spot_img
Saturday, April 18, 2026
spot_img

ಐ.ಎಂ.ಜೆ ಇನ್ಸ್ಟಿಟ್ಯೂಷನ್ಸ್, ಮೂಡ್ಲಕಟ್ಟೆಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ದೇಶಭಕ್ತಿ ಓಟ

ಕುಂದಾಪುರ: ಐ.ಎಂ.ಜೆ ಇನ್ಸ್ಟಿಟ್ಯೂಷನ್ಸ್, ಮೂಡ್ಲಕಟ್ಟೆ ವತಿಯಿಂದ ಜ.26ರಂದು 74ನೇ ಗಣರಾಜ್ಯೋತ್ಸವನ್ನು ವಿಶಿಷ್ಟವಾಗಿ ಆಚರಿಸಲಾಗುವುದು. ಗಣರಾಜ್ಯೋತ್ಸವದ ಅಂಗವಾಗಿ ದೇಶಭಕ್ತಿ ಓಟವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಕ್ರೀಡಾ ಸಾಧಕರು ಹಾಗೂ ದೇಶದ ಭದ್ರತಾ ಪಡೆಯ ಯೋಧರು ಪಾಲ್ಗೊಳ್ಳುದವರಿಂದ ವಿದ್ಯಾರ್ಥಿಗಳಿಗೆ ಒಂದು ಮಹತ್ತರ ಸಂದೇಶವನ್ನು ನೀಡುವ ಆಶಯ ಹೊಂದಲಾಗಿದೆ ಎಂದು ಎಂ.ಐ.ಟಿ ಉಪ ಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿಸೋಜ ಹೇಳಿದರು.

ಅವರು ಸೋಮವಾರ ಕುಂದಾಪುರದ ಪ್ರೆಸ್ ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಜ.26ರ ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ ನೆರವೇರಲಿದೆ. ಈ ಸಂದರ್ಭದಲ್ಲಿ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ಸತೀಶ್ ಖಾರ್ವಿಯವರನ್ನು ಸನ್ಮಾನಿಸಲಾಗುವುದು. 9.15ಕ್ಕೆ ದೇಶಭಕ್ತಿಯ ಓಟಕ್ಕೆ ನಮ್ಮ ದೇಶದ ಗಡಿ ಭದ್ರತಾ ಪಡೆಯ ನಿವೃತ್ತ ಯೋಧರಾದ ಗಣಪತಿ ಖಾರ್ವಿಯವರು ಚಾಲನೆ ನೀಡಲಿದ್ದಾರೆ. ಈ ಓಟವು ಮೂಡ್ಲಕಟ್ಟೆ ಕಾಲೇಜಿನ ಆವರಣದಿಂದ ಆರಂಭಗೊಂಡು ಐ.ಎಂ. ಜಯರಾಮ್ ಶೆಟ್ಟಿ, ಸರ್ಕಲನ್ನು ಸುತ್ತುವರಿದು, ಕಾಲೇಜಿನ ಆವರಣಕ್ಕೆ ಮರು ಆಗಮಿಸಲಿದೆ ಎಂದರು.

ಮೂಡ್ಲಕಟ್ಟೆ, ನಾಗರತ್ನ ಭುಜಂಗ ಶೆಟ್ಟಿ ಟ್ರಸ್ಟ್ 1995 ರಲ್ಲಿ ರಚನೆಯಾಯಿತು. ಈ ಟ್ರಸ್ಸಿನ ಸ್ಥಾಪಕರಾದ ಜಯರಾಮಶೆಟ್ಟಿ ಯವರು ಯಶಸ್ವಿ ಉದ್ಯಮಿ ಮತ್ತು ರಾಜಕಾರಣಿಯಾಗಿದ್ದರು. ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಟ್ರಸ್ಟ್ ರಚನೆಯ ಪ್ರಮುಖ ಉದ್ದೇಶವಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡುವ ಸಂಕಲ್ಪದೊಂದಿಗೆ ಮೂಡ್ಲಕಟ್ಟೆ, ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಸ್ಥಾಪಿಸಿದ ಟ್ರಸ್ಟ್ ಇತ್ತೀಚಿನ ವರ್ಷಗಳಲ್ಲಿ ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್, ಮೂಡ್ಲಕಟ್ಟೆ ಕಾಲೇಜು ಆಫ್ ನರ್ಸಿಂಗ್ ಮತ್ತು ವಿದ್ಯಾ ಅಕಾಡೆಮಿ ಸ್ಥಾಪಿಸಿ ಮುನ್ನೆಡೆಸಲಾಗುತ್ತಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಐ‌ಎಂಜೆ‌ಐ‌ಎಸ್‌ಸಿ ಪ್ರಾಂಶುಪಾಲರಾದ ಡಾ.ಪ್ರತಿಭಾ ಎಂ.ಪಟೇಲ್, ಎಂ.ಎನ್.ಸಿ ಪ್ರಾಂಶುಪಾಲರಾದ ಪ್ರೊ.ಜೆನಿಫರ್ ಮೆನೇಜಸ್, ಐ‌ಎಂಜೆ‌ಐ‌ಎಸ್‌ಸಿ ಉಪಪ್ರಾಂಶುಪಾಲರಾದ ಪ್ರೋ.ಜಯಶೀಲ ಕುಮಾರ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!