡೆಯಿತು. ನೂತನ ವಿಗ್ರಹಗಳ ಪುರ ಪ್ರವೇಶ ಮೆರವಣಿಗೆಯಲ್ಲಿ ಭಕ್ತ ಜನ ಸಾಗರವೇ ಹರಿದು ಬಂದಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪುರುಷರು ಮತ್ತು ಮಹಿಳೆಯರು ಸಮವಸ್ತ್ರ ಧರಿಸಿ ಶಿಸ್ತಬುದ್ಧವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಾದ್ಯ ಘೋಷ, ಚಂಡೆ ವಾದನ, ಕುಣಿತ ಭಜನೆ, ನಾಸಿಕ್ ಬ್ಯಾಂಡ್, ಹುಲಿವೇಷ ಮೊದಲಾದವುಗಳು ಮೆರವಣಿಗೆಯ ಸೊಬಗು ಹೆಚ್ಚಿಸಿತ್ತು.

ದೇವಸ್ಥಾನದ ಪಾತ್ರಿಗಳು, ಆಡಳಿತ ಮಂಡಳಿ ಸದಸ್ಯರು, ಸೇವಾ ಸಮಿತಿ ಸದಸ್ಯರು, ಪಟೇಲರು, ಮುಕ್ತೇಸರರು, ಮಹಿಳಾ ಮಂಡಳಿ ಸದಸ್ಯರು, ಹತ್ತು ಸಮಸ್ತರು, ಭಕ್ತಾದಿಗಳು ಉಪಸ್ಥಿತರಿದ್ದರು.

ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿಯವರ ಅನುಗ್ರಹದಿಂದ ಜ.26ರಂದು ಬೆಳಿಗ್ಗೆ 10.05ಕ್ಕೆ ನಡೆಯುವ ಮೀನ ಲಗ್ನ ಸುಮೂರ್ಹತದಲ್ಲಿ ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ಹಾಗೂ ಪರಿವಾರ ಸಾನ್ನಿಧ್ಯಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!